Hubli News: ಎಸ್, ಹುಬ್ಬಳ್ಳಿಯ ಹೊರವಲಯದ ಪುಣೆ ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಪಂಜುರ್ಲಿ ಫ್ಯಾಮಿಲಿ ಧಾಬಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತಾಗಿ ನಿಮ್ಮ ಕರ್ನಾಟಕ ಟಿವಿ ಸಾಕ್ಷಿ ಸಮೇತವಾಗಿ ಸುದ್ದಿಯನ್ನು ಬಿತ್ತರಿಸಿತ್ತು.
ಅಷ್ಟೇ ಅಲ್ಲದೇ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜಿಲ್ಲಾಡಳಿತ ಮದ್ಯ ನಿಷೇಧಿಸಿ ಆದೇಶ ಹೊಡಿಸಲಾಗಿತ್ತು. ಆದರೂ ಸಹ ಪಂಜುರ್ಲಿ ಫ್ಯಾಮಿಲಿ ಧಾಬಾ ಮಾಲೀಕ ಮಾತ್ರ ಇದಕ್ಕೆ ಯಾವುದಕ್ಕೂ ಖ್ಯಾರೆ ಎನ್ನದೇ ಬಿಂದಾಸ್ ಆಗಿ ಮದ್ಯ ಮಾರಾಟಕ್ಕೆ ಮುಂದಾಗಿದ್ದನು.
ಇದೀಗ ಎಚ್ಚೆತ್ತುಕೊಂಡಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಮದ್ಯ ಮಾರಾಟಕ್ಕೆ ಮುಂದಾಗಿದ್ದ ಪಂಜುರ್ಲಿ ಫ್ಯಾಮಿಲಿ ಧಾಬಾ ಮೇಲೆ ದಾಳಿ ಮಾಡಿದ್ದು, ಧಾಬಾವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ.
ಇನ್ನು ಇದೇ ಧಾಬಾ ಮಾಲೀಕನಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಹಿಂದೆಯೂ ಕೂಡಾ ಒಂದೆರಡು ಬಾರಿ ನೋಟಿಸ್ ನೀಡಿ, ಕೇಸ್ ಹಾಕಿದ್ದಾರಂತೆ. ಆದರೂ ಸಹ ಬುದ್ದಿ ಕಲಿಯದ ಪಂಜುರ್ಲಿ ಮಾಲೀಕ ತನ್ನ ಕಾಯಕವನ್ನು ಮುಂದುವರೆಸಿದ್ದಾನೆ ಎಂದ್ರೆ ಈತನಿಗೆ ಅಬಕಾರಿ ಇಲಾಖೆ, ಪೊಲೀಸ್ ಇಲಾಖೆಯ ಯಾವುದೇ ಭಯವಿಲ್ಲವೇ ಎಂಬ ಅನುಮಾನ ಕಾಡುತ್ತಿದೆ.
ಅಷ್ಟೇ ಅಲ್ಲದೇ ಸರ್ಕಾರ ಅಕ್ರಮ ಮದ್ಯ ಮಾರಾಟಕ್ಕೆ ಕಠಿಣ ಕಾನೂನು ರೂಪಿಸಿದರೂ ಸಹ ಯಾಕೆ ಪಂಜುರ್ಲಿ ಫ್ಯಾಮಿಲಿ ಧಾಬಾದಂತಹ ಮಾಲೀಕರಿಗೆ ಕಾನೂನು ಭಯವಿಲ್ಲ ಎಂಬ ಪ್ರಶ್ನೆ ಮೂಡುವಂತಾಗಿದೆ.
ಈಗಲಾದರೂ ಅಬಕಾರಿ ಇಲಾಖೆಯ ಅಧಿಕಾರಿಗಳು ಕೇವಲ ನಾಮಕಾವಸ್ತೆಗೆ ಪರಿಶೀಲನೆ ನಡೆಸುವ ಕೆಲಸ ಮಾಡದೇ, ಬಿಂದಾಸಾಗಿ ಅಕ್ರಮವಾಗಿ ಮದ್ಯ ಮಾರಾಟಕ್ಕೆ ಮುಂದಾಗಿದ್ದ ಪಂಜುರ್ಲಿ ಫ್ಯಾಮಿಲಿ ಧಾಬಾ ಮಾಲೀಕನ ವಿರುದ್ಧ ಕಠಿಣ ಕಾನೂನು ತೆಗೆದುಕೊಳ್ಳುವ ಕೆಲಸ ಮಾಡಬೇಕು. ಈ ಮೂಲಕ ಇತರ ಅಕ್ರಮ ಮದ್ಯ ಮಾರಾಟಗಾರರಿಗೆ ಖಡಕ್ ಎಚ್ಚರಿಕೆ ರವಾನಿಸಬೇಕಿದೆ.
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ