Tuesday, October 7, 2025

Latest Posts

ರಾಜ್ಯ ಬಿಜೆಪಿ ಪಕ್ಷದಲ್ಲಿ ಭಿನ್ನಮತ ವಿಚಾರದ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿದ್ದಿಷ್ಟು.

- Advertisement -

Belagavi Political News: ಬೆಳಗಾವಿ: ರಾಜ್ಯ ಬಿಜೆಪಿ ಪಕ್ಷದಲ್ಲಿ ಭಿನ್ನಮತ ವಿಚಾರಕ್ಕೆ, ಬೆಳಗಾವಿಯಲ್ಲಿ ಮಾಜಿ ಸಿಎಂ ಜಗದೀಶ್ ‌ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಚಾರಗಳ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲು ಹೋಗೊಲ್ಲ. ಈ ವಿಚಾರಗಳನ್ನು ವರಿಷ್ಠರು ಗಮಿಸುತ್ತಾರೆ, ಸರಿಯಾದ ಸಮಯದಲ್ಲಿ ಕ್ರಮಕೈಗೊಳ್ಳುತ್ತಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಭಿನ್ನಮತೀಯರ ವಿರುದ್ಧ ಯಾಕೆ ಹೈಕಮಾಂಡ್ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆ ವಿಚಾರದ ಬಗ್ಗೆ ಮಾತನಾಡಿದ ಶೆಟ್ಟರ್, ನಾನು ಹೈಕಮಾಂಡ್ ಅಲ್ಲ, ಎಲ್ಲವನ್ನೂ ವರಿಷ್ಠರು ಸಾಂದರ್ಭಿಕವಾಗಿ ಗಮನಿಸುತ್ತಾರೆ. ಸಂದರ್ಭ ಬಂದಾಗ ಏನು ಕ್ರಮ ಕೈಗೊಳ್ಳಬೇಕು ಎಂಬುವುದನ್ನು ಎಲ್ಲರ ಜತೆಗೇ ಮಾತನಾಡಿ ವರಿಷ್ಠರು ನಿರ್ಧಾರ ಮಾಡ್ತಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಏನೇ ಹೆಚ್ಚೂಕಮ್ಮಿ ಇದ್ರೂ ಅದನ್ನು ಹೈಕಮಾಂಡ್ ಬಗೆಹರಿಸುತ್ತೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಕೂಡಲಸಂಗಮದಿಂದ ಬಳ್ಳಾರಿ ಪಾದಯಾತ್ರೆಗೆ ಯತ್ನಾಳ, ರಮೇಶ ಸಭೆ ವಿಚಾರದ ಬಗ್ಗೆ ಮಾತನಾಡಿದ ಶೆಟ್ಟರ್‌, ನಾನು ಪಕ್ಷಕ್ಕೆ ಬದ್ಧ ಇರೋ ವ್ಯಕ್ತಿ, ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದ ಶೆಟ್ಟರ್ ಹೇಳಿದ್ದಾರೆ.

- Advertisement -

Latest Posts

Don't Miss