Wednesday, September 17, 2025

Latest Posts

ಮಂಡ್ಯದಲ್ಲೊಬ್ಬ ‘ಭೀಮ’ – ‘ನಾನು ಬುರುಡೆ ಬಿಡಲು ಬಂದಿದ್ದೇನೆ’!

- Advertisement -

ಧರ್ಮಸ್ಥಳದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಅನಾಮಿಕ ವ್ಯಕ್ತಿಗೆ ತಿರುಗೇಟು ನೀಡುವ ಶೈಲಿಯಲ್ಲಿ, ಮುಖಕ್ಕೆ ಮಾಸ್ಕ್ ಮತ್ತು ಜರ್ಕಿನ್ ಧರಿಸಿದ ಹಿಂದುತ್ವ ಪರ ಕಾರ್ಯಕರ್ತನೊಬ್ಬ ಗುರುವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಗಮನಸೆಳೆದಿದ್ದಾನೆ.

ಈ ವ್ಯಕ್ತಿ ತನ್ನ ಕುತ್ತಿಗೆಗೆ ‘ನಾನು ಅನಾಮಿಕ ಅಂದರೆ ಭೀಮ, ನಾನು ಬುರುಡೆ ತೋರಿಸಲು ಬಂದಿಲ್ಲ, ಬುರುಡೆ ಬಿಡಲು ಬಂದಿದ್ದೇನೆ’ ಎಂಬ ಮಾತುಳ್ಳ ಫಲಕ ಧರಿಸಿ, ‘ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ’ ಎಂದು ಹೇಳಿದ ಅನಾಮಿಕ ವ್ಯಕ್ತಿಯನ್ನು ನೈಜ ಭೀಮನಂತೆ ಅಣಕಿಸುವ ಪ್ರಯತ್ನ ಮಾಡಿದರು.

ಸಂಘಟನೆಯ ಅಂಗಸಂಸ್ಥೆಗಳ ಸದಸ್ಯರೊಂದಿಗೆ ಈ ಕಾರ್ಯಕರ್ತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆಯಲಾಗಿದ್ದ ‘ರಕ್ತದ ಬೆರಳಚ್ಚಿನ ಸಹಿ’ ಹೊಂದಿದ ಪತ್ರವನ್ನು ಸಲ್ಲಿಸಿದರು. ಈ ಮೂಲಕ ಧರ್ಮಸ್ಥಳದ ಕುರಿತು ನಡೆಯುತ್ತಿರುವ ಅಪಪ್ರಚಾರವನ್ನು ವಿರೋಧಿಸಿದರು.

ಧರ್ಮಸ್ಥಳ ಹಿಂದೂಗಳ ನಂಬಿಕೆ ಮತ್ತು ಭಕ್ತಿಗೆ ಹೆಸರಾಗಿರುವ ಪವಿತ್ರ ತೀರ್ಥಕ್ಷೇತ್ರವಾಗಿದೆ. ಆದರೆ, ಇತ್ತೀಚೆಗೆ ಕೆಲ ವ್ಯಕ್ತಿಗಳು ಇದರ ಪವಿತ್ರತೆಯನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಇದರ ಹಿಂದೆ ಕೇರಳದ ಕಮ್ಯುನಿಸ್ಟ್ ಪಕ್ಷದ ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಬಿಜೆಪಿ ಮುಖಂಡ ಶಿವಕುಮಾರ್ ಆರಾಧ್ಯ ಅವರು ಆರೋಪಿಸಿದರು.

ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಧರ್ಮಸ್ಥಳ ಕುರಿತ ಘಟನೆಗಳ ಕುರಿತು NIA ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಅಲ್ಲದೇ, ಧರ್ಮಸ್ಥಳ ಮತ್ತು ಅದರ ನಂಬಿಕೆಗಳ ರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

- Advertisement -

Latest Posts

Don't Miss