ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ: ಮುಧೋಳದ 4 ಲಾಡ್ಜ್‌ಗಳ ಮೇಲೆ ದಾಳಿ

Bagalakote News: ಬಾಗಲಕೋಟೆ: ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಆರೋಪದ ಮೇಲೆ, ಬಾಗಲಕೋಟೆಯ ಮುಧೋಳ ನಗರದ ಲಾಡ್ಜ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಜಮಖಂಡಿ ಡಿವೈ ಎಸ್ ಪಿ ಶಾಂತವೀರ ನೇತೃತ್ವದಲ್ಲಿ ಮುಧೋಳದ ನಾಲ್ಕು ಲಾಡ್ಜ್‌ಗಳ ಮೇಲೆ ದಾಳಿಯಾಗಿದೆ.

ಮುಧೋಳ ಸಿಪಿಐ,ಇಬ್ಬರು ಪಿಎಸ್ ಐ,ಲೋಕಾಪುರ ಪಿಎಸ್ ಐ ಸೇರಿ ನಾಲ್ಕು ತಂಡ ರಚನೆ ಮಾಡಿ, ನಾಲ್ಕು ತಂಡದಿಂದ‌ ನಾಲ್ಕು ಲಾಡ್ಜ್ ಗಳ‌‌ ಮೇಲೆ‌ ಏಕಕಾಲಕ್ಕೆ ದಾಳಿ ಮಾಡಲಾಗಿದೆ.

ಮುಧೋಳ‌ ನಗರದ ಓಂಕಾರ,‌ ಶಿವದುರ್ಗಾ,ಸಪ್ತಗಿರಿ,ಸುರಭಿ ಲಾಡ್ಜ್ ಮೇಲೆ ದಾಳಿ ಮಾಡಿ, 11 ಯುವತಿಯರ ರಕ್ಷಣೆ ಮಾಡಲಾಗಿದೆ. ಲಾಡ್ಜ್ ಮ್ಯಾನೇಜರ್, ಮಾಲೀಕರು ಸೇರಿ ಒಂಬತ್ತು ಜನರ ಮೇಲೆ ಎಫ್ ಐ ಆರ್ ಹಾಕಲು‌‌ ಪೊಲೀಸರು ನಿರ್ಧರಿಸಿದ್ದಾರೆ.

ಆಸ್ಸಾಂ,ಕಲ್ಕತ್ತಾ,ಮುಂಬೈ ಮೂಲದ, ೨೬-೨೮-೩೦ ವಯೋಮಾನದ ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ.

About The Author