Ankola News: ಅಂಕೋಲಾ: ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿದು, 11 ಮಂದಿ ಮೃತಪಟ್ಟಿದ್ದು, ಅದರಲ್ಲಿ ಎಲ್ಲರ ದೇಹ ಪತ್ತೆಯಾಗಿತ್ತು. ಆದರೆ ಅಂಕೋಲಾದ ಓರ್ವ ವ್ಯಕ್ತಿ ಮತ್ತು ಕೇರಳದ ಲಾರಿ ಚಾಲಕ ಅರ್ಜುನ್ ಮೃತದೇಹ ಮಾತ್ರ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಅರ್ಜುನ್ ಮೃತದೇಹ, ನದಿಯೊಳಗೆ ಮುಳುಗಿದ್ದ ಲಾರಿಯಲ್ಲಿ ಪತ್ತೆಯಾಗಿದ್ದು, ಎರಡು ಭಾಗವಾಗಿ, ಸಿಕ್ಕಿದೆ.
ಗುಡ್ಡ ಕುಸಿತಕ್ಕೆ ಲಾರಿ ನುಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಚಾಲಕ ಎರಡು ತುಂಡಾಗಿ ಸಾವನ್ನಪ್ಪಿದ್ದಾನೆ. ಇದೀಗ ಅರ್ಜುನ್ ಮೃತದೇಹ ಸಿಕ್ಕಿದ್ದು, ಇನ್ನೊಂದು ಮೃತ ದೇಹ ಕೂಡ ಪತ್ತೆಯಾಗಿದೆ. ವಾರದ ಹಿಂದೆ ಮತ್ತೆ ಕಾರ್ಯಾಚರಣೆ ನಡೆಸಿ, ಮೃತದೇಹ ಪತ್ತೆಹಚ್ಚಲು ಪ್ರಯತ್ನಿಸಲಾಗಿತ್ತು. ಮೊದಲು ಲಾರಿ ಸಿಕ್ಕಿದ್ದು, ಇದೀಗ ಇವರಿಬ್ಬರ ಮೃತದೇಹ ಸಿಕ್ಕಿದೆ.
ಜುಲೈ 16ರಂದು ಈ ದುರ್ಘಟನೆ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದು ಬಿದ್ದು, ಚಲಿಸುತ್ತಿದ್ದ ಲಾರಿ, ಲಾರಿ ಚಾಲಕ, ಅಲ್ಲೇ ಪುಟ್ಟ ಹೊಟೇಲ್ ನಡೆಸುತ್ತಿದ್ದ ಒಂದು ಕುಟುಂಬ ಸೇರಿ, 11 ಜನ ಮೃತಪಟ್ಟಿದ್ದರು.




