Sandalwood News: ಸ್ಪಾ ಓನರ್‌ಗೆ ಬೆದರಿಕೆ ಹಾಕಿ, ದುಡ್ಡೆಗರಿಸುವ ಪ್ರಕರಣದಲ್ಲಿ ಆರೋಪಿಯಾಗಿದ್ದ ನಿರೂಪಕಿ ದಿವ್ಯಾ ವಸಂತ, ಪೊಲೀಸರ ಕಣ್ಣಿಗೆ ಕಾಣದಂತೆ ಎಸ್ಕೇಪ್ ಆಗಿದ್ದಳು. ಇದೀಗ ಕೇರಳದಲ್ಲಿ ಸಿಕ್ಕಿಬಿದ್ದಿರುವ ದಿವ್ಯಾಳನ್ನು, ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸ್ಪಾ ಓನರ್‌ಗೆ, ನಿಮ್ಮ ಸ್ಪಾನಲ್ಲಿ ವೇಶ್ಯಾವಾಟಿಕೆ ದಂಧೆ ನಡೆದಿರುವ ಸಾಕ್ಷಿ ನಮ್ಮ ಬಳಿ ಇದೆ. 15 ಲಕ್ಷ ರೂಪಾಯಿ ನೀಡದಿದ್ದರೆ, ನ್ಯೂಸ್ ಚಾನೆಲ್ನಲ್ಲಿ ನ್ಯೂಸ್ ಮಾಡಿ, ಅರೆಸ್ಟ್ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ದಿವ್ಯಾ ವಸಂತಾ, ರಾಜ್ ನ್ಯೂಸ್ ಸಿಇಓ ವೆಂಕಟೇಶ್ ರಾಜಾನುಕುಂಟೆ ಮತ್ತು ದಿವ್ಯ ಸಹೋದರ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದರು.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ದಿವ್ಯಾ ಸೇರಿ ಮೂವರು ಎಸ್ಕೇಪ್ ಆಗಿದ್ದರು. ವೇಂಕಟೇಶ್ ಮತ್ತು ದಿವ್ಯ ಸಹೋದರ ಸಂದೇಶ್‌ನನ್ನು ಪೊಲೀಸರು ಅರೆಸ್ಟ್ ಮಾಡಿ, ಮೂರು ಫೋನ್ ಜಪ್ತಿ ಮಾಡಿದ್ದರು. ಇದೀಗ ದಿವ್ಯಾ ವಸಂತಾ ಕೇರಳದಲ್ಲಿ ಸಿಕ್ಕಿಬಿದ್ದಿದ್ದು, ಜೀವನ್ ಬೀಮಾ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆಗಿದ್ದೇನು?: ಇಂದಿರಾಗರದಲ್ಲಿರುವ ಸ್ಪಾವೊಂದರ ಮಾಲೀಕನಿಂದ 15 ಲಕ್ಷ ರೂಪಾಯಿ ಪೀಕಲು ದಿವ್ಯಾ ಗ್ಯಾಂಗ್ ಸ್ಕೆಚ್ ಹಾಕಿತ್ತು. ಇದಕ್ಕಾಗಿ ಇವರೆಲ್ಲ ಸೇರಿ ವಾಟ್ಸಪ್ ಗ್ರೂಪ್ ಮಾಡಿಕೊಂಡು, ಅದರಲ್ಲಿ ಯಾರ್ಯಾರಿಗೆ ಹನಿ ಟ್ರ್ಯಾಪ್ ಮಾಡಬೇಕು ಎಂದು ಚರ್ಚಿಸಲಾಗುತ್ತಿತ್ತು. ಹಲವರಿಗೆ ಹನಿಟ್ರ್ಯಾಪ್ ಮಾಡಿದ ಬಳಿಕ, ದಿವ್ಯಾ ಇಂದಿರಾನಗರದ ಸ್ಪಾ ಓನರ್‌ಗೆ ಹನಿಟ್ರ್ಯಾಪ್ ಮಾಡಬೇಕು ಎಂದು, ಪ್ರಯತ್ನಿಸಿದ್ದಾರೆ. ಆದರೆ ಸ್‌ಪಾ ಓನರರ್ ಎಚ್ಚೆತ್ತುಕೊಂಡು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಬಳಿಕ ದಿವ್ಯಾ ಗ್ಯಾಂಗ್‌ನ್ನು ಅರೆಸ್ಟ್ ಮಾಡಲಾಗಿದೆ. ಬಳಿಕ ದಿವ್ಯಾ ಎಸ್ಕೇಪ್ ಆಗಿದ್ದಳು.
ಇತ್ತೀಚೆಗೆ ಇಂದಿರಾನಗರದ 100 ಅಡಿ ರಸ್ತೆ 15ನೇ ಮುಖ್ಯರಸ್ತೆಯ ‘ಟ್ರಿ ಸ್ಟ್ರಾ ಅಂಡ್ ಬ್ಯೂಟಿ’ ಪಾರ್ಲ‌್ರನ ವ್ಯವಸ್ಥಾಪಕ ಶಿವಶಂಕ ಅವರಿಗೆ ವೇಶ್ಯಾವಾಟಿಕೆ ನಡೆದಿದೆ ಎಂದು ಬೆದರಿಸಿ ಹಣ ಸುಲಿಗೆ ಮಾಡಲು ವೆಂಕಟೇಶ್ ತಂಡ ಯತ್ನಿಸಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಸಿಇಒ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ಸಂತ್ರಸ್ತರಿಂದ 80 ಸಾವಿರ, 50 ಸಾವಿರ ಹಾಗೂ 1 ಲಕ್ಷ ರು.ವರೆಗೆ ಆನ್‌ಲೈನ್ ಮೂಲಕ ತಮ್ಮ ಖಾತೆಗಳಿಗೆ ವೆಂಕಟೇಶ್ ಹಾಗೂ ದಿವ್ಯಾ ಹಣ ವರ್ಗಾಯಿಸಿಕೊಂಡಿರುವುದು ತನಿಖೆಯಲ್ಲಿ ಪತ್ತೆ ಯಾಗಿದೆ ಎಂದು ಮೂಲಗಳು ಹೇಳಿವೆ.