Sunday, December 22, 2024

Latest Posts

Rahul Gandhi:ಮದುವೆ ಯಾವಾಗ? : ರಾಹುಲ್ ಅಚ್ಚರಿ ಹೇಳಿಕೆ!

- Advertisement -

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮದುವೆ ಯಾವಾಗ? ಇದು ಕೋಟ್ಯಂತರ ಭಾರತೀಯರನ್ನು ಕಾಡುತ್ತಿರುವ ಮಿಲಿಯರ್ ಡಾಲರ್ ಪ್ರಶ್ನೆಯಾಗಿದೆ. ರಾಹುಲ್ ಹೋದಲ್ಲಿ, ಬಂದಲ್ಲಿ, ಕಾರ್ಯಕರ್ತರು ನಿಮ್ಮ ಮದುವೆ ಯಾವಾಗ? ಅನ್ನೋ ಪ್ರಶ್ನೆಯನ್ನು ಕೇಳೋದು ಕಾಮನ್ ಆಗಿದೆ. ಈ ಬಾರಿ ಕಾಶ್ಮೀರ ವಿದ್ಯಾರ್ಥಿಯನಿರು ರಾಹುಲ್​ಗೆ ಮದುವೆ ಪ್ರಶ್ನೆಯನ್ನು ಕೇಳಿದ್ದಾರೆ. ಹಾಗಾದ್ರೆ, ಮದುವೆ ಕುರಿತು ರಾಹುಲ್ ಹೇಳಿದ್ದೇನು ಅನ್ನೋದನ್ನ ತೋರಿಸ್ತೀವಿ ನೋಡಿ.

 

ಕಾಶ್ಮೀರದ ಶ್ರೀನಗರದಲ್ಲಿ ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಿದ್ರು. ಈ ವೇಳೆ ರಾಹುಲ್‌ ಗಾಂಧಿ ಅವರು, ‘ನೀವು ಮದುವೆಯಾಗುವ ಒತ್ತಡ ಎದುರಿಸುತ್ತಿದ್ದೀರಾ?’ ಎಂದು ವಿದ್ಯಾರ್ಥಿಗಳಿಗೆ ಕೇಳಿದರು. ಆಗ ವಿದ್ಯಾರ್ಥಿಗಳು ಇದೇ ಪ್ರಶ್ನೆಯನ್ನು ರಾಹುಲ್‌ಗೆ ಕೇಳಿದಾಗ, ‘ಕಳೆದ 20-30 ವರ್ಷಗಳಿಂದ ನನ್ನ ಮೇಲೆ ಮದುವೆಯಾಗಲು ಒತ್ತಡ ಹೇರಲಾಗುತ್ತಿದೆ. ನಾನು ಆ ಬಗ್ಗೆ ಯೋಚಿಸುತ್ತಿಲ್ಲವಾದರೂ, ಮದುವೆಯಾದರೆ…’ ಎಂದು ಮಾತನ್ನು ಅರ್ಧಕ್ಕೇ ನಿಲ್ಲಿಸಿದ್ರು.

‘ನಿಮ್ಮ ಮದುವೆಗೆ ನಮಗೂ ಆಹ್ವಾನಿಸಿ’ ಎಂಬ ಯುವತಿಯ ಮನವಿಗೆ ರಾಹುಲ್ ನಗುತ್ತ, ‘ಖಂಡಿತ’ ಎಂದರು. ಈ ವಿಡಿಯೋವನ್ನು ರಾಹುಲ್ ತಮ್ಮ ಯೂಟ್ಯೂಬ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿಗೆ ಮದುವೆ ಕುರಿತು ಯುವತಿಯರು ಪ್ರಶ್ನೆ ಕೇಳ್ತಿರೋದು ಇದೇ ಮೊದಲಲ್ಲ. ಲೋಕಸಭಾ ಚುನಾವಣೆ ವೇಳೆ ರಾಯ್ ಬರೇಲಿಗೆ ಭೇಟಿ ನೀಡಿದ್ದ ವೇಳೆಯೂ, ರಾಹುಲ್​ಗೆ ಇದೇ ಪ್ರಶ್ನೆ ಎದುರಾಗಿತ್ತು. ಆ ಪ್ರಶ್ನೆಗೆ ಉತ್ತರಿಸುವಂತೆ ಸಹೋದರಿ ಪ್ರಿಯಾಂಕಾ ಗಾಂಧಿ ಕೂಡ ಒತ್ತಯಿಸಿದ್ರು. ಆಗ ರಾಹುಲ್, ಬಹುಬೇಕಗನೇ ಮದುವೆ ಆಗಲೇಬೇಕಿದೆ ಎಂದು ಹೇಳಿದ್ರು. ರಾಹುಲ್ ಗಾಂಧಿಗೆ ಈಗಾಗಲೇ 54 ವರ್ಷ ವಯಸ್ಸಾಗಿದೆ.

ಹೀಗಾಗಿಯೇ, ಮದುವೆ ಯಾವಾಗ ಅನ್ನೋ ಪ್ರಶ್ನೆ ಕೇಳೋರ ಸಂಖ್ಯೆ ಹೆಚ್ಚಾಗ್ತಿದೆ. ಏನೇ ಆಗ್ಲಿ.. ರಾಹುಲ್ ಆದಷ್ಟು ಬೇಗ ಸಪ್ತಪದಿ ತುಳಿಯಲಿ ಅನ್ನೋದು ಕಾರ್ಯಕರ್ತರ ಹಾರೈಕೆಯಾಗಿದೆ.

- Advertisement -

Latest Posts

Don't Miss