Friday, November 22, 2024

Latest Posts

ಪಾಕಿಸ್ತಾನಕ್ಕೆ ನುಗ್ಗಿದ ಮೋದಿ ವಿಮಾನ- 46 ನಿಮಿಷ ಸರ್ಜಿಕಲ್ ಸ್ಟ್ರೈಕ್!

- Advertisement -

ಪ್ರಧಾನಿ ನರೇಂದ್ರ ಮೋದಿ ಅವ್ರು ಇದ್ದಕ್ಕಿದ್ದಂತೆ ಪಾಕಿಸ್ತಾನಕ್ಕೆ ಬಿಗ್ ಶಾಕ್ ಒಂದನ್ನ ಕೊಟ್ಟಿದ್ದಾರೆ. ಸ್ವತಃ ತಾವೇ ವಿಮಾನದಲ್ಲಿ ಪಾಕಿಸ್ತಾನದೊಳಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವ್ರು ಮೊನ್ನೆ ಮೊನ್ನೆಯಷ್ಟೇ ಉಕ್ರೇನ್ ದೇಶಕ್ಕೆ ಹೋಗಿದ್ರು. ಉಕ್ರೇನ್ ಅಧ್ಯಕ್ಷ ಝೆಲೆನ್ಸ್​​ಕಿ ಜೊತೆ ಮಾತುಕತೆ ನಡೆಸಿದ್ರು. ಆದ್ರೆ ಅಲ್ಲಿಂದ ವಾಪಸ್ ಬರೋವಾಗ ಪಾಕಿಸ್ತಾನಕ್ಕೆ ಶಾಕ್​ ಕೊಟ್ಟು ಬಂದಿದ್ದಾರೆ. ಮೋದಿ ಮಾಡಿದ ಈ ಕೆಲಸಕ್ಕೆ ಪಾಕಿಸ್ತಾನ ಶೇಕ್ ಶೇಕ್ ಆಗಿ ಹೋಗಿದೆ. ಪ್ರಧಾನಿ ಮೋದಿ ಉಕ್ರೇನ್​​ನಿಂದ ಭಾರತಕ್ಕೆ ವಾಪಸ್ ಬರುವಾಗ ಸೀದಾ ಪಾಕಿಸ್ತಾನ ವಾಯು ಪ್ರದೇಶದಿಂದ ಬಂದಿದ್ದಾರೆ. ಮೋದಿ ನಮ್ಮ ದೇಶದ ಮೇಲೆ ಹಾರ್ತಿದ್ದಾರೆ ಅಂತ ಸ್ವತಃ ಪಾಕಿಸ್ತಾನ ವಿಮಾನಯಾನ ಇಲಾಖೆ, ಏರ್​ಫೋರ್ಸ್​ಗೂ ಗೊತ್ತೇ ಇರಲಿಲ್ಲ.

ಸಾಮಾನ್ಯವಾಗಿ ಯಾವುದೇ ವಿದೇಶಿ ವಿಮಾನ, ಇನ್ನೊಂದು ದೇಶದ ಮೇಲೆ ಹಾರಬೇಕೆಂದರೆ, ಅಲ್ಲಿನ ವಾಯುಪ್ರದೇಶದಲ್ಲಿ ಹಾರಾಟ ನಡೆಸಬೇಕೆಂದ್ರೆ ಆ ದೇಶದ ಪರ್ಮಿಷನ್ ತಗೋಬೇಕು. ಹಾಗೇ ಇನ್​ಫರ್ಮ್ ಮಾಡಲೇಬೇಕು. ಆದ್ರೆ ಇಲ್ಲಿ ಪ್ರಧಾನಿ ಮೋದಿ ಅವರಿದ್ದ ಫ್ಲೈಟ್ ಯಾವುದೇ ಮುನ್ಸೂಚನೆ ನೀಡದೇ ಪಾಕಿಸ್ತಾನದ ಮೇಲೆ ಹಾರಾಟ ಮಾಡಿದು. ಅದೂ ಕೇವಲ ಒಂದೆರಡು ನಿಮಿಷ ಅಲ್ಲ. ಬರೋಬ್ಬರಿ 46 ನಿಮಿಷ ಪಾಕಿಸ್ತಾನದ ಮೇಲೆ ಪ್ರಧಾನಿ ಸವಾರಿ ಮಾಡಿದ್ರು..

ಸಾಮಾನ್ಯವಾಗಿ ವಾಣಿಜ್ಯ ವಿಮಾನಗಳು ಹಾರಾಟ ನಡೆಸುವುದಕ್ಕೆ ಅನುಮತಿ ನೀಡಿರೋ ದೇಶದ ಮೇಲೆ ಪ್ರಧಾನಿ ಅಥವಾ ಗಣ್ಯಾತಿಗಣ್ಯರ ವಿಮಾನ ಹಾರಾಟ ನಡೆಸುವುದಕ್ಕೆ ಯಾವುದೇ ಪರ್ಮಿಷನ್ ಬೇಕಿರಲ್ಲ. ಆದರೂ, ಫಾರ್ಮಾಲಿಟೀಸ್​ಗೆ ಅಂತ ಪೂರ್ವ ಮಾಹಿತಿ ನೀಡ್ತಾರೆ.. ಆದ್ರೆ ಉಕ್ರೇನ್‌ನಿಂದ ಭಾರತಕ್ಕೆ ವಾಪಸ್ ಬರ್ತಿದ್ದ ಪ್ರಧಾನಿ ಮೋದಿ ಅವ್ರು ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಮೋದಿ ವಿಮಾನದ ಪೈಲಟ್ ಪಾಕ್ ಏರ್​ ಟ್ರಾಫಿಕ್ ಕಂಟ್ರೋಲರ್​ಗೆ ಮಾಹಿತಿ ಕೊಡ್ಬೇಕಿತ್ತು ಆದ್ರೆ ಮಾಹಿತಿ ನೀಡಿಲ್ಲ. ಪಾಕಿಸ್ತಾನಕ್ಕೆ ಮಾಹಿತಿಯನ್ನೇ ಕೊಡದೇ ಮೋದಿ ಫ್ಲೈಟ್ ಆದೇಶದ ಮೇಲೆ 46 ನಿಮಿಷದಷ್ಟು ಹಾರಾಟ ನಡೆಸಿ ಬಾರ್ಡರ್ ದಾಟಿ ಭಾರತಕ್ಕೆ ಬಂದಿದೆ.

ಚಿತ್ರಾಲ್‌ನಲ್ಲಿ ಪಾಕ್‌ ಬಾರ್ಡರ್​ಗೆ ಎಂಟ್ರಿ ಕೊಟ್ಟ ಮೋದಿ ವಿಮಾನ, ಇಸ್ಲಾಮಾಬಾದ್‌ ಮತ್ತು ಲಾಹೋರ್‌ ಮೇಲೆ ಹಾರಾಟ ನಡೆಸಿದೆ. ಬಳಿಕ ಪಂಜಾಬ್​​​ನ ಅಮೃತಸರದಲ್ಲಿ ಭಾರತವನ್ನು ಪ್ರವೇಶಿಸಿದೆ. ಪ್ರಧಾನಿಯವ್ರ ವಿಮಾನ ಪಾಕ್​​​​​ ಆಗಸದ ಮೇಲೆ ಹಾರಾಡೋಕೆ ಯಾವದೇ ಸ್ಪೆಷಲ್ ಪರ್ಮಿಷನ್ ಬೇಕಿಲ್ಲ. ಆದರೆ, ಮೊದಲೇ ಮಾಹಿತಿ ನೀಡಿದ್ದರೆ ಅವರ ವಿಮಾನಕ್ಕೆ ವಿಶೇಷ ಕೋಡ್‌ ನೀಡಿ ಅಡೆ-ತಡೆಯಿಲ್ಲದೆ ವಿಮಾನ ಹಾರೋಕೆ ಅನುಕೂಲ ಮಾಡಿಕೊಡ್ತಿದ್ರು. ಯುದ್ಧದ ಸಂದರ್ಭಗಳಲ್ಲಿ ಮಾತ್ರ ಈ ರೀತಿ ವಿಮಾನ ಹಾರಾಟಕ್ಕೆ ನಿರ್ಬಂಧ ಇರುತ್ತೆ.

 

- Advertisement -

Latest Posts

Don't Miss