ಕರ್ನಾಟಕ ಟಿವಿ ಬೆಂಗಳೂರು : ಕೊರೊನಾ ಜನರನ್ನ ತೀವ್ರವಾಗಿ ಕಾಡ್ತಿದೆ. ಒಂದೆಡೆ ರೋಗ ಹರಡುವ ಭೀತಿ ಇದ್ರೆ, ಕೊರೊನಾ ಕೆಲಸವನ್ನ ಕಿತ್ತುಕೊಂಡಿದೆ. ಲಾಕ್ ಡೌನ್ ಘೋಷಣೆಯಾದ ಮೊದಲದಿನದಿಂದಲೂ ಬೆಂಗಳೂರಿನ ಲಗ್ಗೆರೆಯ ನಾರಾಯಣಸ್ವಾಮಿ ಕ್ಷೇತ್ರದ ಜನರಿಗೆ ನಿರಂತರವಾಗಿ ನೆರವನ್ನ ನೀಡುತ್ತಾ ಬಂದಿದ್ದಾರೆ.. ಇದುವರೆಗೂ ಕ್ಷೇತ್ರದ ಜನರಿಗೆ ಹಲವು ಬಾರಿ ಫುಡ್ ಕಿಟ್ ವಿತರಣೆ ಮಾಡಿದ್ದಾರೆ.. ಕಳೆದೊಂದು ವಾರದಿಂದ ಲಗ್ಗೆರೆ ವಾರ್ಡಿನ ಜನರಿಗೆ ಫುಡ್ ಕಿಟ್ ವಿತರಣೆ ಮಾಡ್ತಿದ್ದಾರೆ.. ಇಂದು ಫುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾದ ಬಿಜೆಪಿ ಮುಖಂಡ ಮುನಿರತ್ನ ಲಗ್ಗೆರೆ ನಾರಾಯಣಸ್ವಾಮಿ ಕಾರ್ಯವನ್ನ ಶ್ಲಾಘಿಸಿದ್ರು. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 9 ವಾರ್ಡ್ ಗಳು ಬರಲಿದ್ದು ಇದರಲ್ಲಿ ಲಗ್ಗೆರೆ ವಾರ್ಡ್ ನಲ್ಲಿ ನಡೆದ ಕೆಲಸಗಳೂ ಎಲ್ಲೂ ನಡೆದಿಲ್ಲ, ಹಾಗೆಯೇ ನಾರಾಯಣಸ್ವಾಮಿಯಷ್ಟು ಕೆಲಸವನ್ನೂ ಯಾರೂ ಮಾಡಿಲ್ಲ. ನಾರಾಯಣಸ್ವಾಮಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ರೀತಿಯನ್ನ ಮುನಿರತ್ನ ಕೊಂಡಾಡಿದ್ರು.. ಕಾರ್ಯಕ್ರಮದಲ್ಲಿ ಭಾಗಿಯಾದ ಮುನಿರತ್ನ ಫುಡ್ ಕಿಟ್ ವಿತರಣೆ ಮಾಡಿದ್ರು. ಇದಕ್ಕೂ ಮುನ್ನ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಿದ್ರು.
ಶಿವಕುಮಾರ್, ಕರ್ನಾಟಕ ಟಿವಿ, ಬೆಂಗಳೂರು