Tuesday, October 14, 2025

Latest Posts

ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್‌ಟಾಪ್ ಕಳ್ಳತನ ಪ್ರಕರಣ: 26 ಆರೋಪಿಗಳು ಅರೆಸ್ಟ್

- Advertisement -

Hubli News: ಹುಬ್ಬಳ್ಳಿ: ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್‌ಟಾಪ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಹುಬ್ಬಳ್ಳಿ ಪೊಲೀಸರು 26 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಹಳೇಹುಬ್ಬಳ್ಳಿ ಪೊಲೀಸರು ಲ್ಯಾಪ್‌ಟಾಪನ್ನು ವಶಕ್ಕೆ ಪಡೆದಿದ್ದು, ಈ ಬಗ್ಗೆ ಪೊಲೀಸ್ ಕಮಿಷನರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಮಿಕರ ಮಕ್ಕಳಿಗಾಗಿ ಇದ್ದ 101 ಲ್ಯಾಪ್ ಟಾಪ್ ಕಳುವಾಗಿದ್ದವು. ಕಾರ್ಮಿಕ ಇಲಾಖೆ ಅಸಿಸ್ಟೆಂಟ್ ಕಮಿಷ್ನರ್ ದೂರು ನೀಡಿದ್ರು. ಸೆಪ್ಟೆಂಬರ್ ನಲ್ಲಿ ಬೆಳಗಾವಿಯಿಂದ ತಂದು ಕಾರ್ಮಿಕ ಇಲಾಖೆಯಲ್ಲಿ ಇಡಲಾಗಿತ್ತು. ಆಗಸ್ಟ್ ನಲ್ಲಿ ಪರಿಶೀಲನೆ ಮಾಡಿದಾಗ ಕಳುವಾಗಿದ್ದು ಬೆಳಕಿಗೆ ಬಂದಿದೆ.
ಹಾವೇರಿ ಜಿಲ್ಲೆಯ ಕೂಲಿ ಕಾರ್ಮಿಕರಿಗೆ ನೀಡುವಂತೆ ಲ್ಯಾಪ್ ಟಾಪ್ ಗಳಾಗಿದ್ದವು. ಸುಮಾರು 55 ಲಕ್ಷ ಮೌಲ್ಯದ ಹೆಚ್ ಪಿ ಕಂಪನಿಯ ಲ್ಯಾಪ್ ಟಾಪ್ ಗಳಾಗಿದ್ದವು.

ತನಿಖೆ ಕೈಗೊಂಡು ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಿದ್ವಿ. ಅಲ್ಲೇ ಕೆಲಸ ಮಾಡುವ ದೀಪಕ್ ಮತ್ತು ಕೃಷ್ಣ ಕಳ್ಳತನ ಮಾಡಿದ್ರು. ಇಲಾಖೆಯಲ್ಲಿ ಮತ್ಯಾರಾದ್ರೂ ಸಹಾಯ ಮಾಡಿರೋ ಬಗ್ಗೆ ತನಿಖೆ ಮಾಡಿದ್ವಿ. ಇಬ್ಬರು ಎಸ್ ಡಿ ಎ ಮತ್ತು ಗುತ್ತಿಗೆ ಆದರದ ಮೇಲೆ ಕೆಲಸ ಮಾಡುವ 4 ಸಿಬ್ಬಂದಿಗಳು ಕೃತ್ಯ ಮಾಡಿದ್ದರು.
101 ಲ್ಯಾಪ್ ಟಾಪ್ ಗಳನ್ನ 6 ತಿಂಗಳು ಕಾಲದಲ್ಲಿ ಕದ್ದಿದ್ದಾರೆ. ಕಿಟಕಿಯಿಂದ ಇಳಿದು ಕದ್ದಿದ್ದಾರೆ. ಮೊದಲಿಗೆ 4 ಲ್ಯಾಪ್ ಟಾಪ್ ಗಳನ್ನು ಮಾರಾಟ ಮಾಡಿದ್ದಾರೆ.

ಇಲಾಖೆಯಿಂದ ಮಾರಾಟ ಮಾಡೋಕೆ ಹೇಳಿದ್ದಾರೆ ಅಂತ ಮಾರಾಟ ಮಾಡಿದ್ದಾರೆ. ಇನ್ನುಳಿದ ಸುಮಾರು 16 ಜನ ಲ್ಯಾಪ್ ಟಾಪ್ ಕಳ್ಳತನಕ್ಕೆ ಪ್ರೇರಣೆ ಹಿನ್ನೆಲೆ ವಶಕ್ಕೆ ಪಡೆದಿದ್ದೇವೆ. ತನಿಖೆಯಲ್ಲಿ 6 ಜನ ಇಲಾಖೆ ಸಿಬ್ಬಂದಿ ಸೇರಿ ಒಟ್ಟು 26 ಜನರನ್ನ ಬಂಧಿಸಲಾಗಿದೆ. 83 ಲ್ಯಾಪ್ ಟಾಪ್, ಎರಡು ಆಟೋ, ಎರಡು ಬೈಕ್ ಹಾಗೂ ಒಂದು ಕಾರನ್ನ ವಶಕ್ಕೆ ಪಡೆದಿದ್ದೇವೆ. ಹಿರಿಯ ಅಧಿಕಾರಿಗಳ ಕೈವಾಡ ಈ ಕೃತ್ಯದಲ್ಲಿ ಕಂಡು ಬಂದಿಲ್ಲ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುರೇಶ ಹುಳ್ಳೂರ ತಂಡ ರಚಿಸಲಾಗಿತ್ತು ಎಂದು ಪೊಲೀಸ್ ಕಮಿಷನರ್ ವಿವರಣೆ ನೀಡಿದ್ದಾರೆ.

- Advertisement -

Latest Posts

Don't Miss