ರಾಜೀನಾಮೆ ನೀಡಿ, ತಪ್ಪಿಲ್ಲವೆಂದು ಸಾಬೀತಾದಲ್ಲಿ ಮತ್ತೆ ಸಿಎಂ ಆಗಲಿ: ಕೇಂದ್ರ ಸಚಿವ ವಿ.ಸೋಮಣ್ಣ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆ ಮಾತಾಡಿರುವ ಕೇಂದ್ರ ಸಚಿವ ವಿ. ಸೋಮಣ್ಣ, ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಿಮ್ಮತನವನ್ನ ಉಳಿಸಿಕೊಳ್ಳಿ. ನಡೆದು ಬಂದ ದಾರಿಯನ್ನ ನೆನಪು ಮಾಡಿಕೊಳ್ಳಿ, ನಿಮ್ಮ ಇತಿಹಾಸವನ್ನ ಮುಂದಿನ ಪೀಳಿಗೆಗೆ ಕೊಡಬೇಕು ಎನ್ನುವವದಾರೇ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವುದು ಸರಿಯಲ್ಲ. ಪದೇ ಪದೇ ಮಾತನಾಡಿ ಕೈ, ಕಾಲು ಮತ್ತು ಬಾಯಿ ಗಾಯ ಮಾಡಿಕೊಂಡಿದ್ದಾರೆ. ಈಗ ಏನೂ ಉಳಿದಿಲ್ಲ ಸದನದಲ್ಲಿ ಚರ್ಚೆ ಮಾಡಿದಾಗ ಅದನ್ನೇ ಅಲ್ಲೇ ಕ್ಲಿಯರ್ ಮಾಡಿದಾಗ ಈ ಖಾಯಿಲೆ ಬರ್ತಾ ಇರಲಿಲ್ಲ. ಒಂದು ತಪ್ಪು ಮುಚ್ಚಿಕೊಳ್ಳಲಿಕ್ಕೆ ಹೋಗಿ 50 ತಪ್ಪುಗಳನ್ನ ಮಾಡ್ತಾ ಇದ್ದಾರೆ. ಅಂತಹ ನಾಯಕ ಈಗ ಅಧಿಕಾರದಲ್ಲಿರುವುದು ಅವಶ್ಯಕತೆ ಇಲ್ಲ. ಸಿದ್ದರಾಮಯ್ಯನವರ ಜೊತೆಗೆ ನಾನು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಾವು ಅವರು ಒಟ್ಟಿಗೆ ಜನತಾ ಪಾರ್ಟಿಯಲ್ಲಿ ಇದ್ದವರು. ಮೊದಲನೆಯ ಬಾರಿಗೆ ಮುಖ್ಯಮಂತ್ರಿ ಆದಾಗ, ಎರಡನೇ ಬಾರಿಗೆ ಮುಖ್ಯಮಂತ್ರಿ ಆದಾಗ ನಾವು ಮಾತನಾಡಲಿಲ್ಲ. ಯಾಕೋ ಏನೋ ಗೊತ್ತಿಲ್ಲ ತಪ್ಪು ಆಗಿ ಹೋಗಿದೆ. ತಪ್ಪು ಆಗಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ರಾಜೀನಾಮೆ ಕೊಡಿ ವಿಚಾರಣೆ ನಡೆಯಲಿ, ವಿಚಾರಣೆಯಲ್ಲಿ ನಿಮ್ಮ ತಪ್ಪು ಇಲ್ಲದೇ ಹೋದರೆ, ಮತ್ತೆ ನೀವೇ ಸಿಎಂ ಆಗಿ. ಅವಾಗ ನಾವೇ ನಿಮ್ಮ ಮನೆಗೆ ಬಂದು ಸನ್ಮಾನ ಮಾಡಿ, ಅಭಿನಂದಿಸುತ್ತೇವೆ ಎಂದು ವಿ.ಸೋಮಣ್ಣ ಹೇಳಿದ್ದಾರೆ.

ದಿನೇಶ್ ಗುಂಡೂರಾವ್ ಅವರಿಗೆ ಗುಂಡೂರಾವ್ ಮಗ ಎಂದು ತುಂಬಾ ಗೌರವ ಇದೆ. ಇತಿಹಾಸ ತಿಳಿದುಕೊಳ್ಳದೆ ಸಾವರ್ಕರ್ ಬಗ್ಗೆ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ. ದಿನೇಶ್ ಗುಂಡೂರಾವ್ ಯಾವ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದಾರೆಂಬುದು ನನಗೆ ಗೊತ್ತಿಲ್ಲ. ಬಿಜೆಪಿಯಲ್ಲಿ ಯಾವ ಬಣಾನೂ‌ ಇಲ್ಲ, ಪಣಾನೂ ಇಲ್ಲ. ಸಣ್ಣಪುಟ್ಟ ವ್ಯತ್ಯಾಸಗಳಿರುವುದು ನನಗೆ ಸರಿಯಾ ಮಾಹಿತಿ ಇಲ್ಲ. ಒಂದು ಸತ್ಯ ಬಿಜೆಪಿಯಲ್ಲಿ ಬಣ ಇಲ್ಲ, ಒಂದೇ ಬಣ ಭಾರತೀಯ ಜನತಾ ಪಕ್ಷ. ಯತ್ನಾಳ ಸಾಹೇಬರು ಯಾಕೇ ಮಾತನಾಡತ್ತಾರೋ ನನಗೆ ಗೊತ್ತಿಲ್ಲ. ಸಿಟ್ಟಿನಲ್ಲಿ ಮಾತನಾಡಿದ ಮಾತು ವಾಪಸ್ ಬರೋಲ್ಲ, ಅದರ ಅವಶ್ಯಕತೆ ಇಲ್ಲ ಎಂದು ನಾನು ಅವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ.

ದೇಶದ ಅಭಿವೃದ್ಧಿಯನ್ನ ಬಯಸುತ್ತಿರುವವರು ಪ್ರಧಾನಿಗಳು, 140 ಕೋಟಿ ಜನ. ಉಳಿದ ಸಮಸ್ಯೆಗಳನ್ನು ನಾಲ್ಕು ಗೋಡೆ ಮದ್ಯ ಕುಳಿತು ಬಗೆಹರಿಸಿಕೊಳ್ಳೋಣ. ಸಾವಿರ ಕೋಟಿ ರೂಪಾಯಿ ಇಟ್ಟುಕೊಂಡು ಮುಖ್ಯಮಂತ್ರಿ ಆಗಲು ಹೊರಟ ಮಹಾನಾಯಕನ ವಿಷಯ ನನಗೆ ಗೊತ್ತಿಲ್ಲ. ಅನಾವಶ್ಯಕ ಮಾತನಾಡಿ ಯಾರಿಗೂ ನೋವು ಕೊಡೊದು ಬೇಡ, ಪಕ್ಷಕ್ಕೆ ಮುಜುಗರ ಆಗುವುದು ಬೇಡ. ಆಪರೇಷನ್ ಮಾಡುವ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ರೇಲ್ವೆ ಇಲಾಖೆಯ ಸಾಮಾನ್ಯ ಸಭೆ ನಡೆಸಲು ಹುಬ್ಬಳ್ಳಿಗೆ ಬಂದದ್ದೇನೆ. ಹಳೆಯ ಕಾಲದ ನೆನಪುಗಳು ಅವಶ್ಯಕತೆ ಇಲ್ಲ, ನಮಗೆ ಕೆಲಸದ ಅವಶ್ಯಕತೆ ಇದೆ. ಹಳ್ಳಿಗಾಡಿನ ಜನರ ಸಂಪರ್ಕ ಸೇವೆಯಾಗಿ ರೇಲ್ವೆ ಕೆಲಸ ಮಾಡಬೇಕೆಂಬ ನನ್ನ ಆಸೆ ಇದೆ ಎಂದು ವಿ.ಸೋಮಣ್ಣ ಹೇಳಿದ್ದಾರೆ.

About The Author