Wednesday, October 15, 2025

Latest Posts

ಕೊನೆಗೂ ಸತ್ಯವಾಯ್ತು ಸಿಎಂ ಸಿದ್ದರಾಮಯ್ಯ ಬಗ್ಗೆ ಕೊಡಿಶ್ರೀ ಹೇಳಿದ್ದ ಭವಿಷ್ಯ..?

- Advertisement -

Dharwad News: ಧಾರವಾಡ: ಮುಡಾ ಸೈಟ್ ಹಗರಣ ಹೆಜ್ಜೆ ಹೆಜ್ಜೆಗೂ ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡುತ್ತಿದೆ. ಪತ್ನಿ ಹೆಸರಿಗೆ ಹಂಚಿಕೆ ಆಗಿರುವ 14 ಸೈಟ್​​​ಗಳ ಅಕ್ರಮದ ಕೇಸ್​​​​, ಹತ್ತಾರು ರೀತಿಯಲ್ಲಿ ಸಿದ್ದರಾಮಯ್ಯಗೆ ಬಿಸಿ ತಟ್ಟಿದೆ.

ತವರಿನಲ್ಲೇ ಸಿಎಂ ವಿರುದ್ಧ ಎಫ್​ಐಆರ್ ದಾಖಲಾಗಲು ಕೌಂಟ್​ಡೌನ್​ ಶುರುವಾಗಿದ್ದು, ರಾಜೀನಾಮೆಗಾಗಿ ಸ್ವಪಕ್ಷದಲ್ಲೂ ಆಗ್ರಹ ಕೇಳಿಬಂದಿದೆ. ಈ ಮಧ್ಯೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯಯನ್ನು ಕಾಂಗ್ರೆಸ್​ ಕಾರ್ಯಕರ್ತರು ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ತಾಳೆ ಹಾಕುತ್ತಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಅಭಿಮನ್ಯುವಿನ ಬಿಲ್ಲಿನ ದಾರವನ್ನು ಮೋಸದಿಂದ ಕರ್ಣನ ಕೈಯಿಂದ ದಾರ ಕಟ್ ಮಾಡಿಸುತ್ತಾರೆ ಅಂತಾ ಹೇಳಿದ್ದೆ. ಮಹಾಭಾರತದಲ್ಲಿ ಕೃಷ್ಣನಿದ್ದ, ಭೀಮ ಗೆದ್ದ. ಇಲ್ಲಿ ಕೃಷ್ಣ ಇಲ್ಲ ದುರ್ಯೋಧನ ಗೆದ್ದ. ಅಭಿಮನ್ಯವಿನ ಹೆಂಡತಿ ರಣರಂಗ ಪ್ರವೇಶಿಸುತ್ತಾಳೆ ಎಂದಿದ್ದೆ ಈಗ ಏನಾಯ್ತು? ಬಿಲ್ಲಿನ ದಾರ ಕಟ್ ಮಾಡಿಸಿದರು. ಸಿದ್ದರಾಮಯ್ಯ ಜೀವನದಲ್ಲಿ ಎಂದಿಗೂ ಹೆಂಡತಿ ಹೊರಗೆ ಬಂದಿಲ್ಲ. ಪಾವಿತ್ರ್ಯತೆ ಇರುವ ಹೆಣ್ಣು ಮಗಳು. ಈಗ ಎಲ್ಲ ಕಡೆ ಅವರ ಹೆಸರು ಬಂತು ಎಂದಿದ್ದಾರೆ.

- Advertisement -

Latest Posts

Don't Miss