ಜ್ಞಾನಸುಧಾ ಶಿಕ್ಷಣ ಸಂಸ್ಥೆ ವಿಶೇಷತೆಗಳ ಬಗ್ಗೆ ಡಾ.ಸುಧಾಕರ್ ಶೆಟ್ಟಿ ಮಾತು

Special News: ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಆದಂಥ ಡಾ.ಸುಧಾಕರ್ ಶೆಟ್ಟಿ, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಈ ಶಿಕ್ಷಣ ಸಂಸ್ಥೆಯ ವಿಶೇಷತೆ ಬಗ್ಗೆ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯವರಾದ ಸುಧಾಕರ್ ಶೆಟ್ಟಿಯವರು ಮೂಲತಃ ಶ್ರೀಮಂತರೇನಲ್ಲ. ಅವರು ಕೂಡ ಸಾಲ ಮಾಡಿ, ಕಾಲೇಜು ಕಲಿಯುವ ಪರಿಸ್ಥಿತಿಯನ್ನು ದಾಟಿ ಬಂದವರು. ಅಂಥವರಿಗೆ ತಾನೊಂದು ಶಾಲೆ ನಿರ್ಮಿಸಬೇಕು. ಆ ಶಾಲೆಯಲ್ಲಿ ಸಾವಿರಾರು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕು ಅನ್ನುವ ಆಸೆ ಇತ್ತು.

ಹಾಗಾಗಿ ಪಿಹೆಚ್‌ಡಿ ಮಾಡಿದ ಸುಧಾಕರ್ ಅವರು, ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಪ್ರಯತ್ನಪಟ್ಟರು. ಅಧ್ಯಾಪಕನಾಗಿ ಹಲವು ಕಾಲೇಜುಗಳಲ್ಲಿ ಕೆಲಸ ಮಾಡಿದರು. ಬಳಿಕ ಮಕ್ಕಳ ಮನಸ್ಸನ್ನು ಅರಿತ ಡಾ. ಸುಧಾಕರ್ ಶೆಟ್ಟಿ, ತಾನೊಂದು ಶಾಲೆ ನಿರ್ಮಿಸಲೇಬೇಕು ಎಂದು ನಿರ್ಧರಿಸಿದರು. ತಮ್ಮ ಕನಸನ್ನು ನಿಧಾನವಾಗಿ ಕಾರ್ಯರೂಪಕ್ಕೆ ತರಲಾರಂಭಿಸಿದರು.

ಸಣ್ಣ ಸಂಸ್ಥೆ ಮಾಡಿ, ಎಷ್ಟು ಸಾಧ್ಯವೋ ಅಷ್ಟು ಮಕ್ಕಳಿಗೆ, ತಮ್ಮದೇ ರೀತಿಯಲ್ಲಿ ಶಿಕ್ಷಣ ನೀಡಲು ಆರಂಭಿಸಿದರು. 2011ರಲ್ಲಿ ಈ ಜ್ಞಾನಸುಧಾ ಕಾಲೇಜು ಶುರುವಾಯಿತು. ಕಾರ್ಕಳದಲ್ಲಿರುವ ಈ ಕಾಲೇಜಿಗೆ ಸಾವಿರಾರು ವಿದ್ಯಾರ್ಥಿಗಳು ಸೇರಬೇಕು, ಉತ್ತಮ ವಿದ್ಯಾಭ್ಯಾಸ ಪಡೆಯಬೇಕು ಎಂದು ಪ್ರಯತ್ನಿಸುತ್ತಾರೆ. ಆದರೆ, ಕೆಲವೇ ಕೆಲವು ವಿದ್ಯಾರ್ಥಿಗಳಿಗಷ್ಟೇ ಇಲ್ಲಿ ಅಡ್ಮಿಷನ್ ಸಿಕ್ಕಿದೆ.

ವಿದ್ಯಾರ್ಥಿಗಳು ಕಲಿಯುವುದರಲ್ಲಿ ಜಾಣರಾಗಿದ್ದು, ಹೆಚ್ಚು ಅಂಕ ಗಳಿಸಿದರೆ, ಅಂಥವರಿಗೆ ಇಲ್ಲಿ ಸೀಟ್ ಸಿಗುವುದು ಗ್ಯಾರಂಟಿ. ಅಷ್ಟೇ ಅಲ್ಲದೇ, ಇಲ್ಲಿನ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಮೆಡಿಕಲ್ ಸೀಟ್ ಗಿಟ್ಟಿಸಿಕೊಂಡಿದ್ದಾರೆ. ಈ ಕಾಲೇಜಿನ ವಿಶೇಷತೆಗಳೇನು ಅಂತಾ ನೀವು ಸಂಸ್ಥೆಯ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರಿಂದಲೇ ಕೇಳಿ.

About The Author