Sunday, June 22, 2025

Latest Posts

ದೇಶದಲ್ಲಿ ಅಂಬಾನಿ ಬ್ಯಾನ್ – ರಿಲಯನ್ಸ್ ಕಥೆ ಮುಗಿದೇ ಹೋಯ್ತು!

- Advertisement -

ದೇಶದ ಒಂದು ಕಾಲದ ದೊಡ್ಡ ಶ್ರೀಮಂತ ಉದ್ಯಮಿ, ರಿಲಯನ್ಸ್ ಟೆಲಿಕಾಂ, ಒಡೆಯ ಅನಿಲ್ ಅಂಬಾನಿಯನ್ನೇ ಬ್ಯಾನ್ ಮಾಡಲಾಗಿದೆ. ದೇಶದ ಅತಿ ದೊಡ್ಡ ಶ್ರೀಮಂತ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಎಲ್ರಿಗೂ ಗೊತ್ತು. ಹಾಗೇ ಅವರ ಸಹೋದರ ಅನಿಲ್ ಅಂಬಾನಿ ಕೂಡ ದೇಶದ ದೈತ್ಯ ಉದ್ಯಮಿ. ಒಂದು ಕಾಲದಲ್ಲಿ ರಿಲಯನ್ಸ್ ಮೊಬೈಲ್ ಎಲ್ರಿಗೂ ಚಿರಪರಿಚಿತ ಈ ಮೊಬೈಲ್ ಟೆಲಿಕಾಂ ಕ್ಷೇತ್ರಕ್ಕೆ ಒಡೆಯನಾಗಿದ್ದೇ ಅನಿಲ್ ಅಂಬಾನಿ.. ಧೀರೂಬಾಯಿ ಅಂಬಾನಿ ಕಟ್ಟಿ ಬೆಳೆಸಿದ ಕಂಪನಿ ರಿಲಯನ್ಸ್​ ಅನ್ನು ಅಣ್ಣ ಮುಖೇಶ್ ಅಂಬಾನಿ ಹಾಗೂ ತಮ್ಮ ಅನಿಲ್ ಅಂಬಾನಿ ಹಂಚಿಕೊಂಡಿದ್ರು. ಮುಖೇಶ್ ಪಾಲಿಗೆ ರಿಲಯನ್ಸ್ ಮೊಬೈಲ್, ಪೆಟ್ರೋಲಿಯಂ ಸೇರಿ ಹಲವು ಉದ್ಯಮಗಳು ಕೈಸೇರಿತ್ತು. ತಮ್ಮ ಅನಿಲ್ ಅಂಬಾನಿ ರಿಲಯನ್ಸ್ ಹೋಂ ಫೈನಾನ್ಸ್, ರಿಲಯನ್ಸ್ ಪವರ್, ರಿಲಯನ್ಸ್ ಇನ್​ಫ್ರಾಸ್ಟ್ರಕ್ಚರ್ ಸೇರಿ ಹಲವು ಕಂಪನಿಗಳನ್ನ ಮುನ್ನಡೆಸ್ತಿದ್ದಾರೆ. ಇಂಥಾ ಅನಿಲ್ ಅಂಬಾನಿ ಈಗ ಅಕ್ರಮ ಹಣ ವರ್ಗಾವಣೆ ಕೇಸ್ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

ರಿಲಯನ್ಸ್‌ ಹೋಮ್‌ ಫೈನಾನ್ಸ್‌ ಲಿಮಿಟೆಡ್‌ನಿಂದ ಹಣವನ್ನು ಬೇರೆಡೆಗೆ ಅಕ್ರಮವಾಗಿ ವರ್ಗಾಯಿಸಿದ ಆರೋಪ ಅನಿಲ್ ಅಂಬಾನಿ ಮೇಲಿದೆ. ಅನಿಲ್ ಅಂಬಾನಿಯಂತೆಯೇ ಇನ್ನೂ 24 ಕಂಪನಿಗಳು ಕೂಡ ಈ ಆರೋಪವ್ನ ಎದುರಿಸ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ಕೇಸ್​​ನಲ್ಲಿ ಕೈಗಾರಿಕೋದ್ಯಮಿ ಅನಿಲ್‌ ಅಂಬಾನಿಯನ್ನು 5 ವರ್ಷ ಬ್ಯಾನ್ ಮಾಡಲಾಗಿದೆ.. ಅಲ್ದೇ 25 ಕೋಟಿ ದಂಡವನ್ನೂ ವಿಧಿಸಲಾಗಿದೆ.. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಈ ಕ್ರಮ ಕೈಗೊಂಡಿದೆ..

ಅನಿಲ್ ಅಂಬಾನಿಯನ್ನು 5 ವರ್ಷ ಬ್ಯಾನ್ ಮಾಡಿರೋದ್ರಿಂದ ಅವರು ಯಾವುದೇ ನೋಂದಾಯಿತ ಕಂಪನಿ ಅಥವಾ ಸೆಬಿಯಿಂದ ನೋಂದಣಿಯಾಗಿರುವ ಸಂಸ್ಥೆಯಲ್ಲಿ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕನಾಗಿ ಕೆಲಸ ಮಾಡುವಂತಿಲ್ಲ.. ಅಷ್ಟೇ ಅಲ್ಲ ಅನಿಲ್ ಅಂಬಾನಿಯ ರಿಲಯನ್ಸ್ ಹೋಂ ಫೈನಾನ್ಸ್ ಕಂಪನಿಯನ್ನೂ ಷೇರು ಮಾರ್ಕೆಟ್​​ನಿಂದ 6 ತಿಂಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ಅನಿಲ್ ಅಂಬಾನಿಯನ್ನ ಸೆಬಿ ಬ್ಯಾನ್ ಮಾಡಿರೋದ್ರಿಂದ ಅವ್ರೀಗ ರಿಲಯನ್ಸ್​ ಹೋಂ ಫೈನಾನ್ಸ್​ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಲೇ ಬೇಕು.. ಇನ್ನು 5 ವರ್ಷ ಅನಿಲ್ ಅಂಬಾನಿ ಏನೂ ಮಾಡೋಂಗೇ ಇಲ್ಲ.. ಈ 5 ವರ್ಷ ಕಾಲ ಅನಿಲ್ ಅಂಬಾನಿ ಷೇರು ಮಾರ್ಕೆಟ್​ನಿಂದ ದೂರ ಉಳಿದ್ರೆ, ಅವರ ಉದ್ಯಮದ ಕಥೆ ಮುಗಿದಂತೆಯೇ.

- Advertisement -

Latest Posts

Don't Miss