Friday, September 20, 2024

Latest Posts

Indira Canteen: ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ದಲಿತ ಮುಖಂಡರು ಕಿಡಿ

- Advertisement -

Hubli News: ಹುಬ್ಬಳ್ಳಿಯಲ್ಲಿ ಶುರುವಾದ ಸ್ಮಶಾನ ಜಾಗದ ವಿವಾದದ ಬಗ್ಗೆ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

ಶ್ರೀ ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಹಾಗೂ ರಕ್ಷಣಾ ಸಮಿತಿಯಿಂದ ವಿರೋಧ ವ್ಯಕ್ತವಾಗಿದ್ದು, ದಲಿತ ಮುಖಂಡ ವಿಜಯ ಗುಂಟ್ರಾಳ ಅಬ್ಬಯ್ಯ ವಿರುದ್ಧ ಕಿಡಿ ಕಾರಿದ್ದಾರೆ.  ನಗರದ ಮಂಟೂರ ರಸ್ತೆ ಬಳಿ ಇರುವ ರುದ್ರಭೂಮಿ. ಸತ್ಯಹರಿಶ್ಚಂದ್ರ ರುದ್ರಭೂಮಿಯಲ್ಲಿ ದಲಿತರು ಅಂತ್ಯಸಂಸ್ಕಾರ ಮಾಡ್ತಾ ಇರ್ತಾರೆ. 2019ರಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿದ್ರು. ಸ್ಥಳೀಯರ ವಿರೋಧಕ್ಕೆ ಆ ಸಮಯದಲ್ಲಿ ಬಿಟ್ಟಿದ್ರು. 2022ರಲ್ಲಿ ಕಾಪೌಂಡ್ ಒಡೆದು ಪೂರ್ವಿಕರ ಸಮಾಧಿ ಮೇಲೆ ರಸ್ತೆ ಮಾಡಿದ್ದಾರೆ. ಈ ಬಾರಿ ಸಂಪೂರ್ಣ ಕಬಳಿಸಬೇಕು ಅಂತ ಸರ್ಕಾರದ ನಿಯಮ ಗಾಳಿಗೆ ತೂರಿದ್ದಾರೆ. ದಬ್ಬಾಳಿಕೆ ಮಾಡಿ ರಾತ್ರೋರಾತ್ರಿ ಕಾಪೌಂಡ್ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲಿನ ಜನರೆಲ್ಲಾ ಅಬ್ಬಯ್ಯ ಅವರಿಗೆ ಮತ ಹಾಕಿದವರು. ಅವರ ಅಭಿಪ್ರಾಯ ಪಡೆಯದೇ ನಿರ್ಮಾಣ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ನೆಪ ಮಾತ್ರ, ಸಂಪೂರ್ಣ ಸ್ಮಶಾನ ಕಬಳಿಸುವ ಹುನ್ನಾರ ಮಾಡಿದ್ದಾರೆ. ವಿರೋಧ ಮಾಡಿದವರಿಗೆ ಪೋಲೀಸರ ಭಯ ಹುಟ್ಟಿಸಿದ್ದಾರೆ. ಕ್ಯಾಂಟೀನ್ ಮಾಡಿದ ಸ್ಥಳ ಕೂಡ ಸರಿಯಿಲ್ಲ. ಅಲ್ಲಿ ಶವ ಸುಡ್ತಾರೆ, ಅದರಿಂದ ರೋಗಗಳು ಬರುವ ಆತಂಕ ಹೆಚ್ಚಿದೆ. ಇಂದಿರಾ ಕ್ಯಾಂಟೀನ್ ನೆಪದಲ್ಲಿ ಭೂಮಿ ಕಬಳಿಸುವ ಹುನ್ನಾರ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಪಾಲಿಕೆ ಆಯುಕ್ತರಿಗೂ ಪತ್ರ ಬರೆದಿದ್ದಾರೆ.

ನಿಯಮ ಮೀರಿ ಕಟ್ಟಿದ ಇಂದಿರಾ ಕ್ಯಾಂಟೀನ್ ತೆರವು ಮಾಡಬೇಕು. ದಲಿತರಿಗೆ ಸ್ಮಶಾನದಲ್ಲೂ ದಬ್ಬಾಳಿಕೆ ತಪ್ಪಿಲ್ಲ ಎಂಬಂತಾಗಿದೆ. ಈ ಹಿನ್ನೆಲೆ ನಾಳೆ ಬೆಳಿಗ್ಗೆ 11 ಗಂಟೆಗೆ ನಾವು ಪ್ರತಿಭಟನೆ ಮಾಡುತ್ತೇವೆ. ಸ್ಮಶಾನದಿಂದ ಪಾಲಿಕೆಯವರೆಗೆ ಬೃಹತ್ ಮೆರವಣಿಗೆ ಸಹ ಮಾಡ್ತೇವೆ. ಅಬ್ಬಯ್ಯ ಅವರು ಅಭಿವೃದ್ಧಿ ಮಾಡಿದ್ದೇನೆ ಅಂತಾರೆ, ಇಂತಹ ದರ್ಪದ ಮಾತು ನಿಲ್ಲಿಸಬೇಕು. ಈ ಹಿಂದೆ ಇದ್ದವರು ಸಹ ಅಭಿವೃದ್ಧಿ ಮಾಡಿದ್ದಾರೆ. ಸರ್ವಾಧಿಕಾರ ಧೋರಣೆ ಪೂರ್ವ ಕ್ಷೇತ್ರದಲ್ಲಿ ನಡೆಯೋದಿಲ್ಲ. ಕ್ಯಾಂಟೀನ್ ಸ್ಥಳಾಂತರಿಸುವವರೆಗೆ ಸ್ಮಶಾನದಲ್ಲೇ ಪ್ರತಿಭಟನೆ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -

Latest Posts

Don't Miss