ಹುಬ್ಬಳ್ಳಿ: ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿಯ ವಿರುದ್ಧ ವರೂರಿನ ಗುಣಧರನಂದಿ ಮಹಾರಾಜರು ಅಸಮಾಧಾನ ಹೊರಹಾಕಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಲ್ಲವನ್ನೂ ಫ್ರೀ ಕೊಟ್ಟು ಪ್ರತಿ ಮನೆಯಲ್ಲೂ ಸರಾಯಿ ಸಿಗುವಂತೆ ಮಾಡಿದೆ ಎಂದು ಗ್ಯಾರಂಟಿಗಳ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು
ಈ ದೇಶದ ದೌರ್ಭಾಗ್ಯ ಮಾರುಕಟ್ಟೆಯಲ್ಲಿ ಎರಡೂ ಸಾವಿರ ಲೀಟರ್ ಹಾಲು ಸಿಗುವುದಿಲ್ಲ. ಆದ್ರೆ ಎಂಟು ಸಾವಿರ ಸರಾಯಿ ಎಲ್ಲಿ ಬೇಕಾದ್ರು ಸಿಗುತ್ತದೆ. ಸರ್ಕಾರಗಳು ಎಲ್ಲವನ್ನೂ ಫ್ರೀ ಕೊಟ್ಟು, ಪ್ರತಿ ಮನೆಯಲ್ಲಿಯೂ ಸರಾಯಿ ಸಿಗುವಂತೆ ಆಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಪ್ರತಿ ಮನೆ ಮನೆಗೆ ಒಂದು ಲೀಟರ್ ಹಾಲು ಫ್ರೀ ಕೊಡಬೇಕು. ಹಾಲು ಕುಡಿದು ದೇಶಕ್ಕೆ ಸಂಕಷ್ಟ ಬಂದಾಗ ಯುದ್ದಕ್ಕೆ ಹೋಗುವಂತೆ ಯುವಕರು ಗಟ್ಟಿಯಾಗಬೇಕು. ಆದ್ರೆ ಸಾರಾಯಿ ಕುಡಿದು ನಪುಂಸುಕರಾಗಿ ಮನೆಯಲ್ಲಿ ಕುಳಿತುಕೊಳ್ಳಬೇಡಿ ಎಂದು ಸಲಹೆ ನೀಡಿದರು.