ಪೊಲೀಸರ ಮೇಲೆಯೇ ಹಲ್ಲೆ: ಬೆಂಡಿಗೇರಿ ಪೊಲೀಸರಿಂದ ಆರೋಪಿ ಕಾಲಿಗೆ ಫೈರಿಂಗ್‌…

Hubli News: ಹುಬ್ಬಳ್ಳಿ: ಕಳ್ಳತನ ಪ್ರಕರಣದ ತನ್ನ ಸಹಚರರನ್ನ‌ ತೋರಸ್ತೀನಿ ಎಂದು ಕರೆದುಕೊಂಡು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿದ ಕಳ್ಳನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ತಾರಿಹಾಳ ಬಳಿ ನಡೆದಿದೆ.

ಕಳ್ಳತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನೋದ್ ಬೆಂಡಿಗೇರಿ ಎಂಬಾತನನ್ನು ನಿನ್ನೆ ಬಂಧಿಸಲಾಗಿತ್ತು. ಇಂದು ಇತರ ಆರೋಪಿಗಳನ್ನು ತಾರಿಹಾಳ ಸೇತುವೆಯ ಬಳಿ ತೋರಿಸಲು ತನಿಖಾ ತಂಡವನ್ನು ಕರೆದುಕೊಂಡು ಹೋದಾಗ ಆರೋಪಿ ವಿನೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಬೆಂಡಿಗೇರಿ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಜಯಶ್ರೀ ಚಲವಾದಿ ಆರೋಪಿ ವಿನೋದ ಕಾಲಿಗೆ ಪೊಲೀಸ್ ಕಾನ್ಸ್ ಸ್ಟೇಬಲ್ ರಮೇಶ ಹಿತ್ತಲಮನಿ ಹಾಗೂ ಜಯಶ್ರೀ ಗಾಯಗೊಂಡಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಜಯಶ್ರೀ ಚಲವಾದಿ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

 

ಕೆಎಂಸಿಗೆ ಭೇಟಿ‌ ನೀಡಿದ ಪೊಲೀಸ್ ಕಮಿಷನರ್ ಸಿಬ್ಬಂದಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅ ಅವರು, ನಿನ್ನೆ ಬೆಂಡಿಗೇರಿ ಠಾಣೆ ವ್ಯಾಪ್ತಿಯ ಹೊರಗಡೆ ಟ್ರಕ್ ನಿಲ್ಲಿಸಿ ಬೈಕ್ ಲ್ಲಿ ಹೋದ ಮೂರು ನಾಲ್ಕು ಜನ ಅಡ್ಡಗಟ್ಟಿ ಮೊಬೈಲ್ ಹಾಗೂ ಸುಮಾರು 20 ಸಾವಿರ ಹಣವನ್ನು ಕಿತ್ತುಕೊಂಡು ಪರಾರಕಯಾಗಿದ್ದರು.‌ಇದೇ ರೀತಿ ಮೂರು ನಾಲ್ಕು ಪ್ರಕರಣಗಳು ನಡೆದಿದ್ದವು. ಹೀಗಾಗಲೇ ಮೂರು ದರೋಡೆ ಪ್ರಕರಣಗಳು ದಾಖಲಾಗಿದ್ದು, ಇನ್ನೂ ಎರಡು ಪ್ರಕರಣ ದಾಖಲಾಗುವದು ಬಾಕಿ‌ಇದೆ ಎಂದರು.

ವಿಚಾರಣೆ ವೇಳೆ ಏಳೆಂಟು ಜನರ ತಂಡ ಇದೆ ಎಂಬ ಮಾಹಿತಿ ಇದೆ. ಹೀಗಾಗಲೇ ಮೂವರನ್ನು ವಶಕ್ಕೆ ತಗೆದುಕೊಳ್ಳಲಾಗಿದೆ. ಇವರಲ್ಲರೂ ಬೆಂಡಿಗೇರಿ ಠಾಣಾ ವ್ಯಾಪ್ತಿಯ ಆರೋಪಿಗಳಾಗಿದ್ದಾರೆ. ಇವರಲ್ಲಿ ವಿನೋದ 10-12 ವರ್ಷಗಳಿಂದ ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಒಂದು ಕೇಸನಲ್ಲಿ ಐದಾರು ವರ್ಷ ಜೈಲು ಶಿಕ್ಷೆ ಕೂಡ ಅನುಭವಿಸಿದ್ದಾನೆ. ಜೈಲಿಂದ ಬಂದ ಮೇಲೂ‌ ಸಾಕಷ್ಟು ಅಪರಾಧ ಕೃತ್ಯ ಎಸಗಿದ್ದಾನೆ. ಇಂದು ಮಧ್ಯಾಹ್ನ ಇತರ ಆರೋಪಿಗಳನ್ನು ತೋರಿಸುವದಾಗಿ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನ ತೋರಿಸಲು ತೆರಳಿದಾಗ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಏಕಾಏಕಿ ತಳ್ಳಿ ಓಡಿ ಹೋಗಲು ಯತ್ನ ಮಾಡಿದಲ್ಲದೆ ಕಲ್ಲು ತಗೆದುಕೊಂಡು ಹೊಡೆಯಲು ಯತ್ನ ಮಾಡಿದ್ದಾನೆ. ಆಗ ಸಬ್ ಇನ್ಸ್ ಪೆಕ್ಟರ್ ಜಯಶ್ರಿ ಚಲವಾದಿ ಗುಂಡು ಹಾರಿಸಿದ್ದಾರೆ‌ ಎಂದರು.

 

ಇದೊಂದು ದೊಡ್ಡ ತಂಡವಿದೆ ಎಂಬ ಮಾಹಿತಿ‌ಇದೆ. ಬೈಕ್ ಬಳಸಿಕೊಂಡು ಮೊಬೈಲ್ ಚೈನ್ , ದುಡ್ಡು ಏನು ಸಿಗುತ್ತೆ ಅದನ್ನು ಕಿತ್ತುಕೊಂಡು ಹೋಗಿದ್ದಾರೆ. ಹೊರವಲಯದ ದೇವಸ್ಥಾನಗಳಿಗೆ ಹುಡುಗ- ಹುಡುಗಿ ಹೋದವರನ್ನು ಟಾರ್ಗೆಟ್ ಮಾಡಿದ್ದರು ಎಂಬುದು ವಿಚಾರಣೆ ವೇಳೆ ತಿಳಿದಿ ಬಂದಿದೆ ಎಂದರು.

ಸಾಕಷ್ಟು ಪ್ರಕರಣಗಳು ದಾಖಲಾಗಿಲ್ಲ. ದುಡ್ಡು ‌ಕಳೆದುಕೊಂಡವರು,ಮೊಬೈಲ್ ಕಳೆದುಕೊಂಡವರು ಠಾಣೆಗೆ ಬಂದಿಲ್ಲ. ಅಂತವರು ಕೂಡಲೇ ಬಂದು ದೂರು ದಾಖಲಿಸಬೇಕು ಎಂದು ಮನವಿ ಮಾಡಿದರು. ಇನ್ನು ನಾಲ್ಕೈದು ಗ್ಯಾಂಗ್ ಇದೆ ಎಂದು ಆರೋಪಿ ಬಾಯಿ ಬಿಟ್ಟಿದ್ದು, ಇವರು ಅಕ್ಕ ಪಕ್ಕದ ಜಿಲ್ಲೆಗಳಿಗೆ ರೈಲು ಹಾಗೂ ಲಾರಿಯಲ್ಲಿ ತೆರಳಿ ಕೂಡ ದರೋಡೆ ಮಾಡಿದ ಪ್ರಕರಣಗಳು ಇದ್ದು, ಈ ಬಗ್ಗೆ ಗಂಭೀರವಾದ ತನಿಖೆ ನಡೆಸಲಾಗುವದು ಎಂದು ಕಮಿಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

 

About The Author