ಗದಗ ಜಿಲ್ಲೆಯಲ್ಲಿ ಡೆಂಘಿಗೆ ಮೊದಲ ಬಲಿ: 5 ವರ್ಷದ ಬಾಲಕ ಸಾವು

Gadag ಗದಗ: ಗದಗ ಜಿಲ್ಲೆಯಲ್ಲಿ ಡೆಂಘೀಗೆ ಮೊದಲ ಬಲಿಯಾಗಿದೆ. ಡೆಂಘೀ ಬಂದು, ಚಿಕಿತ್ಸೆ ಫಲಿಸದೇ, 5 ವರ್ಷದ ಬಾಲಕ ಚಿರಾಯಿ ಹೊಸಮನಿ ಸಾವನ್ನಪ್ಪಿದ್ದಾನೆ.

ಗದಗ ತಾಲೂಕಿನ ಶಿರುಂಜ ಗ್ರಾಮದ ಬಾಲಕ, ಚಿರಾಯಿಗೆ ಡೆಂಘೀ ಬಂದು, ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್‌ಡಿಎಂ ಆಸ್ಪತ್ರೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ, ಬಾಲಕ ಸಾವನ್ನಪ್ಪಿದ್ದಾನೆ.

ಡೆಂಘೀ ಪ್ರಕರಣ ಏರಿಕೆ ಹಿನ್ನೆಲೆ, ಧಾರವಾಡ ಗ್ರಾಮೀಣ ಹಾಗೂ ನವಲಗುಂದ ತಾಲೂಕಿನ ಭಾಗಗಳಲ್ಲಿ ಎಚ್ಚರಿಕೆ ನೀಡಲಾಗಿದೆ.  ಸೊಳ್ಳೆಗಳು ಹರಡದಂತೆ ಫಾಗಿಂಗ್ ಕಾರ್ಯ ಚುರುಕುಗೊಳಿಸಲಾಗಿದೆ.  ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೊಳ್ಳೆ ನಿಯಂತ್ರಣ ಕಾರ್ಯ ಮಾಡಲಾಗಿದೆ.  ಗ್ರಾಮ ಪಂಚಾಯತಿ ವತಿಯಿಂದ ಫಾಗಿಂಗ್ ಮೂಲಕ ಗ್ರಾಮದಲ್ಲಿ ಸೊಳ್ಳೆ ತಡೆಗಟ್ಟುವಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ದಾಖಲಾದ ಕಾರಣಕ್ಕೆ, ಪ್ರತಿ ಗ್ರಾಮಗಳಲ್ಲೂ ಫಾಗಿಂಗ್ ಮೂಲಕ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

About The Author