Wednesday, November 26, 2025

Latest Posts

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಾಣವೇ ಹೋಯ್ತು!

- Advertisement -

ಬೃಹತ್ ಮರ ಬಿದ್ದ ಪರಿಣಾಮ, 24 ವರ್ಷದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.

ಆರ್‌.ಟಿ. ನಗರ ನಿವಾಸಿ ಕೀರ್ತನಾ, ಆಚಾರ್ಯ ಕಾಲೇಜು ಮೈದಾನದಲ್ಲಿ ಸ್ಯಾಂಡಲ್‌ವುಡ್ ಪ್ರೀಮಿಯರ್ ಲೀಗ್ ಮ್ಯಾಚ್ ವೀಕ್ಷಣೆಗೆ ಹೋಗಿದ್ರು. ಬಳಿಕ ಸ್ನೇಹಿತೆ ಜೊತೆ ಕೀರ್ತನಾ, ಸ್ಕೂಟರ್ ಮೂಲಕ ಮನೆಗೆ ಹೋಗುತ್ತಿದ್ದಾಗ, ಏಕಾಏಕಿ ಮರ ಮುರಿದು ಬಿದ್ದಿದೆ.

ಕೀರ್ತನಾ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಸ್ನೇಹಿತೆ ಚಿಕ್ಕಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತೊಂದು ಬೈಕ್‌ನಲ್ಲಿ ಬರ್ತಿದ್ದ ಭಾಸ್ಕರ್‌ ಎಂಬಾತ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಇಬ್ಬರನ್ನೂ ಸ್ಥಳೀಯ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು, ಮರದ ಬುಡ ಹಾಳಾಗಿದ್ದರ ಬಗ್ಗೆ ಸಾರ್ವಜನಿಕರು, ಅರಣ್ಯ ಇಲಾಖೆಗೆ ದೂರನ್ನೂ ನೀಡಿದ್ರಂತೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ದುರ್ಘಟನೆ ಸಂಭವಿಸಿದೆ ಅಂತಾ, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss