Tech News: ಸಾಮಾನ್ಯವಾಗಿ ಕೊಡೆ ಅಥವಾ ಛತ್ರಿ ಅಂದ್ರೆ ನಮಗೆ ನೆನಪಿಗೆ ಬರೋದು ಸಾಮಾನ್ಯ ಕೊಡೆ. ಅದನ್ನು ಮಳೆ ಬಂದಾಗಲೋ, ಬಿಸಿಲು ಬಂದಾಗಲೋ ಬಳಸುವುದು. ಆದರೆ ಬಿಸಿಲು ಇರುವ ಸಂದರ್ಭದಲ್ಲಿ ನೀವು ಕೊಡೆ ಓಪನ್ ಮಾಡಿದಾಗ, ನಿಮಗೆ ನೆರಳಿನ ಜೊತೆ ತಣ್ಣನೆಯ ಗಾಳಿ ಬೀಸಿದೆ, ಆಹಾ ಅದೆಷ್ಟು ತಂಪು ತಂಪಾಗಿರತ್ತೆ ಅಲ್ವಾ. ಅಂಥ ಕೊಡೆಯೂ ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ನೀವು ಕೊಡೆ ಬಿಡಿಸಿ, ಬಟನ್ ಒಂದನ್ನು ಪ್ರೆಸ್ ಮಾಡಿದ್ರೆ, ತಣ್ಣನೆಯ ಗಾಳಿ ಬೀಸುತ್ತದೆ. ಇದಕ್ಕೆ ಯಾವ ಕರೆಂಟ್ ಕನೆಕ್ಷನ್ ಬೇಡಾ. ಇದನ್ನು ಬಳಸಿ ನೀವು ನಿಮ್ಮ ಮೊಬೈಲ್ ಚಾರ್ಜ್ ಮಾಡಬಹುದು. ಅಲ್ಲದೇ, ಬಾಟಲಿ ಬಳಸಿ, ಅದೇ ಫ್ಯಾನ್‌ನಲ್ಲಿ ನೀರು ಚಿಮ್ಮುವಂತೆ ಮಾಡುವ ಅವಕಾಶವೂ ಇದೆ.
ಇನ್ನು ಫ್ಯಾನ್ ಆನ್ ಆದ್ರೆ ನಮ್ಮ ಕೂದಲ ಗತಿಯೇನು ಅಂತಾ ಯೋಚಿಸುತ್ತಿದ್ದರೆ, ಆ ಸಮಸ್ಯೆ ಬರಬಾರದು ಎಂದು, ಫ್ಯಾನ್ ಮುಂದೆ, ಕವರ್ ಮಾಡಲಾಗಿದೆ. ಹಾಗಾಗಿ ಕೊಡೆ ಬಳಸುವಾಗ, ನೀವು ಫ್ಯಾನ್ ಆನ್ ಮಾಡಿದ್ರೂ, ನಿಮ್ಮ ಕೂದಲಿಗೆ, ತಲೆಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಕೊಡೆಯ ಬೆಲೆ ಎಷ್ಟು ಅಂತಾ ಕೇಳಿದ್ರೆ, 5 ಸಾವಿರದಿಂದ, 15 ಸಾವಿರದವರೆಗೆ ಇದೆ. ಇದನ್ನು ನೀವು ಪ್ರವಾಸ ಮಾಡುವಾಗ ಬಳಸಬಹುದು.