ಸಾಮಾನ್ಯವಾಗಿ ಕಾರಿನ ಡ್ಯಾಷ್ ಬೋರ್ಡ್ ನಲ್ಲಿ ಪುಟ್ಟ ಗಣೇಶನನ್ನ ಇಡೋದು ಕಾಮನ್. ಪ್ರಯಾಣದಲ್ಲಿ ಯಾವುದೇ ವಿಘ್ನ ಬರದಂತೆ ಕಾಪಾಡು ಎಂಬುದಕ್ಕಾಗಿ ಈ ರೀತಿ ಗಣೇಶನ ಪುಟ್ಟ ವಿಗ್ರಹಳನ್ನ ಇಟ್ಕೋತಾರೆ.ಕಾರು ಚಾಲನೆ ಮಾಡುವ ಮುನ್ನ ಬಹುತೇಕರು ಡ್ಯಾಶ್‌ಬೋರ್ಡ್ ಗಣೇಶನ ನೆನೆದು ಕಾರ್ ಸ್ಟಾರ್ಟ್ ಮಾಡುತ್ತಾರೆ.ಅಲ್ಲದೇ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿಗಳನ್ನ ಇಟ್ಕೋಬಾರದು ಅಂತಾರೆ, ಹಾಗಿದ್ರೆ ಡ್ಯಾಷ್ ಬೋರ್ಡ್ನಲ್ಲಿ ಗಣೇಶನನ್ನ ಇಡೋದು ಸರಿನಾ ತಪ್ಪಾ? ಹೇಳ್ತೀವಿ ..
ಹಿಂದೂ ಧರ್ಮದಲ್ಲಿ ಗಣೇಶನಿಗೆ ವಿಶೇಷ ಸ್ಥಾನವಿದೆ. ಯಾವುದೇ ಕಾರ್ಯ ಆರಂಭಿಸುವ ಮುನ್ನ ಗಣೇಶನ ಪ್ರಾರ್ಥಿಸಲಾಗುತ್ತದೆ. ಹೀಗಾಗಿ ಹಲವರು ತಮ್ಮ ಪ್ರಯಾಣ ಎಂದಿಗೂ ಸೇಫ್ ಆಗಿರ್ಬೇಕು ಅನ್ನೋ ಕಾರಣಕ್ಕೆ ಡ್ಯಾಶ್‌ಬೋರ್ಡ್‌ನಲ್ಲಿ ಗಣೇಶನ್ನು ಪೂಜಿಸ್ತಾರೆ.ಸಾಮಾನ್ಯವಾಗಿ ಮನೆಗಳಲ್ಲೂ ಸಹ ಹೆಚ್ಚು ಗಣೇಶನ ಮೂರ್ತಿ ಇಟ್ರೆ ಸಮಾನವವಾಗಿ ಪೂಜೆಯನ್ನು ಮಾಡಬೇಕೆಂದು ಎಲ್ರೂ ಹೇಳ್ತಾರೆ. ಆದ್ರೆ ವಾಹನ ,ಆಫೀಸ್ ಗಳಲ್ಲಿ ನಿಯಮಿತ ಮೂರ್ತಿ ಇಡಬೇಕುಂತಾ ಯಾರೂ ಹೇಳಲ್ಲಾ.ಯಾಕಂದ್ರೆ ಕಾರು, ಬಸ್, ಲಾರಿ, ಪಿಕಪ್, ಮೆಟಾಡೋರ್, ಆಟೋ ರಿಕ್ಷಾ ಸೇರಿದಂತೆ ಯಾವುದೇ ಬಗೆಯ ವಾಹನಗಳಲ್ಲಿಯೂ ಗಣೇಶನನ್ನು ಇಡಬಹುದು,ಪೂಜಿಸಬಹದು. ಪುಟ್ಟ ಗಣೇಶ ಮುಂದಿದ್ದರೆ ನಮ್ಮ ಪ್ರಯಾಣಕ್ಕೆ ಗಣೇಶನ ಆಶೀರ್ವಾದ ಸಿಗುತ್ತೇ ಎಂಬ ನಂಬಿಕೆ ಇದೆ..
ಕಾರಿನ ಡ್ಯಾಷ್‌ಬೋರ್ಡ್‌ನಲ್ಲಿ ಗಣೇಶನ ಪುಟ್ಟ ವಿಗ್ರಹ ಇಡುವುದು ಭಕ್ತಿಯ ಸಂಕೇತ. ಡ್ಯಾಶ್‌ಬೋರ್ಡ್‌ನಲ್ಲಿ ಗಣೇಶನಿದ್ದರೆ ಪ್ರಯಾಣ ಸುಗಮ ಮತ್ತು ಸುರಕ್ಷಿತವಾಗಿರುತ್ತದೆ ಎಂದು ಜನರು ನಂಬುತ್ತಾರೆ. ಬಾಡಿಗೆ ವಾಹನಗಳನ್ನು ಓಡಿಸುವವರು ಗಣೇಶನನ್ನು ಅದೃಷ್ಟವೆಂದು ಭಾವಿಸುತ್ತಾರೆ.
ಗಣೇಶ ನಮ್ಮ ಜತೆಗೆ ಇದ್ದರೆ ಪ್ರಯಾಣದಲ್ಲಿ ಯಾವುದೇ ಅಡೆತಡೆ ಎದುರಾಗೋದಿಲ್ಲ, ಅಪಘಾತವಾಗದಂತೆ ಗಣೇಶ ನೋಡಿಕೊಳ್ಳಬಹುದು ಎಂಬ ನಂಬಿಕೆ ಜನರಲ್ಲಿದೆ. ಅಲ್ಲದೆ ದೇವರನ್ನು ಪ್ರಾರ್ಥಿಸುವುದರಿಂದ ಏಕಾಗ್ರತೆ ಮೂಡುತ್ತದೆ. ನಮ್ಮ ಮನಸ್ಸು ಗೊಂದಲದಲ್ಲಿರುವಾಗ , ಏನೋ ಟೆನ್ಷನ್ ಇರೋ ಸಂದರ್ಭದಲ್ಲಿ ಗಣೇಶನ ನೆನೆದರೆ ಪ್ರಶಾಂತತೆ ಸಿಗುತ್ತದೆ. ಈ ರೀತಿ ದೇವರನ್ನು ನೆನೆಯುವ ಸಂದರ್ಭದಲ್ಲಿ ಮನಸ್ಸಿನಲ್ಲಿ ಏಕಾಗ್ರತೆಯ ಅನುಭವವಾಗುತ್ತದೆ. ವಾಹನ ಚಾಲನೆಗೆ ಏಕಾಗ್ರತೆ ಅತ್ಯಗತ್ಯ. ಒತ್ತಡ ಮುಕ್ತವಾಗಿ ಪ್ರಯಾಣಿಸಲು ಗಣೇಶ ನೆರವಾಗುತ್ತಾನೆ.
ಇನ್ನು ಕಾರಿನ ಡ್ಯಾಶ್‌ಬೋರ್ಡ್‌ಗೆ ವಿಗ್ರಹವನ್ನು ಆಯ್ಕೆಮಾಡುವಾಗ, ಗಾತ್ರ ಮತ್ತು ನಿರ್ಮಿಸಿದ ವಸ್ತುವನ್ನು ಪರಿಗಣಿಸುವುದು ಬಹಳ ಮುಖ್ಯ. ಚಾಲಕನ ನೋಟಕ್ಕೆ ಅಡ್ಡಿಯಾಗದಂತೆ ಡ್ಯಾಶ್‌ಬೋರ್ಡ್‌ನಲ್ಲಿ ಚೆನ್ನಾಗಿ ಹೊಂದಿಕೊಳ್ಳುವ ಪುಟ್ಟ ವಿಗ್ರಹವನ್ನು ಆಯ್ಕೆಮಾಡಬೇಕು. ಹಳೆಯದಾದ ಮುರಿದು ಹೋದ ಗಣೇಶನ ವಿಗ್ರಹವನ್ನು ಕಾರಿನಲ್ಲಿ ಇಟ್ಟುಕೊಳ್ಳಬೇಡಿ. ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಗಣೇಶನ ವಿಗ್ರಹವಿದೆ ಎಂದು ಅಗರಬತ್ತಿ, ದೀಪ ಇಡಬೇಡಿ. ಬೆಂಕಿಯಿಂದ ಬೇರೆ ಅಪಾಯಗಳು ಉಂಟಾಗಬಹುದು. ಕೆಲವರು ಗಣೇಶನಿಗೆ ಹೂವು ಇಡುತ್ತಾರೆ. ಈ ರೀತಿ ಹೂವು, ಅಲಂಕಾರ ಮಾಡುವಾಗ ಪ್ರತಿದಿನ ಕ್ಲೀನ್ ಮಾಡಲು ಮರೆಯಬೇಡಿ.