Tuesday, October 14, 2025

Latest Posts

ಶಾಲೆ – ಕಾಲೇಜು ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಕಮಿಷನರ್ ಶಶಿಕುಮಾರ್ ಭೇಟಿ – ಮುಖ್ಯಸ್ಥರ ಜೊತೆ ಸಭೆ

- Advertisement -

Hubli News: ಹುಬ್ಬಳ್ಳಿ: ಅವಳಿ ನಗರಕ್ಕೆ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಶಶಿ ಕುಮಾರ್ ಅವರು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಹಾಗೂ ಧಾರ್ಮಿಕ ಕೇಂದ್ರ ಸ್ಥಳಗಳಿಗೆ ಭೇಟಿ ನೀಡಿ ಸುರಕ್ಷತೆ ದೃಷ್ಟಿಯಿಂದ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿದರು.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ, ವಿದ್ಯಾನಗರದಲ್ಲಿ BVB ಕಾಲೇಜು, SDM ವೈದ್ಯಕೀಯ ಕಾಲೇಜು, ಮೂರು ಸಾವಿರ ಮಠ, ಹಳೇ ಹುಬ್ಬಳ್ಳಿಯ ಪಥೇಶಾ ದರ್ಗಾ, ಕೇಶ್ವಾಪುರದಲ್ಲಿನ ಶಾಂತಿ ನಗರದ ಚರ್ಚ್‌ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಒಳ ಮತ್ತು ಹೊರಾಂಗಣದಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಕುರಿತು ಚರ್ಚೆಯನ್ನು ನಡೆಸಿದರು.

ಇನ್ನು ಧಾರ್ಮಿಕ ಮುಖ್ಯಸ್ಥರುಗಳ ಜೊತೆ ಜಾತ್ರೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಭದ್ರತೆಗಾಗಿ ಪೊಲೀಸ್ ನಿಯೋಜನೆ ಹಾಗೂ ಬಂದೋಬಸ್ತ್ ಮತ್ತು ಸಂಚಾರ ವ್ಯವಸ್ಥೆಗಳ ಬಗ್ಗೆ ಕಮಿಷನರ್ ಶಶಿಕುಮಾರ ಚರ್ಚೆ ನಡೆಸಿದರು.

- Advertisement -

Latest Posts

Don't Miss