Friday, November 22, 2024

Latest Posts

ಕಲಬುರಗಿಯಲ್ಲಿ 24 ಗಂಟೆಗಳ ಆಹೋರಾತ್ರಿ ಧರಣಿ ಆರಂಭ

- Advertisement -

ಕಲಬುರಗಿ: ಕರ್ನಾಟಕ ಆಸ್ಮಿತೆ ರಕ್ಷಿಸಲು 24 ಗಂಟೆಗಳ ಆಹೋರಾತ್ರಿ ಧರಣಿಗೆ ಶಾಸಕ ಪ್ರಿಯಾಂಕ್ ಖರ್ಗೆ, ಡಾ. ಬಾಬಾಸಾಹೇಬ, ಅಂಬೇಡ್ಕರ ಹಾಗೂ ಬಸವೇಶ್ವರ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.

ರಾಜ್ಯ ಬಿಜೆಪಿ ಸರ್ಕಾರ ಪಠ್ಯಪುಸ್ತಕಗಳನ್ನು ಕೇಸರಿಕರಣಗೊಳಿಸಿ ಕನ್ನಡದ ಆಸ್ಮಿತೆಗೆ ಧಕ್ಕೆ ತರುತ್ತಿರುವುದಕ್ಕೆ ಕರ್ನಾಟಕ ಆಸ್ಮಿತೆ ಆಂದೋಲನ ಸಮಿತಿ ವತಿಯಿಂದ ಆಯೋಜಿಸಲಾಗಿರುವ 24 ಗಂಟೆಗಳ ಆಹೋರಾತ್ರಿ ಧರಣಿಗೆ ಜಗತ್ ಸರ್ಕಲ್ ಬಳಿಯ ಡಾ ಬಾಬಾಸಾಹೇಬ ಅಂಬೇಡ್ಕರ ಹಾಗೂ ಜಗಜ್ಯೋತಿ ಬಸವೇಶ್ವರ ಪ್ರತಿಮೆಗಳಿಗೆ ಹೂಮಾಲೆ ಹಾಕುವ ಮೂಲಕ ಮಾಜಿ ಸಚಿವರಾದ ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಹಾಜಿರಿದ್ದ ಮಹಿಳಾ ಹೋರಾಟಗಾರ್ತಿ ಕೆ. ನೀಲಾ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಕನ್ನಡ ನೆಲದ ಆಸ್ಮಿತೆಗೆ ಧಕ್ಕೆ ತಂದಿದೆ.

ಬುದ್ದ ಬಸವ ಅಂಬೇಡ್ಕರ ಜೊತೆಗೆ ಸೂಫಿ ಸಂತರ ನೆಲವಾದ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಈ ನೆಲದ ಮಹನೀಯರಿಗೆ ಅವಮಾನ ಮಾಡಿ ಐತಿಹಾಸಿಕ ಹಿನ್ನೆಲೆಗಳನ್ನು ತಿರುಚಲಾಗಿದೆ. ಈ ವ್ಯವಸ್ಥಿತಿ ಷಡ್ಯಂತ್ರದ ವಿರುದ್ದ ಬಹುದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗಿದೆ ಎಂದರು.

ಕಲ್ಯಾಣ ನೆಲದಲ್ಲಿ ಹಿಂದೂ ಮುಸ್ಲಿಂರು ಕೂಡಿ ಜೀವನ ಮಾಡುತ್ತಿದ್ದಾರೆ. ಆದರೆ ಇತ್ತೀಚಿಗೆ ಈ ನೆಲದ ಮೇಲೆ ಕೋಮುದ್ವೇಷ ಹಬ್ಬಿಸಲು ಪ್ರಯತ್ನಿಸಲಾಗುತ್ತದೆ. ಹೆಡಗೇವಾರ, ಗೋವಾಳ್ಕರ್ ಅವರಂತ ಆರ್ ಎಸ್ ಎಸ್ ನಾಯಕರ ಚಿಂತನೆಗಳನ್ನು ಈ ಸರ್ಕಾರ ಅಳವಡಿಸಲು ಪ್ರಯತ್ನಿಸುತ್ತಿದೆ. ಹಿಂಬಾಗಿಲ ಮೂಲಕ ಮನಸ್ಮೃತಿಯನ್ನು ಹೇರಲು ಪ್ರಯತ್ನಿಸಲಾಗುತ್ತಿದೆ. ಆದರೆ, ಈ ನೆಲದ ಬುದ್ದ ಬಸವ ಅಂಬೇಡ್ಕರ್ ಅವರ ಅನುಯಾಯಿ ಗಳು ಪ್ರಗತಿಪರರು, ಚಿಂತಕರು, ನಾಡಿನ ಜನರು ಸರ್ಕಾರದ ಈ ನಿರ್ಧಾರದ ವಿರುದ್ದ ಹೋರಾಡಲಿವೆ ಎಂದು ಘೋಷಿಸಿ, ಈ ಕೂಡಲೇ ಪರಿಷ್ಕರಿಸಿದ ಪಠ್ಯಪುಸ್ತಕ ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಸೋಮಶೇಖರ ಶಿವಾಚಾರ್ಯರು ಶ್ರೀ ಕಂಬಳೇಶ್ವರ ಮಠದ ಸ್ವಾಮೀಜಿ ಮಾತನಾಡಿ‌ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಆಗಿರುವ ಲೋಪಗಳನ್ನು ಸರಿಪಡಿಸಬೇಕು. ಬಸವಣ್ಣ, ಅಂಬೇಡ್ಕರ್ ಹಾಗೂ ಕುವೆಂಪು ಸೇರಿದಂತೆ ನಾಡಿನ ಮಹನೀಯರಿಗೆ ಮಾಡಿದ ಅವಹೇಳನ ಸಹಿಸಲು ಸಾಧ್ಯವಿಲ್ಲ ಎಂದರು.

ಧರಣಿಯಲ್ಲಿ ಕಲಬುರ್ಗಿ ಉತ್ತರ ಶಾಸಕರಾದ ಕನೀಜ್ ಫಾತೀಮಾ, ಮಾಜಿ ಸಚಿವರಾದ ಡಾ ಶರಣಪ್ರಕಾಶ ಪಾಟೀಲ,ಅಲ್ಲಮಪ್ರಭು ಪಾಟೀಲ, ಭೀಮಾಶಂಕರ‌ ಬಿಲಗುಂಡಿ, ನೀಲಕಂಠ ಮೂಲಗೆ, ಶಿವಾನಂದ ಪಾಟೀಲ್, ಅರುಣಕುಮಾರ ಪಾಟೀಲ, ಸಂಜಯ್ ಮಾಕಲ್ , ಮಠಾಧೀಶರು, ಕ್ರೈಸ್ತ ಧರ್ಮಗುರುಗಳು, ವಿಚಾರವಾದಿಗಳು, ಪ್ರಗತಿಪರರು, ಬರಹಗಾರರು ಹಾಗೂ ಇತರರರು ಭಾಗವಹಿಸಿದ್ದರು.

 

- Advertisement -

Latest Posts

Don't Miss