Thursday, September 19, 2024

Latest Posts

Recipe: ಕ್ಯಾಬೇಜ್ ಮಂಚೂರಿ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಅರ್ಧ ಕ್ಯಾಬೇಜ್ ತುರಿ, ಈರುಳ್ಳಿ, ಒಂದು ಸ್ಪೂನ್ ಶುಂಟಿ- ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಗರಂ ಮಸಾಲೆ, ಹಸಿಮೆಣಸಿನಕಾಯಿ, ಪೆಪ್ಪರ್ ಪುಡಿ, ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಕಾಾರ್ನ್ ಫ್ಲೋರ್ ಕಾಲು ಕಪ್‌, ಉಪ್ಪು, ಕೊಂಚ ನೀರು, ಕರಿಯಲು ಎಣ್ಣೆ.

ಮೊದಲು ಈರುಳ್ಳಿ, ಕ್ಯಾಬೇಜ್ ಸಣ್ಣಗೆ ಕತ್ತರಿಸಿ, ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ, ಖಾರದ ಪುಡಿ, ಪೆಪ್ಪರ್ ಪುಡಿ, ಗರಂ ಮಸಾಲೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಇದು ಕೊಂಚ ಹೊತ್ತಿನಲ್ಲೇ ನೀರು ಬಿಡುತ್ತದೆ. ಆಗ ಎಲ್ಲ ಹಿಟ್ಟುಗಳನ್ನು ಹಾಕಿ, ಅಗತ್‌ಯವಿದ್ದರಷ್ಟೇ ನೀರು ಹಾಕಿ, ಸಣ್ಣ ಉಂಡೆ ತಯಾರಿಸಿ, ಕಾದ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೂ ಕರಿಯಿರಿ. ಈಗ ಕ್ಯಾಬೇಜ್ ಬಜ್ಜಿ ರೆಡಿ.

ನೀವು ಇದನ್ನು ಮಂಚೂರಿಯಾಗಿ ಮಾಡಲು, ಒಂದು ಪ್ಯಾನ್‌ಗೆ ಎಣ್ಣೆ ಈರುಳ್ಳಿ, ಸ್ಪ್ರಿಂಗ್‌ ಆನಿಯನ್, ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ ಹಾಕಿ ಹುರಿಯಿರಿ. ನಂತರ ಸೋಯಾ ಸಾಸ್, ಟೊಮೆಟೋ ಸಾಸ್, ಚಿಲ್ಲಿ ಸಾಸ್, ವಿನೇಗರ್ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರೆಡಿ ಮಾಡಿಕೊಂಡ ಕ್ಯಾಬೇಜ್ ಬಜ್ಜಿಯನ್ನು ಇದಕ್ಕೆ ಸೇರಿಸಿದರೆ, ಕ್ಯಾಬೇಜ್ ಮಂಚೂರಿ ರೆಡಿ.

- Advertisement -

Latest Posts

Don't Miss