ಶ್ರೀ ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಮಾಜಿ ಸಿಇಓ ವಾಸುದೇವ ಮಯ್ಯ ಆತ್ಮಹತ್ಯೆಗೆ ಶರಣು..!

ಬೆಂಗಳೂರು: ಶ್ರೀ ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಕೋಟ್ಯಾಂತರ ರೂ. ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಮಾಜಿ ಸಿಇಓ ವಾಸುದೇವ ಮಯ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಲಸಂಧ್ರದಲ್ಲಿ ಈ ಘಟನೆ ನಡೆದಿದ್ದು, ಇತ್ತೀಚೆಗೆ ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಎಸಿಬಿ ದಾಳಿ ನಡೆಸಿತ್ತು. ಸೋಮವಾರ ಸಂಜೆ ಮನೆ ಮುಂದೆ ಕಾರಿನಲ್ಲಿ ಕುಳಿತು ವಿಷಸೇವಿಸಿ, ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿ ವಾಸುದೇವ ಮಯ್ಯ ತಮ್ಮ ಮಗಳ ಜೊತೆಗೆ ವಾಸವಾಗಿದ್ದರು.

ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ್ರಾ..?

ವಾಸುದೇವ ಮಯ್ಯ ಆತ್ಮಹತ್ಯೆಯ ಸುತ್ತ ಅನುಮಾನಗಳು ಹುತ್ತ ಹುಟ್ಟಿಕೊಂಡಿದೆ. ಅವರು ಮೃತಪಟ್ಟ ಕಾರಿನಲ್ಲಿ ಡೆತ್ ನೋಟ್ ಸೇರಿ ಸುಮಾರು 12 ಪುಟಗಳ ದಾಖಲೆ ಪತ್ತೆಯಾಗಿದೆ. ಆ ದಾಖಲೆಗಳಲ್ಲಿ ರಾಘವೇಂದ್ರ ಕೋ ಅಪರೇಟಿವ್ ಬ್ಯಾಂಕ್ ನ‌ ಅವ್ಯವಹಾರದ ಬಗ್ಗೆ ಮಾಹಿತಿ ಅಡಗಿದೆ ಎನ್ನಲಾಗಿದೆ. ವಾಸುದೇವ ಮಯ್ಯನ ಜೊತೆ ಬ್ಯಾಂಕ್ ವ್ಯವಹಾರ ಹಾಗೂ ಕೋಟ್ಯಾಂತರ ಹಣ ವಹಿವಾಟು ನಡೆಸಿದ್ದ ವ್ಯಕ್ತಿಗಳ ಹೆಸರು ಬರೆದಿರುವ ಶಂಕೆ ಇದೆ.

ಇನ್ನೊಂದೆಡೆ ಆಂಬ್ಯುಲೆನ್ಸ್ ನೀಡಿ ಅನ್ನೋ ರೋಗಿಗಳ ಬೇಡಿಕೆಗೆ ಬಿಬಿಎಂಪಿ ಟೆಂಪೋ ಟ್ರಾವಲರ್ ವ್ಯವಸ್ಥೆ ಮಾಡಿದ್ದು ವಲಯವಾರು ಹಂಚಿಕೆ ಮಾಡಿದೆ.

ಬಿಬಿಎಂಪಿ ಪೂರ್ವ ವಲಯಕ್ಕೆ 6 ಆಂಬ್ಯುಲೆನ್ಸ್ 33 ಟೆಂಪೋ ಟ್ರ್ಯಾವಲರ್, ಬಿಬಿಎಂಪಿ ಪಶ್ಚಿಮ ವಲಯಕ್ಕೆ 10 ಆಂಬ್ಯುಲೆನ್ಸ್ 54 ಟೆಂಪೊ ಟ್ರ್ಯಾವಲರ್, ಬಿಬಿಎಂಪಿ ದಕ್ಷಿಣ ವಲಯಕ್ಕೆ 20 ಆಂಬ್ಯುಲೆನ್ಸ್ 47 ಟೆಂಪೊ ಟ್ರ್ಯಾವಲರ್, ಬಿಬಿಎಂಪಿ ಆರ್ ಆರ್ ನಗರ ವಲಯಕ್ಕೆ 10 ಆಂಬ್ಯುಲೆನ್ಸ್ 10 ಟೆಂಪೊ ಟ್ರ್ಯಾವಲರ್, ದಾಸರಹಳ್ಳಿ ವಲಯಕ್ಕೆ 5 ಆಂಬ್ಯುಲೆನ್ಸ್ 7 ಟೆಂಪೋ ಟ್ರ್ಯಾವಲರ್, ಯಲಹಂಕ ವಲಯಕ್ಕೆ 9 ಆಂಬ್ಯುಲೆನ್ಸ್ 6 ಟೆಂಪೋ ಟ್ರ್ಯಾವಲರ್, ಮಹಾದೇವ ಪುರ ವಲಯಕ್ಕೆ 5 ಆಂಬ್ಯುಲೆನ್ಸ್ 11 ಟೆಂಪೋ ಟ್ರ್ಯಾವಲರ್, ಬೊಮ್ಮನಹಳ್ಳಿ ವಲಯಕ್ಕೆ 6 ಆಂಬ್ಯುಲೆನ್ಸ್ 11 ಟೆಂಪೋ ಟ್ರ್ಯಾವಲರ್ ಗಳನ್ನು ಹಂಚಿಕೆ ಮಾಡಲಾಗಿದೆ.
ನಾಗೇಂದ್ರ, ಕರ್ನಾಟಕ ಟಿವಿ, ಬೆಂಗಳೂರು

About The Author