Sunday, November 16, 2025

Latest Posts

ಪುನೀತ್ ಕೆರೆಹಳ್ಳಿ ಮೇಲೆ ದೌರ್ಜನ್ಯ: ಎಸಿಪಿ ಮೇಲೆ ಗಂಭೀರ ಆರೋಪ

- Advertisement -

News: ರಾಷ್ಟ್ರ ರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿ ಮೇಲೆ ಎಸಿಪಿ ಚಂದನ್‌ ಕುಮಾರ್ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ, ಸಮಸ್ತ ಹಿಂದೂ ಸಂಘಟನೆಗಳ ಮುಖಂಡರು, ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ದೂರು ನೀಡಿದೆ.

ಎಸಿಪಿ ಚಂದನ್ ಕುಮಾರ್, ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಮೇಲೆ ದೌರ್ಜನ್ಯ ನಡೆಸಿದ್ದು, ಎಡಗಾಲಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಡ್ಡ ಹಿಡಿದು ಥಳಿಸಿದ್ದಾರೆ. ಅಲ್ಲದೇ, ಪುನೀತ್ ಅವರನ್ನು ನಗ್ನ ಮಾಡಿ, ಅವರ ವೀಡಿಯೋ ಮಾಡಿ. ನಿನ್ನ ನಾಟಕ ಹೆಚ್ಚಾಯ್ತು, ಜಾಸ್ತಿ ಮಾತನಾಡಿದ್ರೆ, ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿಬಿಡುತ್ತೇನೆ ಎಂದು ಧಮ್ಕಿ ಹಾಕಿದ್ದಾರೆಂದು ಆರೋಪಿಸಿದ್ದಾರೆ.

ಸದ್ಯ ಸದ್ದು ಮಾಡುತ್ತಿರುವ ನಾಯಿ ಮಾಂಸದ ವಿಚಾರವಾಗಿ ಪುನೀತ್ ಅವರನ್ನು ಜೈಲಿಗೆ ಹಾಕಲಾಗಿದೆ. ಕೆಲ ತಿಂಗಳ ಹಿಂದೆ ಪುನೀತ್, ರಾಜಸ್ಥಾನದಿಂದ ಕಳಪೆ ಮಾಂಸ ಸರಬರಾಜಾಗುತ್ತಿದೆ ಎಂದು ದೂರು ನೀಡಿದ್ದರು. ಆದರೆ ಈ ಬಗ್ಗೆ ಪೊಲೀಸರಾಗಲಿ, ಸರ್ಕಾರವಾಗಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ ಇತ್ತೀಚೆಗೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಆಮದು ಮಾಡಿಕೊಂಡಿದ್ದ ರಾಜಸ್ತಾನದ ಮಾಂಸ ಕಳಪೆ ಎಂದು ದೂರು ನೀಡಿ, ಅಕ್ರಮ ಬಯಲು ಮಾಡುವಂತೆ, ಪುನೀತ್ ಮತ್ತು ತಂಡ ಒತ್ತಾಯಿಸಿದ್ದರು.

ಆದರೆ, ಪೊಲೀಸರು ಪುನೀತ್‌ರನ್ನೇ ವಶಕ್ಕೆ ಪಡೆದು, ಜೈಲಿಗೆ ಹಾಕಿದ್ದಾರೆ. ಇದು ಗಬ್ಬು ನಾರುತ್ತಿರುವ ಮಾಂಸ. ತಿನ್ನಲು ಯೋಗ್ಯವಲ್ಲದ ಮಾಂಸವೆಂದು ಹೇಳಿದ್ದಕ್ಕೆ, ಪುನೀತ್ ಅವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಹಿಂದೂ ಸಂಘಟನೆ ಮುಖಂಡರು ಆರೋಪಿಸಿದ್ದಾರೆ.

- Advertisement -

Latest Posts

Don't Miss