ಬೆಂಗಳೂರು: ಹಲವು ಕಾರಣಗಳಿಗೆ ವಿವಾದಕ್ಕೆ ಗುರಿಯಾಗಿದ್ದ ಹಾಗೂ ಬರಪೀಡಿತ 7 ಜಿಲ್ಲೆ (Seven Districts)ಗಳಿಗೆ ನೀರೊದಗಿಸುವ ಬಹು ನಿರೀಕ್ಷಿತ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿ (Yettinahole Integrated Drinking Water Supply Project) ಕೊನೆಗೂ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 6ನೇ ತಾರೀಖು ಅಂದ್ರೆ ಗೌರಿ ಹಬ್ಬದಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) 7 ವಿಯರ್ಗಳ ಮೂಲಕ ನೀರನ್ನು ಮೇಲೆತ್ತುವ ಮೂಲಕ ಯೋಜನೆಯನ್ನು ಲೋಕಾರ್ಪಣೆ (Inaugurate) ಮಾಡಲಿದ್ದಾರೆ.
ಯೋಜನೆಯ ಮೊದಲ ಹಂತವಾದ 8 ವಿಯರ್ಗಳ ಮೂಲಕ 28 ಟಿಎಂಸಿ ನೀರನ್ನು ಮೇಲೆತ್ತುವ ಲಿಫ್ಟ್ ಕಾಂಪೊನೆಂಟ್ ಪೂರ್ಣಗೊಳಿಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, 3ನೇ ನಂಬರ್ನ ವಿಯರ್ ಹೊರತುಪಡಿಸಿ ಉಳಿದ 7 ವಿಯರ್ಗಳು ಉದ್ಘಾಟನೆಗೆ ಸಿದ್ಧಗೊಂಡಿದ್ದು, ಗೌರಿ ಹಬ್ಬದ ದಿನದಂದೇ ಸಿಎಂ ಸಿದ್ದರಾಮಯ್ಯ ಎತ್ತಿನಹೊಳೆ ಮೊದಲ ಹಂತದ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಶುಕ್ರವಾರ 3 ಸಾವಿರ ಕ್ಯೂಸೆಕ್ ಲಿಫ್ಟ್ ಸಾಮರ್ಥದಲ್ಲಿ ಒಂದೂವರೆ ಸಾವಿರ ಕ್ಯೂಸೆಕ್ ನೀರನ್ನು ಮೊದಲ ಹಂತದಲ್ಲಿ ಲಿಫ್ಟ್ ಮಾಡಲಾಗುವುದು. ಇನ್ನು, 2014ರಲ್ಲಿ ಆರಂಭಗೊಂಡ ಎತ್ತಿನಹೊಳೆ ಯೋಜನೆಯ ಮೊದಲನೇ ಹಂತ ಏತ ಮತ್ತು ವಿದ್ಯುತ್ ಪೂರೈಕೆ ಕಾಮಗಾರಿಗಳ ಅನುಷ್ಠಾನದಲ್ಲಿ ಸಾಲು ಸಾಲು ಅಡಚಣೆಗಳು ಎದುರಾಗಿದ್ವು. ಪ್ರಸ್ತುತವಿಯರ್ 1, 4 ಮತ್ತು 5ರಿಂದ ನೀರನ್ನು ವಿತರಣಾ ತೊಟ್ಟಿ 3ಕ್ಕೆ ಪೂರೈಸಲಾಗುವುದು. ಬಳಿಕ ವಿತರಣಾ ತೊಟ್ಟಿ 3ರಿಂದ ನೀರನ್ನೆತ್ತಿ ವಿತರಣಾ ತೊಟ್ಟಿ 4ರ ಮುಖಾಂತರ ಗುರುತ್ವ ಕಾಲುವೆಗೆ ಹರಿಸಲು ಯೋಜಿಸಲಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಬರಪೀಡಿತ 7 ಜಿಲ್ಲೆಗಳಿಗೆ ನೀರು ಹರಿಸುವ ಯೋಜನೆ ಇದಾಗಿದೆ. ಮುಂಗಾರು ಅವಧಿಯಲ್ಲಿ ಅಂದ್ರೆ 139 ದಿನ ಸುಮಾರು 24.01 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿಗೆ ಹರಿಸಲಾಗುತ್ತದೆ.
7 ಬರಪೀಡಿತ ಜಿಲ್ಲೆಗಳ 29 ತಾಲೂಕಿನ 38 ಪಟ್ಟಣ ಹಾಗೂ 6 ಸಾವಿರದ 657 ಗ್ರಾಮಗಳ ಸುಮಾರು 75 ಲಕ್ಷ ಜನ ಮತ್ತು ಜಾನುವಾರುಗಳಿಗೆ ನೀರು ಒದಗಿಸುವುದು ಎತ್ತಿನಹೊಳೆ ಯೋಜನೆಯ ಮುಖ್ಯ ಉದ್ದೇಶವಾಗಿದೆ. 2047ರ ಮಾರ್ಚ್ 31ರೊಳಗೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ.
ಸತತ 10 ವರ್ಷಗಳ ಕಾಲ ಆಮೆಗತಿಯಲ್ಲಿ ಸಾಗಿದ ಎತ್ತಿನಹೊಳೆ ಮೊದಲ ಹಂತದ ಯೋಜನೆಯ ದೀರ್ಘ ಕಾಮಗಾರಿ ಕೊನೆಗೂ ಪೂರ್ಣಗೊಂಡಿದೆ. ಗೌರಿಹಬ್ಬದ ದಿನವೇ ಮುಖ್ಯಮಂತ್ರಿಗಳು ಯೋಜನೆಯನ್ನ ಲೋಕಾರ್ಪಣೆ ಮಾಡಲಿದ್ದಾರೆ. ಆದರೆ 7 ಬರಪೀಡಿತ ಜಿಲ್ಲೆಗಳ ಜನರ ಕುಡಿಯುವ ನೀರಿನ ಸಮಸ್ಯೆಗೆ ಅದೆಷ್ಟರ ಮಟ್ಟಿಗೆ ಪರಿಹಾರ ಸಿಗುತ್ತೆ ಎಂಬುದಕ್ಕೆ ಕಾಲವೇ

