ಖರ್ಗೆ ಅಧಿಕಾರ ದುರುಪಯೋಗ ಮಾಡಿರುವುದು ತಪ್ಪಲ್ಲವೇ..?: ಲಹರ್ ಸಿಂಗ್

Political news: ಬಿಜೆಪಿ ಸಂಸದ ಲಹರ್ ಸಿಂಗ್ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಕೆಐಎಡಿಬಿ ಭೂಮಿ ಪಡೆಯಲು ಖರ್ಗೆ ಕುಟುಂಬಸ್ಥರೇನು ಏರೋಸ್ಪೇಸ್ ಉದ್ಯಮಿಗಳೇ..? ಮಾರ್ಚ್ 2024ರಲ್ಲಿ ಕೈಗಾರಿಕಾ ಸಚಿನ ಎಂ.ಬಿ.ಪಾಟೀಲ್ ಅವರು ಇದಕ್ಕೆ ಹೇಗೆ ಒಪ್ಪಿಗೆ ಸೂಚಿಸಿದರು..? ಎಂದು ಲಹರ್ ಸಿಂಗ್ ಪ್ರಶ್ನಿಸಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ, ಪುತ್ರ ಪ್ರಿಯಾಂಕ ಖರ್ಗೆ, ಇನ್ನೋರ್ವ ಮಗ ರಾಹುಲ್ ಖರ್ಗೆ, ಮತ್ತು ಮಲ್ಲಿಕಾರ್ಜುನ್ ಖರ್ಗೆ ಪತ್ನಿ ಸೇರಿ ಕೆಲವು ಆತ್ಮೀಯರು ಇದರ ಟ್ರಸ್ಟಿಗಳಾಗಿದ್ದಾರೆ. ಹಾಗಾಗಿ ಇದು ಅಧಿಕಾರದ ದುರುಪಯೋಗವಲ್ಲವೇ ಎಂದು ಲಹರ್ ಸಿಂಗ್‌ ಪ್ರಶ್ನಿಸಿದ್ದಾರೆ.

ಅಲ್ಲದೇ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಯಾವ ರೀತಿ ಭೂಮಿ ಬಿಟ್ಟುಕೊಟ್ಟರೋ, ಆ ರೀತಿ ಖರ್ಗೆ ಕುಟುಂಬದವರು ಈ ಭೂಮಿಯನ್ನು ಹಿಂದಿರುಗಿಸುತ್ತಾರಾ..? ಈ ಬಗ್ಗೆ ತನಿಖೆ ನಡೆಸಲಾಗುತ್ತದೆಯೇ ಎಂದು ಲಹರ್ ಸಿಂಗ್ ಪ್ರಶ್ನಿಸಿದ್ದಾರೆ.

About The Author