Sunday, December 22, 2024

Latest Posts

Hubli News: ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಪ್ಲಾಸ್ಟಿಕ್‌ ಮಾರಾಟ

- Advertisement -

Hubli News: ಹುಬ್ಬಳ್ಳಿ: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳ ಬಳಕೆ ಎಗ್ಗಿಲ್ಲದೆ ನಡೆದಿದೆ. ಈ ಹಿಂದೆ ಸರ್ಕಾರ 2016ರ ಮಾ.11ರಿಂದ ಜಾರಿಗೆ ಬರುವಂತೆ ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆ, ಸಾಗಣೆ, ಸಂಗ್ರಹ ಮತ್ತು ಮಾರಾಟ ನಿಷೇಧಿಸಿ ಅಧಿಸೂಚನೆ ಹೊರಡಿಸಿತ್ತು. ಆರಂಭದಲ್ಲಿ ಅಧಿಕಾರಿಗಳ ದಾಳಿ ಮತ್ತು ದಂಡ ಪ್ರಯೋಗದಿಂದಾಗಿ ಪ್ಲಾಸ್ಟಿಕ್‌ ಬಳಕೆ ಹಾವಳಿ ಕಡಿಮೆಯಾಗಿತ್ತು. ಆದರೆ, ಈಗ ಪ್ಲಾಸ್ಟಿಕ್‌ ಬಳಕೆ ವಿಪರೀತವಾಗಿದೆ

ಚಿಲ್ಲರೆ ಮಳಿಗೆಗಳು, ಹೂವು, ಹಣ್ಣು, ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿಗಳು, ಔಷಧದ ಅಂಗಡಿ, ಬೇಕರಿಗಳು, ಮಾಂಸ ಮಾರಾಟದ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕೈಚೀಲಗಳ ಬಳಕೆ ನಡೆಯುತ್ತಿದೆ. ಗ್ರಂಥಿಕೆ ಅಂಗಡಿಗಳು ಸಹ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ನೀಡುತ್ತಿವೆ. ಸಗಟು ಮಳಿಗೆಗಳ ಮಾಲೀಕರು ಯಾವುದೇ ಅಂಜಿಕೆಯಿಲ್ಲದೆ ಪ್ಲಾಸ್ಟಿಕ್‌ ಕೈಚೀಲ, ತಟ್ಟೆ, ಲೋಟಗಳ ಮಾರಾಟ ಮಾಡುತ್ತಿದ್ದಾರೆ ಎಂದು ಹುಬ್ಬಳ್ಳಿಯ ನಿವಾಸಿಗಳು ದೂರುತ್ತಾರೆ.

ಯಾವುದೇ ಗ್ರಾಹಕ ಇರಲಿ ಆತನ ಕೈಯಲ್ಲಿ ಪ್ಲಾಸ್ಟಿಕ್‌ ಚೀಲ ಇರದೇ ಮನೆಯತ್ತ ಮುಖ ಮಾಡಲಾರ. ರಸ್ತೆ ಬದಿ ಹೂವು, ಹಣ್ಣಿನ ವ್ಯಾಪಾರಿಗಳು ಕೂಡ ಪ್ಲಾಸ್ಟಿಕ್‌ ಕವರ್‌ ಇಲ್ಲದೆ ಖರೀದಿಗೆ ಇಳಿಯಲಾರದಂತಹ ಪರಿಸ್ಥಿತಿಯಿದೆ ಎಂದು ನಿವಾಸಿಗಳು ಹೇಳುತ್ತಾರೆ.

ಪ್ಲಾಸ್ಟಿಕ್‌ ನೀಡದೆ ಹೋದರೆ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಪ್ಲಾಸ್ಟಿಕ್‌ ನೀಡಿದರೆ ದಂಡ ಕಟ್ಟಬೇಕಾಗುತ್ತದೆ. ನಮ್ಮ ಅಂಗಡಿಯಲ್ಲಿ ಕೊಟ್ಟಿಲ್ಲ ಎಂದರೆ ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಾರೆ. ಪ್ಲಾಸ್ಟಿಕ್‌ ನಿಷೇಧವಾಗಿದೆ ಎಂದು ಹೇಳಿದರೆ ಗಲಾಟೆ ಮಾಡಲು ಆರಂಭಿಸುತ್ತಾರೆ. ಹೀಗಾಗಿ ಪ್ಲಾಸ್ಟಿಕ್‌ ನಿಷೇಧ ಮತ್ತು ಅದರ ಬಳಕೆ ಅಪಾಯದ ಬಗ್ಗೆ ಜನರಿಗೆ ಸಾಕಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಕ್ಕಿ ಹೊಂಡ್ ದುರ್ಗದ ಬೈಲ್ ಕಿರಾಣಿ ಅಂಗಡಿ ವ್ಯಾಪಾರಿಗಳು ದೂರುತ್ತಾರೆ.

ಗುಜರಾತ್‌ನಿಂದ ಕ್ಯಾರಿಬ್ಯಾಗ್‌ಗಳ ರವಾನೆ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಹುಬ್ಬಳ್ಳಿ ಸಿಟಿಯ ಹೊರ ಮತ್ತು ಒಳಗೆ ಅಕ್ರಮವಾಗಿ ಉತ್ಪಾದಿಸುತ್ತಿರುವ ಪ್ಲಾಸ್ಟಿಕ್‌ ಘಟಕಗಳು ಗೊತ್ತಿದರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಆದರೆ ನಗರದಲ್ಲಿ ಉತ್ಪಾದನೆ ಆಗುವುದಕ್ಕಿಂತ ಅಧಿಕ ಸಂಖ್ಯೆಯಲ್ಲಿ ಹೊರ ರಾಜ್ಯಗಳಿಂದ ವಾಣಿಜ್ಯ ನಗರಿಗೆ ಪೂರೈಕೆ ಆಗುತ್ತಿರುವುದು ದೊಡ್ಡ ಅಧಿಕಾರಿಗಳಿಗೆ ಗೊತ್ತಿದ್ದರು ದೊಡ್ಡದಾಗಿ ತೆಗೆದುಕೊಂಡು ಸುಮ್ಮನೇ ಕುಳಿತುಕೊಳ್ಳುತ್ತಾರೆ. ಗುಜರಾತಿನಿಂದ ರಾಜ್ಯಕ್ಕೆ ಪ್ರವೇಶಿ ಸುತ್ತಿರುವ ಕ್ಯಾರಿಬ್ಯಾಗ್‌ಗಳು ಪ್ಲಾಸ್ಟಿಕ್‌ ಹಾವಳಿಗೆ ಕಾರಣವಾಗಿದೆ.

ಹುಬ್ಬಳ್ಳಿಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲೇ ಪ್ಲಾಸ್ಟಿಕ್‌ ಬಳಕೆ ಅಧಿಕವಿದೆ. ಗ್ರಾಹಕರು ಎಲ್ಲೆಂದರಲ್ಲಿ ಬೀಸಾಡುವ ಕಾರಣ ಅವು ಮಳೆ ಬಂದಾಗ ಚರಂಡಿಯಲ್ಲಿ ನೀರು ತುಂಬಿ ಉಕ್ಕಿಹರಿಯಲು ಕೂಡ ಕಾರಣವಾಗುತ್ತದೆ. ಈ ಬಗ್ಗೆ ಜನರು ಕೂಡ ಎಚ್ಚೆತ್ತುಕೊಳ್ಳಬೇಕು.

ಇಷ್ಟಾದರೂ ಕೂಡ ಪಾಲಿಕೆ ಅಧಿಕಾರಿಗಳು ಕ್ರಮತೆಗೆದುಕೊಳ್ಳದೆ ಹೋದರೆ ನಮ್ಮ ವಾಹಿನಿಯು ಈ ಸುದ್ದಿಯನ್ನು ನಿರಂತರವಾಗಿ ಸುದ್ದಿ ಬಿತ್ತರಿಸುತ್ತೆ.

ಸಿಎಂ ರಾಜೀನಾಮೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹ..!

ಧಾರವಾಡ ಪ್ರವೇಶಕ್ಕೆ ಮತ್ತೆ ಅನುಮತಿ ಕೋರಿದ್ದ ಶಾಸಕ ವಿನಯ್ ಕುಲಕರ್ಣಿ ಅರ್ಜಿ ವಜಾ

ಲಾಡ್ ಗೆ ಮಾತಿನಲ್ಲೇ ಪ್ರಹ್ಲಾದ ಜೋಶಿ ಲಾಟಿ ಚಾರ್ಜ್: ಕಾಂಗ್ರೆಸ್ ವಿರುದ್ಧ ಕಿಡಿ..!

- Advertisement -

Latest Posts

Don't Miss