ಧಾರವಾಡದಲ್ಲಿ ಡೆಂಗ್ಯೂ ಭೀತಿ ಹಿನ್ನೆಲೆ: ಡಿಸಿ ದಿವ್ಯ ಪ್ರಭು ನೇತೃತ್ವದಲ್ಲಿ ಜಾಗೃತಿ

Dharwad News: ಧಾರವಾಡ: ಧಾರವಾಡದಲ್ಲಿ ಡೆಂಗ್ಯೂ ಭೀತಿ ಹಿನ್ನೆಲೆ, ಡಿಸಿ ದಿವ್ಯಾ ಪ್ರಭು ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಗಿದೆ.

ಈ ವೇಳೆ ಮಾಧ್ಯಮಗಳಿಗೆ ಡಿಸಿ ದಿವ್ಯ ಪ್ರಭು ಹೇಳಿಕೆ ನೀಡಿದ್ದು, ಈಗಾಗಲೇ ಡೆಂಗ್ಯೂ ನ ಲಾರ್ವಾ ಎಲ್ಲೆಲ್ಲಿ ಉತ್ಪಾದನೆ ಆಗುತ್ತೆ ಅದನ್ನ ನಾವು ನಿಯಂತ್ರಣ ಮಾಡುತ್ತಿದ್ದೇವೆ. 2016 ಟೆಸ್ಟಿಂಗ್‌ಗಳಲ್ಲಿ 254 ಕೇಸ್ ಗಳು ಪಾಸಿಟಿವ್ ಬಂದಿವೆ. ಇದು ಜನವರಿಯಿಂದ ಇಲ್ಲಿಯವರೆಗೆ ಆಗಿರುವ ಟೆಸ್ಟಿಂಗ್.

3 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಡೆಂಗ್ಯೂಗೆ ಒಂದು ಮಗು ಸಾವಾಗಿದೆ. ಉಳಿದವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಪ್ರತಿ ದಿನ ಎಲ್ಲಾ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಮಾಡುತ್ತಿದ್ದೇವೆ. ನಮಗೆ ಕಿಟ್‌ನ ಕೊರತೆ ಸದ್ಯಕ್ಕೆ ಇಲ್ಲ. ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಆದರೂ ಸಹ ಅವರ ಬಳಿಯಿಂದ ಮಾಹಿತಿ ಪಡೆಯುತ್ತಿದ್ದೇವೆ ಎಂದು ಡಿಸಿ ದಿವ್ಯಪ್ರಭು ಹೇಳಿಕೆ ನೀಡಿದ್ದಾರೆ.

About The Author