ಮಕ್ಕಳು ಚುರುಕಾಗೋಕ್ಕೆ ಯಾವ ಜ್ಯೂಸ್ ಕೊಡಬೇಕು..? ಮನೆಯಲ್ಲೇ ಪ್ರೊಟೀನ್ ಪೌಡರ್ ತಯಾರಿಸೋದು ಹೇಗೆ..?

ಮಕ್ಕಳು ಓದಿದ್ದನ್ನ ನೆನಪಿಡುವುದಿಲ್ಲ, ಚುರುಕಾಗಿಲ್ಲ ಎನ್ನುವರು ಇವತ್ತು ನಾವು ಹೇಳು ಜ್ಯೂಸ್‌ಗಳನ್ನ ಮಾಡಿ, ಮಕ್ಕಳಿಗೆ ಕೊಡಿ. ಹಾಗಾದ್ರೆ ಬನ್ನಿ ಯಾವ ಜ್ಯೂಸ್ ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಸಿ, ಮಕ್ಕಳನ್ನ ಚುರುಕಾಗಿಸುತ್ತೆ ಅನ್ನೋದನ್ನ ನೋಡೋಣ.

ಎಳನೀರು: ಇದನ್ನ ನೀವೇನು ತಯಾರಿಸಬೇಕಂತಿಲ್ಲ, ನಿಸರ್ಗದಿಂದ ಸಿಕ್ಕ ಕೊಡುಗೆಗಳಲ್ಲಿ ಎಳನೀರು ಕೂಡಾ ಒಂದು. ರುಚಿಯಲ್ಲೂ ಹಿತವಾಗಿರುವ ಎಳನೀರನ್ನ ಮಕ್ಕಳು ಇಷ್ಟಪಟ್ಟು ಕುಡಿಯುತ್ತಾರೆ. ಇದು ದೇಹವನ್ನ ತಂಪಾಗಿರಿಸುವುದಲ್ಲದೇ, ಮಕ್ಕಳು ದಿನವಿಡೀ ಉಲ್ಲಾಸದಿಂದಿರಲು ಸಹಕರಿಸುತ್ತದೆ.

ಆ್ಯಲೋವೇರಾ ಜ್ಯೂಸ್: ಈ ಜ್ಯೂಸ್ ಟೇಸ್ಟ್‌ನಲ್ಲಿ ಅಷ್ಟೇನು ರುಚಿ ಇಲ್ಲದಿದ್ದರೂ ಮೆದುಳಿನ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ. ಹಾಗಾಗಿ ಈ ಜ್ಯೂಸನ್ನ ನಿಮ್ಮ ಮಕ್ಕಳಿಗೆ ಕುಡಿಸಬಹುದು.

ದಾಳಿಂಬೆ ಜ್ಯೂಸ್: ದಾಳಿಂಬೆ ಹಣ್ಣು ಆರೋಗ್ಯಕ್ಕೂ ಒಳ್ಳೆಯದು ಅಲ್ಲದೇ, ಜ್ಞಾಪಕ ಶಕ್ತಿ ಹೆಚ್ಚಿಸಲು ಕೂಡ ಸಹಕಾರಿಯಾಗಿದೆ.

ಬೀಟ್‌ರೂಟ್ ಜ್ಯೂಸ್: ಮೆದುಳಿನಲ್ಲಿ ರಕ್ತ ಸಂಚಲನ ಸರಾಗವಾಗಿರಲು ಸಹಕರಿಸುವುದಲ್ಲದೇ, ಮಕ್ಕಳು ಓದಿದ್ದನ್ನು ನೆನಪಿಟ್ಟುಕೊಳ್ಳಲು ಸಹಕಾರಿಯಾಗಿದೆ.

ಇನ್ನು ಮನೆಯಲ್ಲೇ ಪ್ರೋಟೀನ್ ಪೌಡರ್ ತಯಾರಿಸುವುದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿ ಏನು ಅನ್ನೋದನ್ನ ನೋಡೋಣ ಬನ್ನಿ..

ಓಟ್ಸ್- 100 ಗ್ರಾಂ, ಬಾದಾಮ್- 100ಗ್ರಾಂ, ಸೋಯಾಬಿನ್ 100 ಗ್ರಾಂ, ಶೇಂಗಾ 100 ಗ್ರಾಂ, ಹಾಲಿನ ಪುಡಿ, 50 ಗ್ರಾಂ.

ಮಾಡುವ ವಿಧಾನ: ಓಟ್ಸ್, ಬಾದಾಮ್, ಸೋಯಾಬಿನ್, ಶೇಂಗಾ, ಈ ನಾಲ್ಕು ಸಾಮಗ್ರಿಗಳನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ. ನಂತರ ಈ ಸಾಮಗ್ರಿ ತಣ್ಣಗಾದ ಮೇಲೆ, ಬೇರೆ ಬೇರೆಯಾಗಿ ಪುಡಿ ಮಾಡಿ. ಎಲ್ಲ ಪುಡಿಯನ್ನು ಮಿಶ್ರಣ ಮಾಡಿ, ಇದರೊಂದಿಗೆ ಹಾಲಿನ ಪುಡಿ ಸೇರಿಸಿಕೊಳ್ಳಿ.

ಹಾಲು ಅಥವಾ ನೀರಿನೊಂದಿಗೆ ಇದನ್ನು ಬೆರೆಸಿ ಕುಡಿಯುವುದರಿಂದ, ದೇಹಕ್ಕೆ ಬೇಕಾದ ಪ್ರೋಟಿನ್ ದೊರೆಯುತ್ತದೆ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author