Friday, July 11, 2025

Latest Posts

ಅಧಿಕಾರ ವಹಿಸಿಕೊಂಡ ದಿನವೇ ಮಧ್ಯರಾತ್ರಿ ಠಾಣೆಗಳಿಗೆ ವಿಸಿಟ್ ಕೊಟ್ಟ ಕಮಿಷನರ್ ಎನ್.ಶಶಿಕುಮಾರ್

- Advertisement -

Hubli News: ಹುಬ್ಬಳ್ಳಿ : ಹು-ಧಾ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ ದಿನವೇ ಕಮಿಷನರ್ ಎನ್ ಶಶಿ ಕುಮಾರ ನಗರದಲ್ಲಿನ ಕೆಲವು ಪೊಲೀಸ್ ಠಾಣೆಗಳಿಗೆ ಸರ್ಪೈಸ್ ವಿಸೀಟ್ ಕೊಟ್ಟು. ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ವೀಕ್ಷಣೆ ಮಾಡಿದ್ದಾರೆ.

ಎನ್ ಶಶಿಕುಮಾರ್ ಅವರು ನಿನ್ನೇ (ಬುಧವಾರ) ಬೆಂಗಳೂರಿನಿಂದ ಹುಬ್ಬಳ್ಳಿಗೆ ರಸ್ತೆ ಮಾರ್ಗದ ಮೂಲಕ ಆಗಮಿಸಿ, ಸಂಜೆ 8 ಗಂಟೆಗೆ ನವನಗರದಲ್ಲಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಅಧಿಕಾರ ಸ್ವೀಕಾರ
ಮಾಡಿ.ಅವಳಿ ನಗರದ ಪೊಲೀಸ್ ಅಧಿಕಾರಿಗಳ ಪರಿಚಯ ಮಾಡಿಕೊಂಡು ನಗರದ ವಸ್ತು ಸ್ಥಿತಿಯ ಮಾಹಿತಿಯನ್ನು ಪಡೆದಿದ್ದರು.

ಇದೆಲ್ಲವನ್ನು ಮುಗಿಸಿದ ಕಮಿಷನರ್ ಎನ್ ಶಶಿ ಕುಮಾರವರು ಮಧ್ಯರಾತ್ರಿ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆ ಹಾಗೂ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಗೆ ಸರ್ಪೈಸ್ ವಿಸೀಟ್ ನೀಡಿದ್ದಾರೆ. ಸದ್ಯ 400 ಕಿಲೋಮೀಟರ್ ಪ್ರಯಾಣ ಮಾಡಿ ಅಧಿಕಾರ ಸ್ವೀಕಾರ ಮಾಡಿದ ನಂತರದಲ್ಲಿ ವಿಶ್ರಾಂತಿ ಪಡೆಯದೇ ನಡುರಾತ್ರಿ ರೌಂಡ್’ಅಪ್ ಹಾಕಿದ ಕಮಿಷನರ್ ಕಾರ್ಯಕ್ಕೆ ಅವಳಿ ನಗರದ ಸಾರ್ವಜನಿಕರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss