Hubli News: ಹುಬ್ಬಳ್ಳಿ: ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿ- ಮುಂಬೈ ವಿಮಾನಯಾನ ಸೇವೆಯನ್ನು ವಿಮಾನಯಾನ ಸೋಮವಾರ ಇಂಡಿಗೋ ಪುನರಾರಂಭಿಸಿತು.
ಹವಾಮಾನ ವೈಫರಿತ್ಯ ಹಿನ್ನೆಲೆಯಲ್ಲಿ ಮುಂಬೈನಿಂದ ತಡವಾಗಿ ಹೊರಟ ಇಂಡಿಗೋ ವಿಮಾನ ಸಂಜೆ 6 ಗಂಟೆಗೆ ಹುಬ್ಬಳ್ಳಿ ತಲುಪಿತು. ಪುನಃ 6.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮುಂಬೈಗೆ ವಿಮಾನ ಹಾರಿತು.
ಪುನರಾರಂಭಗೊಂಡ ಮೊದಲ ದಿನವೇ ಮುಂಬೈನಿಂದ ಹುಬ್ಬಳ್ಳಿಗೆ 163 ಪ್ರಯಾಣಿಕರು ಆಗಮಿಸಿದರೆ, ಹುಬ್ಬಳ್ಳಿಯಿಂದ ಮುಂಬೈಗೆ 111 ಜನರು ಪ್ರಯಾಣಿಸಿದರು. ಮುಂಬೈ-ಹುಬ್ಬಳ್ಳಿ ವಿಮಾನಯಾನ ಸೇವೆ ಪುನರಾರಂಭಗೊಂಡ ದಿನವೇ ಪ್ರಯಾಣಿಕರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಎಕ್ಸಿಸ್ಟಿಂಗ್ ಫೈಟ್ ಆಗಿದ್ದರಿಂದ ವಿಮಾನ ಸ್ವಾಗತಕ್ಕಾಗಿ ನೀರಿನ ಫಿರಂಗಿ (ಕೆನಾನ್) ವ್ಯವಸ್ಥೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಡಿರಲಿಲ್ಲ. ಭಾಗದ ಬಹು ಜನರ ಬೇಡಿಕೆಗನುಗುಣವಾಗಿ ಆರಂಭಗೊಂಡಿದ್ದ ವಿಮಾನಯಾನ ಸೇವೆಯನ್ನು ಇಂಡಿಗೋ ವಿಮಾನಯಾನ ಸಂಸ್ಥೆಯು ಫೆಬ್ರುವರಿ 15ರಿಂದ ಸ್ಥಗಿತಗೊಳಿಸಿತ್ತು. ಈಗ ಪುನಃ ಆರಂಭಿಸಿದೆ. ಇದರಿಂದ ಕಿತ್ತೂರು ಕರ್ನಾಟಕ ಭಾಗದಿಂದ ಮುಂಬೈಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.




