Friday, July 11, 2025

Latest Posts

ಮಗನ ಶಾಲೆ ಫೀಸ್ ಕಟ್ಟಲು 18 ಗಂಟೆಗಳ ಕಾಲ ಕೆಲಸ ಮಾಡಿ, ನಿದ್ದೆ ಮಾಡಿದ್ದ ವ್ಯಕ್ತಿ ಸಾವು

- Advertisement -

International News: ಚೀನಾದ ಬೀಜಿಂಗ್‌ನಲ್ಲಿ ಓರ್ವ ತಂದೆ ತನ್ನ ಇಬ್ಬರು ಮಕ್ಕಳ ಶಾಲೆಯ ಫೀಸ್, ಮನೆ ನಿರ್ವಹಣೆಗೆ ಹಣ ಹೊಂದಿಸಲು 18 ಗಂಟೆಗಳ ಕಾಲ ಸತತವಾಗಿ ಕೆಲಸ ಮಾಡಿ, ಕೊನೆಗೆ ಬೈಕ್‌ ಮೇಲೆ ನಿದ್ದೆ ಮಾಡಿದ್ದು. ಅಲ್ಲೇ ಸಾವನ್ನಪ್ಪಿದ್ದಾರೆ.

ಈತ 55 ವರ್ಷದ ಡಿಲೆವರಿ ಏಜೆಂಟ್ ಆಗಿದ್ದು, ಮಮಗನ ಶಾಲೆಯ ಫೀಸ್ ಹೊಂದಿಸಲು ಸತತ 18 ಗಂಟೆಗಳ ಕಾಲ ಕೆಲಸ ಮಾಡಿದ್ದಾನೆ. ದೇಹಕ್ಕೆ ಸ್ವಲ್ಪವೂ ವಿಶ್ರಾಂತಿ ನೀಡದೇ, ಕೆಲಸ ಮಾಡಿದ ಪರಿಣಾಮ ಸಾವನ್ನಪ್ಪಿದ್ದಾನೆ. ಇದೀಗ, ಇದ್ದ ಓರ್ವ ಅನ್ನದಾತನಿಲ್ಲದೇ, ಈತನ ಕುಟುಂಬ ಅನಾಥವಾಗಿದೆ.

ಕಳೆದ ತಿಂಗಳಷ್ಟೇ ಇದೇ ರೀತಿ ಆರ್ಡರ್ ಡಿಲೆವರಿ ಮಾಡಲು ಹೋಗಿ, ಅಪಘಾತಕ್ಕೀಡಾಗಿ, ಈತನ ಕಾಲಿಗೆ ತೀವ್ರ ಪೆಟ್ಟು ಬಿದ್ದಿತ್ತು. ಆಸ್ಪತ್ರೆಗೆ ಸೇರಿ, ಚಿಕಿತ್ಸೆ ಪಡೆದಿದ್ದ. ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು. ಆಗಷ್ಟೇ ಆರೋಗ್ಯ ಸರಿಯಾಗುತ್ತದೆ ಎಂದು ವೈದ್ಯರು ಹೇಳಿದ್ದರು.

ಆದರೆ ಮನೆಯಲ್ಲಿ ತಾನೊಬ್ಬನೇ ದುಡಿದರೆ ಮಾತ್ರ, ಪತ್ನಿ ಮಕ್ಕಳ ಹೊಟ್ಟೆ ತುಂಬುತ್ತದೆ ಎಂದು, ವಿಶ್ರಾಂತಿ ಪಡೆಯದೇ ಕೆಲಸ ಮಾಡಿದ್ದಾನೆ. ಈ ರೀತಿ ವಿಶ್ರಾಂತಿ ಇಲ್ಲದೇ, ಕೆಲಸ ಮಾಡಿದ ಪರಿಣಾಮವಾಗಿ, ಬೈಕ್‌ನಲ್ಲಿ ಮಲಗಿದ್ದಾಗಲೇ, ಸಾವನ್ನಪ್ಪಿದ್ದಾನೆ.

ಈತ ಬೈಕ್‌ನಿಂದ ಬಿದ್ದಿದ್ದನ್ನು ನೋಡಿ, ಸ್ಛಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅದಾಗಲೇ, ಆತ ಸಾವನ್ನಪ್ಪಿದ್ದ. ಇತ್ತೀಚಿನ ದಿನದಲ್ಲಿ ಕೆಲಸದ ಒತ್ತಡ ತಾಳಲಾರದೇ, ಆತ್ಮಹತ್ಯೆ ಮಾಡಿಕೊಳ್ಳುವವರ ಮತ್ತು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ಸಂಗತಿಯಾಗಿದೆ.

- Advertisement -

Latest Posts

Don't Miss