ರಾಜ್ಯಪಾಲರ ವಿರುದ್ಧ.. ಸಿದ್ದು ಪರ ಹಂಸಲೇಖ ಬ್ಯಾಟಿಂಗ್

Political news: ಸದ್ಯ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ, ಸಿದ್ದರಾಮಯ್ಯರ ಮುಡಾ ಹಗರಣ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕಿದ್ದು, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಿಸೈನ್ ಮಾಡಬೇಕು ಎಂದು ವಿರೋಧ  ಪಕ್ಷದವರು ಪಟ್ಟು ಹಿಡಿದು ಕುಳಿತಿದ್ದಾರೆ. ಜೊತೆಗೆ ಕಾಂಗ್ರೆಸ್ಸಿಗರು ಕೂಡ ನಮ್ಮ ನಾಯಕನನ್ನು ನಾವು ಬಿಟ್ಟು ಕೊಡುವುದಿಲ್ಲವೆಂದು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಇನ್ನು ಕಾಂಗ್ರೆಸ್ ಹೈಕಮಾಂಡ್ ಕೂಡ ಸಿಎಂ ಸಿದ್ದರಾಮಯ್ಯಗೆ ತನ್ನ ಸಂಪೂರ್ಣ ಬೆಂಬಲ ಸೂಚಿಸಿದೆ.

ಇನ್ನು ಸಂಗೀತ ನಿರ್ದೇಶಕ ಹಂಸಲೇಖ ಕೂಡ ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದ್ದು, ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಅಣತಿಯಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಅವರನ್ನು ಕೇಂದ್ರಪಾಲರೆಂದು ಕರೆಯುವುದು ಉತ್ತಮ. ಅಲ್ಲದೇ ನಮಗೆ ಇಂಥ ಕೇಂದ್ರಪಾಲರ ಅವಶ್ಯಕತೆ ಇಲ್ಲ ಅಂತಾ ಹಂಸಲೇಖ ಹೇಳಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಪರ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿರುವ ಹಂಸಲೇಖ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್‌ಯಪಾಲರಿಗೆ ಜೆಡ್‌ ಶ್ರೇಣಿ ಭದ್ರತೆ ನೀಡಲಾಗಿದೆ. ಆದ್ರೆ ಭದ್ರತೆ ನೀಡಬೇಕಾಗಿರುವುದು ರಾಜ್ಯಪಾಾಲರಿಗೆ ಅಲ್ಲ. ಸಂವಿಧಾನಕ್ಕೆ. ಸಂವಿಧಾನ ಇರುವುದು ನಿರ್ಬಂಧಿಸಲು ಅಲ್ಲ, ನಿರ್ಮಿಸಲು ಎಂದು ಹಂಸಲೇಖ ಹೇಳಿದ್ದಾರೆ.

ಅಲ್ಲದೇ, ಸಿಎಂ ಸಿದ್ದರಾಮಯ್ಯ ನಿನ್ನೆ ಮೊನ್ನೆ ಹುಟ್ಟಿದ ರಾಜಕಾರಣಿ ಅಲ್ಲ. ಬಡವರ ಪರವಾಗಿ ಧ್ವನಿ ಎತ್ತುತ್ತಾ ರಾಜಕಾರಣ ಮಾಡಿಕೊಂಡು ಬಂದವರು. ಅವರರನ್ನು ಅಧಿಕಾರದಿಂದ ಕೆಳಗಿಳಿಸಿದರೆ, ಅಂಥ ಇನ್ನೊಬ್ಬ ವ್ಯಕ್ತಿ ಸಿಗುವುದು ಕಷ್ಟ. ಸಿಎಂ ಸಿದ್ದರಾಮಯ್ಯ ಜೊತೆ ನನಗೆ ಯಾವುದೇ ಸಂಬಂಧ ಮತ್ತು ಆತ್ಮೀಯತೆ ಇಲ್ಲ. ಹಾಾಗಿದ್ದರೂ ಅವರು ನನಗೆ ದಸರಾ ಉದ್ಘಾಟನೆಗೆ ಆಹ್ವಾನ ನೀಡಿದ್ದರು. ಅಂಥ ನಾಯಕರ ವಿರುದ್ಧ ಕೆಲಸಕ್ಕೆ ಬಾರದವರೆಲ್ಲ ಮಾತನಾಡುತ್ತಿದ್ದಾರೆ ಎಂದು ಹಂಸಲೇಖ ಅಸಮಾಧಾನ ಹೊರಹಾಕಿದ್ದಾರೆ.

About The Author