Saturday, April 19, 2025

Latest Posts

K. Sudhakar 7,000 ಕೋಟಿ ಹಗರಣ : ಸಿದ್ದು vs ಸುಧಾಕರ್

- Advertisement -

ರಾಜ್ಯ ಸರ್ಕಾರ ವಿರುದ್ಧ ಮುಡಾ, ವಾಲ್ಮೀಕಿ ಹಗರಣ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಬಿಜೆಪಿಗೆ ಸರ್ಕಾರ ಶಾಕ್ ಕೊಟ್ಟಿದೆ. ಕೋವಿಡ್ ವೇಳೆ ನಡೆದಿದೆ ಎನ್ನಲಾದ ಹಗರಣದ ಕುರಿತ ವರದಿ ಸಿಎಂ ಕೈಸೇರಿದೆ. ಇದಕ್ಕೆ ಮಾಜಿ ಸಚಿವ ಸುಧಾಕರ್ ಕೂಡ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.

ಕೋವಿಡ್ ಕಾಲದ ಹಗರಣ ಆರೋಪಕ್ಕೆ ಸಂಬಂಧಿಸಿದ ವರದಿರನ್ನು ಸಿಎಂ ಸಿದ್ದರಾಮಯ್ಯಗೆ ಸಲ್ಲಿಕೆ ಮಾಡಲಾಗಿದೆ. ಜಸ್ಟೀಸ್ ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದ ಆಯೋಗವು ತನಿಖಾ ವರದಿಯನ್ನು ಸಲ್ಲಿಸಿದೆ. ಇದರ ಬೆನ್ನಲ್ಲೇ ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ಗೆ ಸಂಕಷ್ಟ ಶುರುವಾಗಿದ್ಯಾ ಅನ್ನೋ ಪ್ರಶ್ನೆ ಉದ್ಭವಿಸಿದೆ.

2023ರ ಆಗಸ್ಟ್​ನಲ್ಲಿ ಕುನ್ಹಾ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದ್ದ ಸಿದ್ದರಾಮಯ್ಯ ಸರ್ಕಾರ ನೇಮಿಸಿತ್ತು. ವೆಂಟಿಲೇಟರ್ ಖರೀದಿ, ಆಕ್ಸಿಜನ್ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ರ್ಯಾಪಿಟ್ ಅಂಟಿಜೆನ್ ಟೆಸ್ಟ್ ಕಿಟ್​ಗಳ ಖರೀದಿಯಲ್ಲಿ ನಡೆದಿರೋ ಅಕ್ರಮ ಆರೋಪಗಳ ಕುರಿತು ವರದಿ ಸಲ್ಲಿಕೆ ಮಾಡಲಾಗಿದೆ. ಎಷ್ಟು ವೈದ್ಯಕೀಯ ಖರೀದಿ ಆಗಿತ್ತು? ಯಾವೆಲ್ಲ ಔಷಧ ಖರೀದಿ ಮಾಡಿದ್ರು ವಿಭಾಗವಾರು ಯಾವುದಕ್ಕೆ ಹಣ ಖರ್ಚಾಗಿದೆ? ಏನೆಲ್ಲ ಖರೀದಿ ಆಗಿದೆ? ಎಂಬುದರ ಕುರಿತ ಬಿಲ್​ಗಳನ್ನು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

ಮೈಕಲ್ ಡಿ ಕುನ್ಹಾ ನೇತೃತ್ವದ ವರದಿ ಕುರಿತು ಪ್ರತಿಕ್ರಿಯಿಸಿದ ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೋವಿಡ್ ಕಾಲದಲ್ಲಿ ನಾನು ಅಂತಃಕರಣದಿಂದ ಕೆಲಸ ಮಾಡಿದ್ದೇನೆ. ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ. ಅಕ್ರಮ ಆರೋಪವನ್ನು ರಾಜಕೀಯ ಮತ್ತು ಕಾನೂನಾತ್ಮಕವಾಗಿ ಎದುರಿಸುತ್ತೇನೆ. ಎಲ್ಲರೂ ಸೇರಿ ಗುಣಾಕಾರ, ಭಾಗಾಕಾರ ಮಾಡಿದ್ದಾರೆ. ಕೋವಿಡ್ ವೇಳೆ ಯಡಿಯೂರಪ್ಪ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್​ ರಚನೆ ಮಾಡಲಾಗಿತ್ತು. ಯಾವುದೇ ತೀರ್ಮಾನವಿದ್ದರೆ ಅದರ ಮೂಲಕವೇ ತೆಗೆದುಕೊಳ್ಳಲಾಗಿದೆ. ಸಮಿತಿಯವರು ಇವತ್ತಿನ ದರ ಆಧರಿಸಿ ಲೆಕ್ಕ ಹಾಕಿದ್ದಾರಂತೆ, ಊಹಾಪೋಹಗಳಿಗೆ ಉತ್ತರ ಕೊಡಲ್ಲ. ನಾನು ಇದನ್ನು ಎದುರಿಸುತ್ತೇನೆ. ನಾನು ಆತ್ಮವಂಚನೆ ಮಾಡಿಕೊಳ್ಳದೇ ಕೆಲಸ ಮಾಡಿದ್ದೇನೆ. ಈ ಸವಾಲನ್ನು ನಾನು ಸ್ವೀಕಾರ ಮಾಡ್ತೇನೆ, ಎದುರಿಸ್ತೇನೆ ಎಂದು ಹೇಳಿದ್ದಾರೆ

ಕೋವಿಡ್ ಹಗರಣದ ವರದಿ ಕುರಿತು ಮಾತನಾಡಿರುವ ಮಾಜಿ ಸಚಿವ ಬಿ.ಸಿ.ಪಾಟೀಲ್ ಆಕ್ರೋಶವ್ಯಕ್ತಪಡಿಸಿದ್ದಾರೆ. ಸರ್ಕಾರ ಬದಲಾವಣೆಯಾಗಿ 14 ತಿಂಗಳಾಗುತ್ತಾ ಬಂದಿದೆ. ಈವರೆಗೂ ಸುಮ್ಮನಿದ್ದವರು ಈಗ ಕೋವಿಡ್ ಹಗರಣದ ತನಿಖೆ ಮಾಡುತ್ತೇವೆಂದರೆ ಏನರ್ಥ? ಹಿಂದೆ ವಿಪಕ್ಷದಲ್ಲಿದ್ದು ಸುಮ್ಮನಿದ್ದರೆಂದರೆ ಅವತ್ತು ಕೋವಿಡ್ ಹಗರಣದಲ್ಲಿ ಇವರಿಗೂ ಪಾಲು ಇತ್ತಾ? ಮತ್ತೆ ಆಗ ಯಾಕೆ ಸುಮ್ಮನಿದ್ದರು? ಅದೇನೋ ಬಿಚ್ಚಿಡ್ತೀನಿ, ಬಿಚ್ಚಿಡ್ತೀನಿ ಅಂತಾ ಹೇಳ್ತಾರೆ ಅಲ್ವಾ.. ಬಿಚ್ಚಡಲಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.

ಕಾಂಗ್ರೆಸ್​ನ ಆಪರೇಷನ್ ಕಮಲ ಮಾಡ್ತಾರೆ ಎಂದು ಆರೋಪಿಸಿದ್ದಾರೆ. 136 ಶಾಸಕರಿದ್ದು ಅದು ಹೇಗೆ ಸಾಧ್ಯ? 90 ಶಾಸಕರನ್ನು ಕರೆದುಕೊಂಡು ಬಂದು ಸರ್ಕಾರ ಮಾಡೋದಕ್ಕೆ ಸಾಧ್ಯನಾ ಎಂದು ಪ್ರಶ್ನಿಸಿದ್ದಾರೆ. ಒಟ್ನಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಡಾ ಹಗರಣ, ವಾಲ್ಮೀಕಿ ಹಗರಣ ಆರೋಪ ಕೇಳಿಬಂದ ಬೆನ್ನಲ್ಲೇ, ಇದೀಗ ಕಾಂಗ್ರೆಸ್ ಸರ್ಕಾರ ಬಿಜೆಪಿ ಅವಧಿಯಲ್ಲಿನ ಹಗರಣಗಳಿಗೆ ಮರುಜೀವ ನೀಡಲು ಮುಂದಾಗಿದೆ.

- Advertisement -

Latest Posts

Don't Miss