Recipe: ಗಟ್ಟಿ ಮೊಸರು ಮಾಡಬೇಕು ಅಂತಾ ಹಲವರು ಟ್ರೈ ಮಾಡ್ತಾರೆ. ಆದರೆ ಮೊಸರು ಗಟ್ಟಿಯಾಗೋದೇ ಇಲ್ಲಾ. ನೀರು ನೀರಾಗಿ, ಲೋಳೆ ಲೋಳೆಯಾಗಿ ಇರುತ್ತದೆ. ಆದರೆ ನೀವು ಮೊಸರನ್ನು ಫ್ರಿಜ್‌ನಲ್ಲಿ ಇರಿಸದೇ, ಗಟ್ಟಿ ಮೊಸರು ರೆಡಿ ಮಾಡಬೇಕು ಅಂದ್ರೆ, ಇವತ್ತು ನಾವು ಹೇಳುವ ಪ್ರಯೋಗವನ್ನು ಟ್ರೈ ಮಾಡಬೇಕು.
ಹಾಲಿಗೆ ಹೆಪ್ಪು ಹಾಕುವ ಮುನ್ನ, ಹಾಾಲನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಬೇಕು. ಹೆಚ್ಚು ಬಿಸಿ ಇಲ್ಲದೇ, ತಣ್ಣಗೂ ಇಲ್ಲದೇ, ಕೊಂಚ ಬಿಸಿ ಇದ್ದಾಗ, ಹಾಲಿಗೆ ಹೆಪ್ಪು ಹಾಕಬೇಕು. ಚೆನ್ನಾಗಿ ಮಿಕ್ಸ್ ಮಾಡಬೇಕು. ಬಳಿಕ ಹಸಿಮೆಣಸಿನಕಾಯಿ ತೊಟ್ಟನ್ನು ಆ ಹೆಪ್ಪಿಗೆ ಹಾಕಿ ಮುಚ್ಚಿಡಬೇಕು. ಇದರಿಂದ ಮೊಸರು ಗಟ್ಟಿಯಾಗುತ್ತದೆ.
ಎರಡನೇಯದಾಗಿ ಒಂದು ಬಾದಾಮಿಯನ್ನು ಚೆನ್ನಾಗಿ ಕುಟ್ಟಿ, ಪುಡಿ ಮಾಡಿ, ಹೆಪ್ಪಿಗೆ ಸೇರಿಸಿಡಬೇಕು. ಮರುದಿನ ಗಟ್ಟಿ ಮೊಸರು ರೆಡಿಯಾಗಿರುತ್ತದೆ. ಇವೆರಡೂ ಪ್ರಯೋಗವನ್ನು ನೀವು ಮಾಡಿದ್ರೆ, ಐಸ್‌ಕ್ರೀಮ್‌ನಂಥ ಗಟ್ಟಿ ಮೊಸರನ್ನು ನೀವು ಮನೆಯಲ್ಲೇ ಸವಿಯಬಹುದು.