Wednesday, October 29, 2025

Latest Posts

ಅಂಬಾನಿ ಪುತ್ರನ ಕೈಯಲ್ಲಿದೆ 1934 ಕಾಲದ ಮಹಾರಾಜರ ಕಾರು, ಇದು ಭಾರತದ ಐಕಾನಿಕ್ ಯಾಕೆ?

- Advertisement -

ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಇದೀಗ ತಮ್ಮ ಐಷಾರಾಮಿ ಕಾರು ಸಂಗ್ರಹಕ್ಕೆ ಮತ್ತೊಂದು ಅದ್ಭುತ ಸೇರ್ಪಡೆ ಮಾಡಿದ್ದಾರೆ. ಈ ಬಾರಿ ಅವರು ಖರೀದಿಸಿರುವುದು ಬಿಸ್ಪೋಕ್ ರೋಲ್ಸ್ ರಾಯ್ಸ್ (Bespoke Rolls-Royce) ಇದು ಭಾರತದ ಐಕಾನಿಕ್ ಕಾರು ಯಾಕೆ? ಇದರ ಬೆಲೆ ಹಾಗೂ ವಿಶೇಷತೆಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಈ ಕಾರು ಹಾಗೂ ಭಾರತದ ಇತಿಹಾಸಕ್ಕೂ ಇರುವ ಸಂಬಂಧ ಏನು? ಗೊತ್ತಾ?

ಅನಂತ್ ಅಂಬಾನಿ ಖರೀದಿಸಿದ ಈ ಬಿಸ್ಪೋಕ್ ರೋಲ್ಸ್ ರಾಯ್ಸ್ ಕಾರಿನ ಅಂದಾಜು ಬೆಲೆ ಸುಮಾರು ₹10.50 ಕೋಟಿ ರೂಪಾಯಿ. ಭಾರತದಲ್ಲಿ ರೋಲ್ಸ್ ರಾಯ್ಸ್ ಕಂಪನಿಯ ಅನೇಕ ಮಾದರಿಗಳು ಲಭ್ಯವಿದ್ದರೂ, ಬಿಸ್ಪೋಕ್ ಮಾದರಿ ಅತ್ಯಂತ ಐಷಾರಾಮಿ ಮತ್ತು ವಿಶಿಷ್ಟವಾದದ್ದಾಗಿದೆ. ಇದು ಅತ್ಯಂತ ದುಬಾರಿ ಕಾರು ಮಾತ್ರವಲ್ಲ, ಅದು ರಾಯಲ್ ಸ್ಟೇಟಸ್‌ನ್ನು ಸೂಚಿಸುವ ಸಂಕೇತವಾಗಿದೆ.

ಅನಂತ್ ಅಂಬಾನಿ ಆಯ್ಕೆ ಮಾಡಿಕೊಂಡಿರುವ ಈ ಕಾರು ಭಾರತದ ಇತಿಹಾಸದೊಂದಿಗೆ ವಿಶೇಷ ಸಂಬಂಧ ಹೊಂದಿದೆ. 1934ರಲ್ಲಿ ರಾಜ್‌ಕೋಟ್‌ನ ಮಹಾರಾಜ ಮೊದಲ ಬಾರಿಗೆ ಭಾರತದಲ್ಲಿ ಇದೇ ಮಾದರಿಯ ಕಾರನ್ನು ಖರೀದಿಸಿದ್ದರು. ಅಂದಿನ ದಿನಗಳಲ್ಲಿ ಈ ಕಾರು ಅತ್ಯಂತ ಶ್ರೀಮಂತಿಕೆಯ ಸಂಕೇತವಾಗಿತ್ತು. ಅಂದು ರೋಲ್ಸ್ ರಾಯ್ಸ್ ಕಂಪನಿಯು ಈ ಕಾರನ್ನು ವಿಶಿಷ್ಟ ಆರೇಂಜ್ ಬಣ್ಣದಲ್ಲಿ ಬಿಡುಗಡೆ ಮಾಡಿತ್ತು.

ಅದನ್ನು “ಸ್ಟಾರ್ ಆಫ್ ಇಂಡಿಯಾ ಆರೇಂಜ್” ಎಂದು ಹೆಸರಿಸಿತ್ತು. ಈಗ ಅನಂತ್ ಅಂಬಾನಿ ಕೂಡ ಅದೇ ಬಣ್ಣದ ಕಾರನ್ನು ಆಯ್ಕೆ ಮಾಡಿಕೊಂಡು, ಇತಿಹಾಸದ ನೆನಪನ್ನು ಜೀವಂತಗೊಳಿಸಿದ್ದಾರೆ. ಬಿಸ್ಪೋಕ್ ರೋಲ್ಸ್ ರಾಯ್ಸ್ ಕಾರಿನ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಕಸ್ಟಮೈಸೇಶನ್ ಸೌಲಭ್ಯ.
ಮಾಲೀಕರ ಆಸಕ್ತಿ, ರುಚಿ ಮತ್ತು ಜೀವನಶೈಲಿಗೆ ಅನುಗುಣವಾಗಿ ಕಾರನ್ನು ಸಂಪೂರ್ಣವಾಗಿ ವಿನ್ಯಾಸಗೊಳಿಸಲಾಗುತ್ತದೆ.

ಬಣ್ಣದಿಂದ ಹಿಡಿದು ಕ್ಯಾಬಿನ್ ಇಂಟೀರಿಯರ್, ಬ್ಯಾಡ್ಜ್, ಲೆದರ್ ಸೀಟ್ ವಿನ್ಯಾಸ, ಮತ್ತು ತಂತ್ರಜ್ಞಾನ – ಎಲ್ಲವನ್ನೂ ಖಾಸಗಿ ಆಸೆಗೆ ತಕ್ಕಂತೆ ರೂಪಿಸಲಾಗುತ್ತದೆ. ಈ ಕಾರಣದಿಂದಲೇ ಬಿಸ್ಪೋಕ್ ರೋಲ್ಸ್ ರಾಯ್ಸ್ ಕಾರುಗಳನ್ನು ವಿಶ್ವದ ಅತ್ಯಂತ ವೈಯಕ್ತಿಕ ಮತ್ತು ಐಷಾರಾಮಿ ಕಾರುಗಳೆಂದು ಪರಿಗಣಿಸಲಾಗುತ್ತದೆ.

ಅನಂತ್ ಅಂಬಾನಿಯ ಹೊಸ ಬಿಸ್ಪೋಕ್ ರೋಲ್ಸ್ ರಾಯ್ಸ್ ಇದೀಗ ಮುಂಬೈನ ಬೀದಿಗಳಲ್ಲಿ ಕಾಣಿಸಿಕೊಂಡಿದೆ. ಅದರ ಆಕರ್ಷಕ ವಿನ್ಯಾಸ, ಚಕಚಕ ಬಣ್ಣ ಮತ್ತು ಅದ್ಭುತ ಇಂಟೀರಿಯರ್‌ಗಳು ಜನರ ಗಮನ ಸೆಳೆಯುತ್ತಿವೆ. ಅದ್ಭುತ ಕಾರು ಸಂಗ್ರಹಕ್ಕಾಗಿ ಪ್ರಸಿದ್ಧರಾಗಿರುವ ಅಂಬಾನಿ ಕುಟುಂಬ ಈಗ ಮತ್ತೊಂದು ಇತಿಹಾಸ ಪ್ರಸಿದ್ಧ ಮತ್ತು ರಾಜಮಟ್ಟದ ಕಾರನ್ನು ತಮ್ಮ ಗ್ಯಾರೆಜ್‌ಗೆ ಸೇರಿಸಿಕೊಂಡಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss