Hubli News: ಹುಬ್ಬಳ್ಳಿ: ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ರಾಜ್ಯದಲ್ಲಿ ಅತೀಯಾದ ಮಳೆಯಿಂದ ಹಲವು ಕಡೆಗಳಲ್ಲಿ ಹಾನಿಯಾಗಿದೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸ್ವಲ್ಪ ಹೆಚ್ಚಾಗಿ ಹಾನಿ ಆಗಿದೆ. ಹಾಸನ, ಚಿಕ್ಕಮಂಗಳೂರು, ಕೊಡಗು ಜಿಲ್ಲೆಗಳಲ್ಲಿ ಸೇರಿ ಹಲವು ಕಡೆ ಮಳೆ ಹಾನಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕಡಿತದಿಂದ ಕುಸಿತ ಉಂಟಾಗಿದೆ. ಗುಡ್ಡ ಕುಸಿತದಿಂದ ಪ್ರಾಣಹಾನಿ ಸಂಭವಿಸಿವೆ. ಉತ್ತರಕ ಕನ್ನಡ ಜಿಲ್ಲೆಯಲ್ಲಿ 7 ಜನ ಸಾವನಪ್ಪಿರುವ ವರದಿಯಾಗಿದೆ. ಇಂದು ಉತ್ತರ ಕನ್ನಡ ಸ್ಥಿತಿಗತಿ ತಿಳಿಯಲು ಹೊಗುತ್ತಿದ್ದೇನೆ. ನಾಳೆ ಸಕಲೇಶಪುರ ಭಾಗಕ್ಕೂ ಭೇಟಿ ನೀಡುತ್ತೇನೆ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಸೇರಿ ಮಳೆಹಾನಿ ಪ್ರಾಣಹಾನಿ ಪ್ರದೇಶಕ್ಕೆ ಸಿಎಂ ಡಿಸಿಎಂ ಭೇಟಿ ನೀಡದ ವಿಚಾರದ ಬಗ್ಗೆ ಮಾತನಾಡಿದ ಹೆಚ್ಡಿಕೆ, ನಾನು ದೆಹಲಿಯಲ್ಲಿದ್ದರೂ ಮನಸ್ಸು ಮಾತ್ರ ಇಲ್ಲಿಯೇ ಇತ್ತು. ಮೂರು ದಿನಗಳ ಹಿಂದಿಯೇ ಬರುವ ಉದ್ದೇಶ ಹೊಂದಿದೆ. ಆದರೆ ಸರ್ಕಾರದ ಕೆಲವು ನಿಗದಿತ ಕಾರ್ಯಗಳಿಂದ ಬರಲಿಲ್ಲ. ರಾಜ್ಯದಲ್ಲಿನ ಮಳೆ ಹಾನಿ ಪ್ರದೇಶಗಳಿಗೆ ಸರ್ಕಾರ ಭೇಟಿ ನೀಡದೇ ಇರುವುದು ಆಶ್ಚರ್ಯ. ವಿಡಿಯೋ ಕಾನ್ಫರೆನ್ಸ್ ಮೂಲಕ ಕಂದಾಯ ಸಚಿವರು ಮೀಟಿಂಗ್ ಮಾಡ್ತಾರೆ. ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಡಿಸಿಎಂ ಹಾಗೂ ಸಚಿವರ ಭೇಟಿ ನೀಡದೇ ಇರುವುದು ಅವರ ಜನಪರ ಕಾಳಜಿ ತೋರಿಸುತ್ತೆ.
ರಾಜ್ಯರಾಜಕಾರಣ ಪಕಕ್ಕೆ ಇಟ್ಟು ಜನರೊಂದಿಗೆ ಇಂತಹ ಸಮಯದಲ್ಲಿ ಸರ್ಕಾರ ನಿಲ್ಲಬೇಕಿತ್ತು. ದಕ್ಷಿಣ ಕನ್ನಡ ಜಿಲ್ಲೆ ಸೇರಿ ಹಲವು ಜಿಲ್ಲೆಗಳಲ್ಲಿ ಮನೆಗಳು ಜಾಲಾವೃತವಾಗಿವೆ. ಇಲ್ಲಿಯವರೆಗೂ ಸರ್ಕಾರ ನೋವಿನಲ್ಲಿವವರಿಗೆ ಧೈರ್ಯ ತುಂಬವ ಕೆಲಸ ಮಾಡಿಲ್ಲ. ನಿನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಸೂಚನೆ ನೋಡಿದ್ದಾರೆ. 2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಘಟನೆ ನೆನಪಿಟ್ಟಕೊಳ್ಳಬೇಕು. ಇಂದು ಕೊಡುಗಿನಲ್ಲಿ ಧಾರಕಾರ ಮಳೆಯಾಗುತ್ತಿದೆ. ಕೊಡಗಿನ ಭಾಗದಲ್ಲಿ ಜಲಾಶಯಗಳು ಭರ್ತಿಯಾಗುತ್ತಿರುವುದು ಸಂತೋಷ. 2018ರ ಕೊಡಗಿನ ಹಾರಗಿ ಜಲಾಶಯ ತುಂಬಿ ಕುಸಾಲ್ ನಗರದ ಮನೆಗಳಲ್ಲಿ ನೀರು ತುಂಬಿಕೊಂಡಿತ್ತು. ಅಂದು ನಾನೇ ಕುದ್ದ ಸ್ಥಳ ಪರಿಶೀಲನೆ ಮಾಡಿದೆ ಜನ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ವಿ.
ಈಗಿರುವ ಸರ್ಕಾರಕ್ಕೆ ಏನಾದರೂ ಹೇಳುವುದಕ್ಕೆ ಹೋದ್ರೇ ನಾವು ಹಣ ಇಟ್ಟಿದ್ದೇವೆ ಅಂತಾರೆ. ಇಲ್ಲಿ ದುಡ್ಡು ಮುಖ್ಯವಲ್ಲ. ಮಳೆ ಹಾನಿ ಸೃಷ್ಟಿ ಮಾಡುತ್ತಿರುವ ಸಂದರ್ಭದಲ್ಲಿ ಜನಗಳ ನೋವಿನಲ್ಲಿ ಭಾಗಿಯಾಗುವುದು ಮುಖ್ಯ. ಜನರು ಸಂಕಷ್ಟದಲ್ಲಿರುವಾಗ ಧೈರ್ಯ ತುಂಬುವ ಕೆಲಸ ಸರ್ಕಾರದಿಂದ ಆಗಬೇಕು. ಆದರೆ ಈ ಸರ್ಕಾರದಲ್ಲಿ ಅದನ್ನು ನಾವು ಕಾಣುತ್ತಿಲ್ಲ. ಸದ್ಯದ ಸರ್ಕಾರದ ನಡೆ ನೋಡಿದ್ದರೆ ಆಡಳಿತ ನಡೆಸುವುದನ್ನೇ ಮರೆತಿರಬಹುದು ಅನ್ನಿಸುತ್ತಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ ಆಡಳಿತ ಅವಧಿಯಲ್ಲಿನ ಹಗರಣಗಳ ತನಿಖೆ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವರು, ಕಳೆದ ದಿನ ಸಿಎಂ ಅವರ ಹೇಳಿಕೆ ಗಮನಿಸಿದ್ದೇನೆ. ಅದೇನೋ 21 ಪ್ರಕರಣ ಹುಡುಕಿದ್ದೇವೆ. ತನಿಖೆ ಮಾಡಿ ಎಲ್ಲರನ್ನು ಜೈಲಿಗೆ ಕಳುಹಿಸುತ್ತೇವೆ ಅಂತಿದ್ದಾರೆ ಸಿಎಂ ಅವರು. 2010, 2011, 2012 ಪ್ರಕರಣಗಳ ಬಗ್ಗೆ ಈಗ ಚರ್ಚೆ ಮಾಡಿದ್ದಾರೆ. ಆದರೆ 2013 ರಲ್ಲಿ ಈಗಿನ ಸಿದ್ದರಾಮಯ್ಯನವರೇ ಸಿಎಂ ಆಗಿದ್ದರು. 2012 ರಲ್ಲಿ ಬಿಜೆಪಿ ಅವಧಿಯ ಪ್ರಕರಣಗಳನ್ನು ಹುಡಿಕಿ ತೆಗಿತ್ತೇವೆ ಅಂತಾ ಈಗ ಹೇಳುತ್ತಿದ್ದಾರೆ.
ಆದರೆ ಈ ಹಿಂದೆ 2013 ರ ಅಧಿಕಾರವಧಿಯಲ್ಲಿ ಯಾಕೆ ಇವರಿಗೆ ಅದೂ ನೆನಪಾಗಲಿಲ್ಲ..? ಐದು ವರ್ಷ ಅಂದು ಅಧಿಕಾರದಲ್ಲಿದ್ದಾಗ ಈ ವಿಚಾರಗಳು ಅವರಿಗೆ ಅಂದು ನೆನಪಾಗಿಲಿಲ್ವೋ. ರಾಜ್ಯದಲ್ಲಿ ಸಿಎಂ ಸುದ್ದರಾಮಯ್ಯ ನೇತೃತ್ವದ ಸರ್ಕಾರ ಬಂದು ಒಂದು ವರ್ಷ ಆಯಿತು. ಒಂದು ವರ್ಷದಲ್ಲಿ ಇವರು ಮಾಡಿ ಅಭಿವೃದ್ಧಿ ಕಾರ್ಯಗಳೇನೂ..? ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಆಕ್ರಮ ಆಗಿದೆ ಅಂತಾ ಅವರೇ ಒಪ್ಪಿಕೊಂಡಿದ್ದಾರೆ. ಅಕ್ರಮ ನಡೆಯುವುದಕ್ಕೆ ಕಾರಣ ಆದವರು ಯಾರು..? ಅಕ್ರಮ ಮಾಡಿದ್ದು ಅಧಿಕಾರಿಗಳು ಇದರಲ್ಲಿಸರ್ಕಾರದ ಪಾತ್ರ ಏನೂ ಇಲ್ಲಾ ಅಂತಿದ್ದಾರೆ. ಒಂದು ವೇಳೆ ಈ ಅಕ್ರಮದಲ್ಲಿ ಅಧಿಕಾರಿಗಳದೇ ತಪ್ಪು ಅಂದರೆ ಅದರ ಹೊಣೆ ಯಾರದು..? ಈ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ಹಗರಣದ ವಿಚಾರದಲ್ಲಿ ಸಿಎಂ ಅವರು ಉಡಾಫೆ ಮಾತು ಸರಿಯಲ್ಲ ಎಂದಿದ್ದಾರೆ.
ಇಡಿ ನನ್ನ ಹೆಸರು ಹೇಳುವಂತೆ ಬಿ ನಾಗೇಂದ್ರ ಅವರಿಗೆ ಒತ್ತಡ ಹೇರುತ್ತಿದ್ದಾರೆ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾಗೇಂದ್ರ ಮೇಲೆ ಇಡಿ ಇವರ ಹೆಸರ ಹೇಳಲು ಒತ್ತಡ ಹಾಕಿರೋ ಮಾಹಿತಿ ಸಿಕ್ಕಿದ ಹೇಗೆ..? ಇವರ ಯಾಕೆ ಆ ರೀತಿ ಊಹಿಸಿಕೊಳ್ಳುತ್ತಿದ್ದಾರೆ..? ಇವರು ತಪ್ಪೇ ಮಾಡದಿದ್ದಲ್ಲಿ ನಾಲ್ಕ ಜನ ಮಂತ್ರಿಗಳಿಂದ ಯಾಕೆ ಉತ್ತರ ಕೊಡಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಇಂತಹ ಸ್ಥಿತಿ ಯಾಕೆ ಬಂತು..? ಒಂದು ತಿಂಗಳು ಕಳೆದರು ಎಸಐಟಿ ಯಾರನ್ನು ಬಂಧಿಸಲಿಲ್ಲ. ನಾರನೋ ನಾಲ್ಕಜನ ಬಂಧಿಸಿ ಹಾಗಾಯಿತು ಹೀಗಾಯಿತ್ತು ಅಂತಾ ಈಗ ಹೇಳತ್ತಿದ್ದಾರೆ. ಈ ವಾಲ್ಮೀಕಿ ಹಗರಣ ನಡೆದಿದ್ದು ಹೇಗೆ..? ಹೊರ ರಾಜ್ಯಕ್ಕೆ ವಾಲ್ಮೀಕಿ ನಿಗಮದ ಹಣ ಹೋಗಿದ್ದು ಹೇಗೆ..? ಇಲ್ಲಿಂದ ಹೈದರಾಬಾದ್ ನಕಲಿ ಅಕೌಂಟಗಳಿಗೆ ದುಡ್ಡು ಹೋಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರದೇ ಪಾತ್ರವಿದೆ. ಜಮೀನು ಸಿಎಂ ಸಿದ್ದರಾಮಯ್ಯನವರದಾ..? 1992ರಲ್ಲಿ ಪಿಲೀಮನರಿ ನೋಟಿಫಿಕೇಶನ್ ಆಗಿದೆ. 1993ರಲ್ಲಿ ಪೋತಿ ಖಾತೆ ಆಗಿದೆ. ಈಗ ಜವರಾ ಅನ್ನುವವರು ಬದುಕೇ ಇಲ್ಲ. ಪೋತಿ ಖಾತೆ 1993 ರಲ್ಲಿ ಅವರ ಮಗನ ಹೆಸರಿಗಾಗಿದೆ. 1998ರಲ್ಲಿ ಸತ್ತಿರುವ ಜವರಾ ಅವರ ಹೆಸರಿನಲ್ಲಿ ಡಿನೋಟಿಫಿಕೇಶನ ಮಾಡೋಕ್ಕೆ ಆಗುತ್ತಾ..? ಡಿನೋಟಿಫಿಕೇಶನ್ ಮಾಡಿದ್ದವರು ಯಾರು..? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಚನ್ನಪಟ್ಟಣ ಬೈ ಎಲೆಕ್ಷನ್ ಬಗ್ಗೆ ಪ್ರತಿಕ್ರಿಯಿಸಿದ ಚನ್ನಪಟ್ಟಣ ಬೈ ಎಲೆಕ್ಷನ ಕುರಿತು ಇನ್ನೂ ಚರ್ಚೆ ಆಗಿಲ್ಲ. ಚನ್ನಪಟ್ಟಣದ ಬೈ ಎಲೆಕ್ಷನನಲ್ಲಿ ನಮ್ಮ ಮೈತ್ರಿ ಅಭ್ಯರ್ಥಿ ನಿಲ್ಲುವುದು ಖಚಿತ. ಇದರಲ್ಲಿ ತಾವುದೇ ಅನುಮಾನ ಬೇಡಾ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

