Hubli News: ಹುಬ್ಬಳ್ಳಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಮಾತನಾಡಿದ್ದು, ರಾಜ್ಯಪಾಲರ ವಿರುದ್ಧ ಸಿಎಂ ವಾಗ್ದಾಳಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಹಂಸರಾಜ ಭಾರಧ್ವಾಜ್ ರಾಜಕಾರಣಿಯ ಗೌವರ್ನರ್. ರಾಜಕಾರಣ ಬಿಟ್ಟು ಏನು ಮಾಡಲಿಲ್ಲ ಅವರು. ದಿನಬೆಳಾಗಾದ್ರೆ ರಾಜಕಾರಣದ ಬಗ್ಗೆ ಮಾತನಾಡ್ತಿದ್ರು. ರಾಜ್ಯ ಸರ್ಕಾರದ ವಿರುದ್ಧ ಮಾತನಾಡ್ತಿದ್ರು. ಅವಾಗ ರಾಜ್ಯಪಾಲರ ಭಾಷೆ, ನಿರ್ಧಾರ ಎಲ್ಲವೂ ಇವರಿಗೆ ಬೇಕಾಗಿತ್ತು. ಈಗ ಅದೇ ಪರಿಸ್ಥಿತಿ ಅವರಿಗೆ ಬಂದಾಗ ರಾಜ್ಯಪಾಲರ ವಿರುದ್ಧ ಮಾತನಾಡೋದು ಎಷ್ಟು ಸರಿ..? ರಾಷ್ಟ್ರಪತಿಗಳ ಪ್ರತಿನಿಧಿಗಳು ರಾಜ್ಯಪಾಲರು. ಅವರ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ರೆ ಕೇಳೋಕೆ ರೀತಿ ನೀತಿ ಇದೆ. ಅದರಂತೆ ನಡೆದುಕೊಂಡ್ರೆ ಸರ್ಕಾರಕ್ಕೂ ಗೌರವ ಸಿಗುತ್ತೆ. ರಾಜ್ಯಪಾಲರನ್ನ ಬಯ್ಯೋದ್ರಿಂದ ಕಾಂಗ್ರೆಸ್ ಗೆ ಲಾಭ ಇಲ್ಲಾ. ಇದೆಲ್ಲ ಕಾಂಗ್ರೆಸ್ ಪ್ರೇರಿತ ಅಷ್ಟೇ ಎಂದು ಬೊಮ್ಮಾಯಿ ಹೇಳಿದ್ದಾರೆ.
ಹಂಸರಾಜ ಭಾರದ್ವಾಜ ರಾಜಕಾರಣಿ ಗೌವರ್ನರ್. ಅವರು ರಾಜಕಾರಣ ಬಿಟ್ಟು ಏನು ಮಾಡಲಿಲ್ಲ. ರಾಜ್ಯಪಾಲರನ್ನ ಬಯ್ಯೋದ್ರಿಂದ ಕಾಂಗ್ರೆಸ್ ಗೆ ಲಾಭ ಇಲ್ಲಾ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ನಡೆಯೋದು ಅವರ ಆಂತರಿಕ ವಿಚಾರ. ರಾಜ್ಯದಲ್ಲಿ ಏನು ನಡೀತಿದೆ ಅನ್ನೋದು ಮುಖ್ಯ. ರಾಜ್ಯದ ಆಡಳಿತ ಕಳೆದ ಒಂದೂವರೆ ತಿಂಗಳಿಂದ ಸಂಪೂರ್ಣ ಸ್ಥಗಿತಾಗಿದೆ. ವಿರೋಧ ಪಕ್ಷದ ಆರೋಪಗಳನ್ನು ನಿಭಾಯಿಸಲು ಸಭೆಯಲ್ಲಿ ತೊಡಗಿದ್ದಾರೆ.
ರಾಜ್ಯದ ಜನತೆ ಸರ್ಕಾರವನ್ನು ಸುರಕ್ಷಿತ, ಅಭಿವೃದ್ಧಿ ಪರ ಕೆಲಸ ಮಾಡೋಕೆ ಆರಿಸಿ ತಂದಿದ್ರು. ಒಂದು ಕಡೆ ಹಣ ಸಂಪೂರ್ಣ ಖಾಲಿ ಆಗಿದೆ. ಇನ್ನೊಂದೆಡೆ ಬರಗಾಲದ ಪರಿಹಾರ ನೀಡಿಲ್ಲ. ಅತಿವೃಷ್ಟಿ, ಮನೆ ಹಾನಿ ಆಗಿದ್ರು ಇದುವರೆಗೂ ಪರಿಹಾರ ಸಿಕ್ಕಿಲ್ಲ. ಮುಳುಗಡೆ ಪ್ರದೇಶಗಳಿಗೆ ಪರಿಹಾರ ಸಿಕ್ಕಿಲ್ಲ, ವಿಡಿಯೋ ಕಾನ್ಫರೆನ್ಸ್ ಬಿಟ್ಟು ಏನು ಮಾಡಿಲ್ಲ. ಕಷ್ಟದಲ್ಲಿರುವ ಜನರಿಗೆ ಸ್ಪಂದಿಸೋದು ಸರ್ಕಾರದ ಜೀವಂತ ಲಕ್ಷಣ. ಇವರ ತಾತ್ಸಾರ ಮನೋಭಾವನೆ ನೋಡಿದ್ರೆ ಜನರಿಗೆ ಸ್ಪಂದನೆ ಮಾಡದ ಸರ್ಕಾರ. ಇಂತಹ ಸರ್ಕಾರ ಬೇಕಾ ಅನ್ನೋ ಪ್ರಶ್ನೆ ಈಗ ಜನರದ್ದು.
ಹೈಕಮಾಂಡ್ ಶ್ರೀರಕ್ಷೆ ಎಲ್ಲಿಯವರೆಗೆ ಅನ್ನೋದು ಅವರಿಗೆ ಬಿಟ್ಟ ವಿಚಾರ. ಆಂತರಿಕವಾಗಿ ಏನಾಗಿದೆ ಅನ್ನೋದು ನಮಗೆ ಗೊತ್ತಿಲ್ಲ. ಒಂದು ವರದಿಯಲ್ಲಿ ರಕ್ಷೆ ಇದೆ ಅಂತಾರೆ. ಇನ್ನೊಂದು ವರದಿಯಲ್ಲಿ ನಾವು ಪ್ರಾದೇಶಿಕ ಪಕ್ಷ ಆಗಲ್ಲ ಅಂತಾರೆ. ಶಿಗ್ಗಾವ್ ಉಪಚುನಾವಣೆಗೆ ಟಿಕೆಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಪಕ್ಷಕ್ಕೆ ನಿಷ್ಠಾವಂತರಿದ್ದರೆ, ಕಷ್ಟದಲ್ಲಿ ಪಕ್ಷ ಕಟ್ಟಿದವರಿಗೆ ಕೊಡಬೇಕು ಅಂದಿದ್ದೇನೆ. ನಮ್ಮ ಕಾರ್ಯಕರ್ತರು ಯಾರು ನನ್ನ ಮಗನಿಗೆ ಕೊಡು ಅಂತ ಹೇಳಿಲ್ಲ. ನನ್ನ ಮಗ ಸ್ಪರ್ಧೆ ಮಾಡುವ ವಿಚಾರವೇ ಇಲ್ಲಾ ಎಂದು ಬೊಮ್ಮಾಯಿ ಹೇಳಿದ್ದಾರೆ.



