Thursday, October 16, 2025

Latest Posts

Recipe: ಮೆಕ್ಸಿಕನ್ ರೈಸ್ ರೆಸಿಪಿ

- Advertisement -

ಬೇಕಾಗುವ ಸಾಮಗ್ರಿ: ಅರ್ಧ ಕಪ್ ಬೇಯಿಸಿದ ಸ್ವೀಟ್ ಕಾರ್ನ್, ಒಂದು ಕ್ಯಾಪ್ಸಿಕಂ, ಒಂದು ಈರುಳ್ಳಿ, ಅನ್ನ, ಎರಡು ಟೊಮೆಟೋ, ನಾಲ್ಕು ಹಸಿಮೆಣಸಿನಕಾಯಿ, ಅರ್ಧ ಕಪ್ ನೆನೆಸಿ ಬೇಯಿಸಿದ ರಾಜ್ಮಾ, ನಾಲ್ಕು ಸ್ಪೂನ್ ಎಣ್ಣೆ, ಒಂದು ಸ್ಪೂನ್ ಟೊಮೆಟೋ ಸಾಸ್, ಚಿಲ್ಲಿ ಫ್ಲೇಕ್ಸ್, ಹರ್ಬ್ಸ್, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಹಸಿಮೆಣಸು, ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ಕ್ಯಾಪ್ಸಿಕಂ ಹಾಕಿ ಹುರಿಯಿರಿ. ಬಳಿಕ ಟೊಮೆಟೋ ಪ್ಯೂರಿ ಹಾಕಿ, 1 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಬಳಿಕ ಬಳಿಕ ಸಾಸ್, ಉಪ್ಪು, ಅರಿಶಿನ, ಖಾರದ ಪುಡಿ, ಗರಮ್ ಮಸಾಲೆ, ಚಿಲ್ಲಿ ಫ್ಲೇಕ್ಸ್, ಹರ್ಬ್ಸ್ ಹಾಕಿ, ಮಿಕ್ಸ್ ಮಾಡಿ.

ಬಳಿಕ ಕಾರ್ನ್ಟ್, ರಾಜ್ಮಾ, ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಬಳಿಕ ಕೊತ್ತೊಂಬರಿ ಸೊಪ್ಪನ್ನು ಹಾಕಿ ಗಾರ್ನಿಶ್ ಮಾಡಿದರೆ, ಮೆಕ್ಸಿಕನ್ ರೈಸ್ ರೆಡಿ.

- Advertisement -

Latest Posts

Don't Miss