ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವಿಶಾನೀಲ ಸೋರಿಕೆಯಾಗಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸಾವನ್ನಪ್ಪಿದವರು ವಿಶಾಖಪಟ್ಟಣಂನ ಸೇನರ್ ಲೈಫ್ ಸೈನ್ಸಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು. ನಿನ್ನೆ ರಾತ್ರಿ ಇಲ್ಲಿ ಗ್ಯಾಸ್ ಸೋರಿಕೆಯಾಗಿ ದುರಂತ ಸಂಭವಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಪೊಲೀಸ್ ಆಫೀಸರ್ ಉದಯ್ ಕುಮಾರ್, ಘಟನೆ ಸಂಭವಿಸುವ ವೇಳೆ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಇದ್ದರು. ಹಾಗಾಗಿ ಗ್ಯಾಸ್ ಸೋರಿಕೆಯ ಪರಿಣಾಮ ಹೆಚ್ಚಾಗಿ ಅವರಿಬ್ಬರು ಸಾವನ್ನಪ್ಪಿದ್ದಾರೆ. ಆದ್ರೆ ಗ್ಯಾಸ್ ಎಲ್ಲೂ ಕೂಡ ಸ್ಪ್ರೆಡ್ ಆಗಿಲ್ಲ ಎಂದು ಹೇಳಲಾಗಿದೆ.
ಕೆಲ ದಿನಗಳ ಹಿಂದೆ ವಿಶಾಖಪಟ್ಟಣಂನ ಆರ್ ಆರ್ ವೆಂಕಟಪುರಂನಲ್ಲಿರುವ ಕಂಪನಿಯೊಂದರಲ್ಲಿ ರಾಸಾಯನಿಕ ಅನಿಲ ಸೋರಿಕೆಯಾಗಿತ್ತು. ಈ ಪರಿಣಾಮವಾಗಿ ಹಲವರು ಅನಾರೋಗ್ಯದಿಂದ ಬಳಲಿದ್ದು, 10ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು.

ಪ್ರಖ್ಯಾತ ಜ್ಯೋತಿಷ್ಯರು
ಪಂಡಿತ್ ಕೆ.ಎಂ.ರಾವ್
ಆರ್‌ಪಿಸಿ ಲೇಔಟ್ ಬಸ್ ನಿಲ್ದಾಣದ ಹತ್ತಿರ, ಹಂಪಿ ನಗರ, ವಿಜಯನಗರ, ಬೆಂಗಳೂರು
Phone number: 99029 83444/ 98458 11194