- Advertisement -
International News: 2 ತಿಂಗಳ ಹಿಂದೆಯಷ್ಟೇ 91ನೇ ವಯಸ್ಸಿನಲ್ಲಿ 6ನೇ ಮದುವೆಯಾಗಿದ್ದ ಬಿಲೆನಿಯರ್ ನಿನ್ನೆ ನಿಧನರಾಗಿದ್ದಾರೆ. ರಿಚರ್ಡ್ ಸಾವನ್ನಪ್ಪಿರುವ ಬಿಲೇನಿಯರ್ ಆಗಿದ್ದು, ಈತ 2 ತಿಂಗಳ ಹಿಂದೆಯತನಕ 5 ಮದುವೆಯಾಗಿದ್ದ. ಆದರೆ ಸಾವು ಕಾಲಕ್ಕೆ, ತನಗಿಂತ 50 ವರ್ಷ ಚಿಕ್ಕವಳಾಗಿದ್ದ ಯುವತಿಯನ್ನು ರಿಚರ್ಡ್ ಮದುವೆಯಾಗಿದ್ದ. ಆದ್ರೆ ಇದೀಗ ರಿಚರ್ಡ್ ಸಾವನ್ನಪ್ಪಿದ್ದಾರೆ.
ರಿಚರ್ಡ್ ವಯೋಸಹಜ ಖಾಯಿಲೆಯಿಂದ ಸಾವನ್ನಪ್ಪಿದ್ದಾರೆಂದು ವರದಿಯಾಗಿದ್ದು, ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ತನ್ನ ನಿವಾಸದಲ್ಲಿ ಇವರು ನಿಧನರಾಗಿದ್ದಾರೆ. ಕೆಲ ತಿಂಗಳ ಹಿಂದೆ ಇವರು ಹೃದಯ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರು. ಇದೀಗ ಸಾವನ್ನಪ್ಪಿದ್ದಾರೆ.
ರಿಚರ್ಡ್ ಖ್ಯಾತ ಮಾಡೆಲ್ ಕಿಮ್ ಕಾರ್ಡಿಯಾನ್ ಜೊತೆ ಡೇಟಿಂಗ್ ಮಾಡಲು ಆಕೆಗೆ 5 ಲಕ್ಷ ಡಾಲರ್ ಹಣ ನೀಡಿದ್ದರೆಂದು ಸುದ್ದಿಯಾಗಿದ್ದರು.
- Advertisement -

