Hubli News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ಶಶಿಕುಮಾರ್ ನಿನ್ನೆ ಅಧಿಕಾರ ಸ್ವೀಕರಿಸಿದ್ದು, ಇಂದು ಪುಂಡರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಹುಬ್ಬಳ್ಳಿ ಆಯುಕ್ತರ ಕಚೇರಿಯಲ್ಲಿ ಮಾತನಾಡಿದ ಶಶಿಕುಮಾರ್, ಡ್ರಗ್ಸ್, ಗಾಂಜಾ ಸೇರಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುತ್ತೇನೆ. ಅವಳಿನಗರದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಶ್ರಮ ಪಡ್ತೇವೆ. ಹುಬ್ಬಳ್ಳಿ ಧಾರವಾಡ ವಾಣಿಜ್ಯ ನಗರಿ ಹಾಗೂ ಶಿಕ್ಷಣಕಾಶಿ. ಅವಳಿನಗರದ ಘಟನೆಗಳು ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿವೆ. ನಾನು, ನಮ್ಮ ಇಲಾಖೆ ತಂಡವಾಗಿ ಸಾರ್ವಜನಿಕ ರಕ್ಷಣೆಗಾಗಿ ಕೆಲಸ ಮಾಡ್ತೇವೆ. ಸಾರ್ವಜನಿಕ ನೆಮ್ಮದಿ ಹಾಳು ಮಾಡುವ 1% ಜನರಿಗಾಗಿ ಕಾಂಪ್ರುಮೈಸ್ ಮಾಡಿಕೊಳ್ಳಲಾಗೋದಿಲ್ಲ. ಸಾರ್ವಜನಿಕ ನೆಮ್ಮದಿ ಭಂಗಗೊಳಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತೆ ಎಂದಿದ್ದಾರೆ.
ಈ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಘಟನೆಗಳ ಬಗ್ಗೆ ನಾನು ಮಾಹಿತಿ ಪಡೆದಿದ್ದೇನೆ. ಈ ಹಿಂದೆ ಇಲ್ಲಿ ಕೆಲಸ ನಿರ್ವಹಿಸಿದ್ದ ಹಿರಿಯ ಅಧಿಕಾರಿಗಳ ಸಲಹೆ ಪಡೆದುಕೊಂಡಿದ್ದೇನೆ. ಸೂಕ್ಷ್ಮ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಡ್ರಗ್ ಅಡಿಕ್ಷನ್ ಅನ್ನೋದು ಮರಕ್ಕೆ ಗೆದ್ದಿಲು ಹತ್ತಿದಂತೆ. ವಿದ್ಯಾರ್ಥಿಗಳು, ನೌಕರರು ಗಾಂಜಾ ಚಟಕ್ಕೆ ಬಿದ್ದಿದ್ದಾರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತೆ. ಯುವ ಸಮೂಹವನ್ನು ದಾರಿ ತಪ್ಪಿಸುವ ಕೆಲಸ ಈ ಡ್ರಗ್ ಮಾಡುತ್ತೆ. ಬಸ್, ರೈಲು ಗಳಲ್ಲೂ ಸಾಗಣೆ ಮಾರಾಟ ಮಾಡಲಾಗುತ್ತೆ. ಹುಬ್ಬಳ್ಳಿ ಧಾರವಾಡದಲ್ಲಿ ಬೇರೆ ಕಡೆಗಳ ಜನರು ಬಂದು ನೆಲೆಸಿದ್ದಾರೆ ಎಂದರು.
ಕೋಮು ಸೌಹಾರ್ದತೆ ಕಾಪಾಡೋದು ಪ್ರತಿಯೊಬ್ಬರ ಜವಾಬ್ದಾರಿ. ಮುಂಜಾಗ್ರತೆಯಿಂದ ಅದನ್ನ ಹುಡುಕೋದು ಪೊಲೀಸ್ ಇಲಾಖೆ ಜವಾಬ್ದಾರಿ. ಕೆಲ ಕಿಡಿಗಳಿಂದಾಗುವ ಕೋಮು ಸಂಘರ್ಷಕ್ಕೆ ಸಾರ್ವಜನಿಕರಿಗೆ ತೊಂದ್ರೆ ಆಗುತ್ತೆ. ಸಂಚಾರ ನಿರ್ಬಂಧ, 144 ಸೆಕ್ಷನ್ ಜಾರಿ ಮಾಡಿದಾಗ ಸಮಸ್ಯೆ ಆಗುತ್ತೆ. ಹುಬ್ಬಳ್ಳಿ ಧಾರವಾಡದ ಪ್ರತಿಯೊಬ್ಬರ ಜೊತೆ ಪೊಲೀಸ್ ಇಲಾಖೆ ಇದೆ. ಯಾವುದೇ ಮಾಹಿತಿ ಬಂದ್ರು 112 ಗೆ ಕರೆ ಮಾಡಿ ಮಾಹಿತಿ ನೀಡಿ.
ಡ್ರಗ್ಸ್, ಆಯುಧ ಹಾಗೂ ಸಾರ್ವಜನಿಕರಿಗೆ ಭಯ ಉಂಟು ಮಾಡೋ ಕೆಲಸಕ್ಕೆ ಕಡಿವಾಣ ಹಾಕ್ತೀವೆ. ಕೋಮು ಸೌಹಾರ್ದ ಕಾಪಾಡಲು ಯಾರ್ಯಾರಿಗೆ ಭೇಟಿ ಆಗಬೇಕೋ ನಾನು ಆಗ್ತೀನಿ. ನಮ್ಮ ಇಲಾಖೆ ಸೈಬರ್ ಕ್ರೈಮ್ ಗೆ ಕೊಡ್ತಿರೋ ಆದ್ಯತೆ ಮೇಲೆ ಎಷ್ಟು ಹೆಚ್ಚಾಗ್ತಿದೆ ತಿಳಿದುಕೊಳ್ಳಬೇಕು. ಅದಕ್ಕಾಗಿ ಪ್ರತ್ಯೇಕ ಪೊಲೀಸ್ ಠಾಣೆಗಳನ್ನು ಮಾಡಲಾಗಿದೆ. ಎಸಿಪಿ ಶ್ರೇಣಿಯ ಅಧಿಕಾರಿಗಳನ್ನು ನಿಯೋಜನೆ ಮಾಡ್ತಾರೆ. ನೂರಕ್ಕಿಂತ ಹೆಚ್ಚು ಅಪರಾಧಗಳು ಈಗಾಗಲೇ ಆಗಿವೆ. ಒಂದು ಠಾಣೆಯಲ್ಲಿ ಒಂದು ವರ್ಷಕ್ಕೆ ಆಗುವ ಅಪರಾಧ ಕೃತ್ಯಗಳು ಮೂರೇ ತಿಂಗಳಲ್ಲಿ ಆಗಿ ಬಿಡುತ್ತೆ.
ನಮ್ಮ ಸಿಬ್ಬಂದಿಗೆ ತರಬೇತಿ ಹಾಗೂ ಸಾರ್ವಜನಿಕರಿಗೆ ಜಾಗೃತಿ ಅವಶ್ಯಕತೆ ಇದೆ. ಆನ್ಲೈನ್ ಟ್ರಾನ್ಸಕ್ಷನ್ ಮಾಡುವಾಗ ಹುಷಾರಾಗಿ ಮಾಡಬೇಕು. ಅದರಲ್ಲಿ ಹೆಚ್ಚಾಗಿ ಹಿರಿಯರು ಈ ವಂಚನೆಗೆ ಒಳಗಾಗ್ತಾರೆ. ರಾಜ್ಯದಲ್ಲಿ ಎಲ್ಲಾ ಕಡೆಗಳಲ್ಲಿ ವಾಹನ ದಟ್ಟನೆ ಹೆಚ್ಚಾಗಿದೆ. ಹಿಂದಿನ ಅಧಿಕಾರಿಗಳು ತೆಗದುಕೊಂಡ ಕ್ರಮದ ಬಗ್ಗೆ ಮಾಹಿತಿ ಪಡಿತೇನೆ. ಧಾರವಾಡದಲ್ಲಿ 1 ಹಾಗೂ ಹುಬ್ಬಳ್ಳಿಯಲ್ಲಿ 3 ಸಂಚಾರಿ ಠಾಣೆಗಳಿವೆ. ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ಮಾಡಿ ಮುಂದುವರಿತ್ತೇವೆ ಎಂದಿದ್ದಾರೆ.