Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಸೋಯಾ ಚಂಕ್ಸ್, ಬಾಸ್ಮತಿ ಅಕ್ಕಿ, 2 ಈರುಳ್ಳಿ, 2 ಕ್ಯಾರೆಟ್, ಅರ್ಧ ಕಪ್ ಬಟಾಣಿ, ಅರ್ಧ ಕಪ್ ಬೀನ್ಸ್, ಕೊತ್ತೊಂಬರಿ ಸೊಪ್ಪು, ಕಾಲು ಕಪ್ ಮೊಸರು, ಖಾರದ ಪುಡಿ, ಅರಿಶಿನ, ಗರಂ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಉಪ್ಪು, ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಕಾಳು ಮೆಣಸು, ತುಪ್ಪ.
ಮಾಡುವ ವಿಧಾನ: ಮೊದಲು ಅಕ್ಕಿಯನ್ನು ತೊಳೆದು ಸಪರೇಟ್ ಆಗಿ ಅನ್ನ ಮಾಡಿಟ್ಟುಕೊಳ್ಳಿ. ಅನ್ನ ಮಾಡುವಾಗ ಅದಕ್ಕೆ, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ಜೀರಿಗೆ ಸೇರಿಸಿ.
ಬಿಸಿ ನೀರಿಗೆ ಸೋಯಾ ಚಂಕ್ಸ್ ಹಾಕಿ, 10 ನಿಮಿಷ ನೆನೆಸಿಡಿ. ಒಂದು ಬೌಲ್‌ನಲ್ಲಿ ಗಟ್ಟಿ ಮೊಸರು, ಗರಂ ಮಸಾಲೆ, ಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿಡಿ.
ಈಗ ಕುಕ್ಕರ್‌ಗೆ ತುಪ್ಪ, ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ಬಟಾಣಿ, ಕ್ಯಾರೆಟ್, ಬೀನ್ಸ್ ಹಾಕಿ ಹುರಿಯಿರಿ. ಬಳಿಕ, ಇದಕ್ಕೆ ರೆಡಿ ಮಾಡಿಟ್ಟುಕೊಂಡ ಮೊಸರು, ನೆನೆಸಿಟ್ಟ ಸೋಯಾ ಚಂಕ್ಸ್ ಹಾಕಿ, ಒಂದು ವಿಶಲ್ ಬರಿಸಿ. ಬಳಿಕ ಬೆಂದ ಮಿಶ್ರಣ ಮತ್ತು ಅನ್ನವನ್ನು ಲೇಯರ್‌ನಲ್ಲಿ ಮಿಕ್ಸ್ ಮಾಡಿದ್ರೆ, ಸೋಯಾ ಚಂಕ್ಸ್ ಪಲಾವ್ ರೆಡಿ.