Friday, November 22, 2024

Latest Posts

Brain eating amoeba : ಭಾರತಕ್ಕೆ ಮಾರಾಕ ಕಾಯಿಲೆ ಎಂಟ್ರಿ!: ಏನಿದು ಮೆದುಳು ತಿನ್ನುವ ಅಮೀಬಾ?

- Advertisement -

ಕೇರಳ: ಇದೀಗ ತಾನೇ ಮಾಹಾಮಾರಿ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಭಾರತಕ್ಕೆ ಮತ್ತೊಂದು ಮಾರಕ ಕಾಯಿಖೆ ಎಂಟ್ರಿಕೊಟ್ಟಿದೆ. ಈ ಕಾಯಿಲೆ ಏನಾದ್ರೂ ಬಂದ್ರೆ, ಐದು ದಿನದೊಳಗೆ ಸಾವನ್ನಪ್ಪುದು ಪಕ್ಕಾ ಎನ್ನಲಾಗಿದೆ. ಭಾರತದಲ್ಲಿ ಅಷ್ಟಾಗಿ ಸುದ್ದಿ ಮಾಡದ ʻಮೆದುಳು ಮೆಲ್ಲುವ ಅಮೀಬಾʼ ಅಥವಾ ಮೆದುಳನ್ನು ತಿನ್ನುವ ಅಮೀಬಾ ಪ್ರಕರಣಗಳು, ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ.

ಕೇರಳದ ಕೋಝಿಕ್ಕೋಡ್‌ನಲ್ಲಿ ಮೆದುಳು ತಿಂದು 14 ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣ ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ ಈ ಬಾಲಕನೊಬ್ಬ ಕೆರೆಯಲ್ಲಿ ಸ್ನಾನ ಮಾಡಲು ತೆರಳಿದ್ದ, ನಂತರ ಸೋಂಕು ತಗುಲಿ ಸಾವನ್ನಪ್ಪಿದ್ದಾನೆ.
2024ರ ಮೇ ನಂತರ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದಿಂದ ಸಾವನ್ನಪ್ಪಿದ ಮೂರನೇ ಪ್ರಕರಣ ಇದಾಗಿದೆ. ಮೊದಲ ಪ್ರಕರಣವು ಮೇ 21 ರಂದು ಬೆಳಕಿಗೆ ಬಂದಿದ್ದು, ಇದರಲ್ಲಿ ಮಲಪ್ಪುರಂ ಮೂಲದ ಐದು ವರ್ಷದ ಬಾಲಕಿ ಸಾವನ್ನಪ್ಪಿದ್ದಳು. ಎರಡನೇಯ ಪ್ರಕರಣ ಜೂನ್ 25 ರಂದು ಕಣ್ಣೂರಿನಲ್ಲಿ ನಡೆದಿದ್ದು, ಇದರಲ್ಲಿ 13 ವರ್ಷದ ಬಾಲಕಿ ಸಾವನ್ನಪ್ಪಿದ್ದಳು.

ನೀರಿನಲ್ಲಿರುವ ಈ ಏಕಕೋಶ ಜೀವಿಯು ಮೂಗಿನ ಮೂಲಕ ದೇಹ ಪ್ರವೇಶಿಸಿದರೆ ಆ ಮನುಷ್ಯ 97ರಷ್ಟು ಪ್ರತಿಶತ ಉಳಿಯುವ ಸಾಧ್ಯತೆಯಿಲ್ಲ ಎನ್ನುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ನೇಗ್ಲೇರಿಯಾ ಫೌಲೆರಿ ಎಂದು ಕರೆಯಲ್ಪಡುವ ಈ ವಿಶೇಷ ರೀತಿಯ ಅಪಾಯಕಾರಿ ಸೂಕ್ಷ್ಮಾಣುವನ್ನು ಸ್ವತಂತ್ರ ಜೀವಿ ಎಂದು ಕೂಡ ಕರೆಯುತ್ತಾರೆ. ಸಾಮಾನ್ಯವಾಗಿ ಕಲುಷಿತ ನೀರಿನಲ್ಲಿ ವಾಸಿಸುವ ಈ ಸೂಕ್ಷ್ಮಾಣು ಜೀವಿ ನದಿಗಳು, ಸರೋವರಗಳು, ಕೊಳಗಳು, ಹೊಳೆ, ಬಾವಿ ಮತ್ತು ಕೆರೆಯಂಥ ಯಾವುದೇ ರೀತಿಯ ನೀರಿನಲ್ಲಿ ಇದು ಇರಬಹುದು. ಇದಕ್ಕೆ ಬದುಕುವುದಕ್ಕೆ ಯಾವುದೇ ನಿಶ್ಚಿತವಾದ ಆಶ್ರಯ ಬೇಕಿಲ್ಲ, ಎಲ್ಲಿ ಬೇಕಿದ್ದರೂ ಇದನ್ನು ಕಾಣಬಹುದು. ವಾತಾವರಣ ಬೆಚ್ಚಗಿದ್ದಾಗ, ನೀರು ಸಹ ಬೆಚ್ಚಗಿದ್ದಾಗ ಈ ಅಮೀಬಾ ಚುರುಕಾಗುತ್ತವೆ.

ತೀವ್ರ ಜ್ವರ, ಅತೀವ ತಲೆನೋವು, ವಾಂತಿ ಅಥವಾ ಹೊಟ್ಟೆ ತೊಳೆಸುವುದು, ನಡುಕ, ಕುತ್ತಿಗೆ ಗಡುಸಾಗುವುದು, ಬೆಳಕು ನೋಡಲು ಕಷ್ಟವಾಗುವುದು ಈ ರೋಗದ ಲಕ್ಷಣವಾಗಿವೆ. ಈ ಅಮೀಬಾ ಮೂಗು ಪ್ರವೇಶಿಸಿದ ಮೇಲೆ, ಲಕ್ಷಣಗಳು ಕಾಣುವುದಕ್ಕೆ 2-15 ದಿನಗಳವರೆಗೆ ತೆಗೆದುಕೊಳ್ಳಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿದ ದಾಖಲೆಯೂ ಇಲ್ಲ. ಇದು ಮೂಗಿನ ಮೂಲಕವೇ ಪ್ರವೇಶಿಸಬೇಕು. ಒಮ್ಮೆ ಲಕ್ಷಣಗಳು ಕಾಣಿಸಿದ ಮೇಲೆ 7-10 ದಿನಗಳ ಒಳಗೆ ಸೋಂಕಿತರು ಮರಣಿಸಿದ ಪ್ರಕರಣಗಳೇ ಹೆಚ್ಚು. ಇದರಿಂದ ಚೇತರಿಸಿಕೊಂಡವರು ಅತಿ ವಿರಳ.

ಸೊಂಕು ಬಂದ ನಂತರ ಇದನ್ನು ತಡೆಗಟ್ಟಬಹುದೇ ಎಂದು ನೋಡುವುದಾದರೆ ಅದು ಸಾಧ್ಯವಿಲ್ಲ. ಒಮ್ಮೆ ಸೋಂಕು ಬಂದ ಮೇಲೆ ಹೆಚ್ಚೇನೂ ಮಾಡಲಾಗದು, ಇದಕ್ಕೆ ಲಸಿಕೆಯೂ ಲಭ್ಯವಿಲ್ಲ. ಆದರೆ ನೀರಿನ ವಿಷಯದಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ, ಕೊಳಕಾದ ನೀರನ್ನು ಉಪಯೋಗಿಸದೆ ಸುಚಿಯಾದ ನೀರಿನಲ್ಲಿ ಈಜು ಅಥವಾ ಸ್ನಾನ ಮಾಡುವುದರಿಂದ ಈ ಸೊಂಕು ಹತ್ತಿರವೂ ಸುಳಿಯದಂತೆ ಬದುಕಲು ಸಾಧ್ಯವಿದೆ.

- Advertisement -

Latest Posts

Don't Miss