Political news: ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಉಪಚುನಾವಣೆ ನಡೆಯಲಿದ್ದು, ನಾ ಮುಂದು ತಾಮುಂದು ಅಂತಾ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಾಯಕರು, ಕ್ಷೇತ್ರವನ್ನು ಗೆಲ್ಲಲು ಸತತ ಪ್ರಯತ್ನ ಮಾಡುತ್ತಿದ್ದಾರೆ.
ಚೆನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಓಡಾಟ ಶುರು ಮಾಡಿದ್ದು, ಮತ್ತೊಮ್ಮೆ ಜೆಡಿಎಸ್ ಗೆದ್ದರೆ, ಅತ್ಯುತ್ತಮವಾಗಿ ಕೆಲಸ ಮಾಡುತ್ತೇವೆ ಎನ್ನುವ ಭರವಸೆ ನೀಡುತ್ತಿದ್ದಾರೆ. ಇನ್ನು ಕಾಂಗ್ರೆಸ್ನನ್ನು ಗೆಲ್ಲಿಸಲೇಬೇಕು ಎಂದು ಡಿಸಿಎಂ ಡಿಕೆಶಿ ಕೂಡ, ಚೆನ್ನಪಟ್ಟಣದಲ್ಲಿ ಬಡವರಿಗೆ ನಿವೇಶನ ಹಂಚುತ್ತೇವೆ ಎಂದು ಹೇಳಿದ್ದಾರೆ. ಇವರಿಬ್ಬರು ಈ ರೀತಿ ಆ್ಯಕ್ಟೀವ್ ಇರಬೇಕಾದ್ರೆ, ನಾನು ಸುಮ್ಮನಿದ್ದರೆ, ಟಿಕೇಟ್ ಕೈ ತಪ್ಪಬಹುದು ಎಂದು ಬಿಜೆಪಿ ಟಿಕೇಟ್ ಆಕಾಂಕ್ಷಿ ಸಿ.ಪಿ.ಯೋಗೇಶ್ವರ್, ದೆಹಲಿಗೆ ದೌಡಾಯಿಸಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಜೊತೆ ಈ ಬಗ್ಗೆ ಚರ್ಚೆ ಮಾಡಲಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದ್ದು, ಇನ್ಮುಂದೆ ಎಲ್ಲಾ ಸರಿಯಾಗಿ ತನಗೇ ಟಿಕೇಟ್ ಸಿಗಬಹುದು. ಎಲ್ಲ ಸಮಸ್ಯೆ ಸರಿಹೋಗಬಹುದು ಎಂದು ಯೋಗೇಶ್ವರ್ ಯೋಚಿಸಿದ್ದರು. ಆದರೆ, ಕೇಂದ್ರ ಸಚಿವ ಕುಮಾರಸ್ವಾಮಿ ಆಡುವ ಮಾತುಗಳನ್ನು ಕೇಳಿರುವ ಯೋಗೇಶ್ವರ್, ತಾನೀಗ ದೆಹಲಿಗೆ ಹೋಗದಿದ್ದರೆ, ರಾಜಕೀಯ ಭವಿಷ್ಯಕ್ಕೆ ಧಕ್ಕೆ ಬರಬಹುದು ಎಂದು ಅರಿತು ದೆಹಲಿಗೆ ಹೋಗಿದ್ದಾರೆ.




