Monday, December 23, 2024

Latest Posts

Uttar Pradesh ; 13 ಲಕ್ಷ ಸರ್ಕಾರಿ ನೌಕರರಿಗೆ ಶಾಕ್! ; ಈ ತಿಂಗಳ ಸಂಬಳ ಕಟ್!

- Advertisement -

ಈ ತಿಂಗಳು ಬರೋಬ್ಬರಿ 13 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ಸಂಬಳ ಆಗೋದು ಅನುಮಾನವಾಗಿದೆ. ನೌಕರರಿಗೆ ಸರ್ಕಾರ ಅದೆಷ್ಟೋ ಬಾರಿ ಎಚ್ಚರಿಕೆ ನೀಡಿದ್ರೂ, ಉದ್ಯೋಗಿಗಳು ಆ ಒಂದು ಕೆಲಸವನ್ನು ಇನ್ನೂ ಪೂರ್ಣಗೊಳಿಸಿಲ್ಲ. ಇದೇ ಕಾರಣಕ್ಕೆ 13 ಲಕ್ಷಗಳ ಸರ್ಕಾರಿ ನೌಕರರಿಗೆ ಆಗಸ್ಟ್ ತಿಂಗಳ ಸಂಬಳವಾಗೋದು ಅನುಮಾನವಾಗಿದೆ.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರವು ಸರ್ಕಾರಿ ಅಧಿಕಾರಿಗಳಿಗೆ ತಮ್ಮ ಚರ ಮತ್ತು ಸ್ಥಿರ ಆಸ್ತಿಗಳ ವಿವರವನ್ನು ಸಲ್ಲಿಸುವಂತೆ ಸೂಚನೆ ನೀಡಿತ್ತು. ಆದ್ರೆ, ಸುಮಾರು 13 ಲಕ್ಷ ನೌಕರರು ಮಾನವ ಸಂಪದಾ ಎನ್ನುವ ಸರ್ಕಾರಿ ಪೋರ್ಟಲ್​ನಲ್ಲಿ ಇದುವರೆಗೂ ತಮ್ಮ ಸ್ಥಿರ ಆಸ್ತಿಗಳ ವಿವರವನ್ನು ಸಲ್ಲಿಕೆ ಮಾಡಿಲ್ಲ. ಇದೇ ಕಾರಣಕ್ಕೆ ಲಕ್ಷಾಂತರ ನೌಕರರಿಗೆ ಈ ತಿಂಗಳು ವೇತನ ಆಗೋದು ಅನುಮಾವಾಗಿದೆ.

 

ಸರ್ಕಾರಿ ಅಧಿಕಾರಿಗಳು ಸ್ಥಿರ ಆಸ್ತಿಗಳನ್ನು ಸರ್ಕಾರಿ ಪೋರ್ಟಲ್​ನಲ್ಲಿ ಘೋಷಣೆ ಮಾಡುವಂತೆ ಸಾಕಷ್ಟು ಬಾರಿ ತಿಳಿಸಲಾಗಿತ್ತು. ಈ ಬಗ್ಗೆ ಸಿಎಂ ಆದಿತ್ಯನಾಥ್​ ಸರ್ಕಾರ ಹಲವು ಬಾರಿ ಗಡುವುಗಳನ್ನು ನಿಗದಿಪಡಿಸಿತ್ತು. ಆದರೂ ಸರ್ಕಾರಿ ಅಧಿಕಾರಿಗಳು ಆ ಗಡುವು ಮೀರಿದರು ತಮ್ಮ ಆಸ್ತಿ ವಿವರ ಘೋಷಣೆ ​ ಮಾಡಿರಲಿಲ್ಲ. ಹೀಗಾಗಿ ಈ ಬಾರಿ ಖಡಕ್ ಆಗಿ ಎಚ್ಚರಿಕೆ ಮಾಡಿರುವ ಸಿಎಂ ಯೋಗಿ ​ ಸರ್ಕಾರ ಆಗಸ್ಟ್​ 31ರೊಳಗೆ ತಮ್ಮ ಆಸ್ತಿಯ ಮಾಹಿತಿ ಘೋಷಿಸಿಲ್ಲ ಅಂದ್ರೆ ಈ ತಿಂಗಳ ಸಂಬಳ ಕಡಿತ ಮಾಡಲಾಗುವುದು ಎಂದು ಆದೇಶ ಹೊರಡಿಸಿದೆ.

ಇದು ಕೇವಲ ವೇತನದ ಮೇಲೆ ಮಾತ್ರವಲ್ಲ, ಮುಂದೆ ಬಡ್ತಿ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿಯೇ, ನೌಕರರು ಆಸ್ತಿ ಘೋಷಣೆಗೆ ಇಕ್ಕಟ್ಟಿಗೆ ಸಿಲುಕಿದೆ. ರಾಜ್ಯ ಸರ್ಕಾರವು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಸರ್ಕಾರ ಈ ಪೋರ್ಟಲ್ ಅನ್ನು ಜಾರಿಗೆ ಮಾಡಿದೆ. ಆದರೆ​ ಹಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಡಳಿತ ಸರ್ಕಾರದ ಮೇಲೆ ಪರಿಣಾಮ ಬೀರಿದೆ.

- Advertisement -

Latest Posts

Don't Miss