Tuesday, October 15, 2024

Latest Posts

ಶಾಲೆಯಿಂದ ವೃದ್ಧಾಶ್ರಮಕ್ಕೆ ಪ್ರವಾಸಕ್ಕೆಂದು ಹೋದ ಮಗುವಿಗೆ ಕಾದಿತ್ತು ಬಿಗ್ ಶಾಕ್

- Advertisement -

National News: ನಾವು ನೀವು ಚಿಕ್ಕವರಿದ್ದಾಗ, ಶಾಲೆಯಿಂದ ಯಾವುದಾದರೂ, ಸುಂದರ ತಾಣಕ್ಕೋ, ನೀರಿರುವ ಜಾಗಕ್ಕೋ, ಅಥವಾ ದೇವಸ್ಥಾನಕ್ಕೋ ಪಿಕ್‌ನಿಕ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳಿಗೆ ಊರಲ್ಲಿರುವ ಕೆಲವು ಮುಖ್ಯವಾದ ಜಾಗಗಳಿಗೆ ಕರೆದುಕೊಂಡು ಹೋಗಿ, ಆ ಜಾಗ ಯಾವುದಕ್ಕೆ ಪ್ರಸಿದ್ಧಿ ಪಡೆದಿದೆ ಅಂತಾ ಹೇಳಿಕೊಡ್ತಾರೆ.

ಉದಾಹರಣೆಗೆ ಇಂದಿನ ಮಕ್ಕಳಿಗೆ ಪೊಲೀಸ್ ಸ್ಟೇಷನ್, ತರಕಾರಿ- ದಿನಸಿ ಮಾರ್ಟ್, ಅನಾಥಾಶ್ರಮ, ವೃದ್ಧಾಶ್ರಮ ಸೇರಿ ವಿವಿಧ ಜಾಗಗಳಿಗೆ ಕರೆದುಕೊಂಡು ಹೋಗಿ, ಆ ಜಾಗದ ಬಗ್ಗೆ ತಿಳಿಹೇಳುತ್ತಾರೆ. ಅದೇ ರೀತಿ, ಸೋಶಿಯಲ್ ಮಾಡಿಯಾದಲ್ಲಿ ಒಂದು ಫೋಟೋ ವೈರಲ್ ಆಗಿದ್ದು, ಶಾಲೆಯಿಂದ ಟ್ರಿಪ್‌ಗೆಂದು ವೃದ್ಧಾಶ್ರಮಕ್ಕೆ ಹೋಗಿದ್ದ, ಓರ್ವ ಬಾಲಕಿಗೆ ಶಾಕ್ ಕಾದಿತ್ತು.

ಏಕೆಂದರೆ, ಆ ವೃದ್ಧಾಶ್ರಮದಲ್ಲಿ ಆಕೆಯ ಅಜ್ಜಿ ಇದ್ದರು. ಆ ಅಜ್ಜಿಯನ್ನು ನೋಡಿ ಮೊಮ್ಮಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಏಕೆಂದರೆ, ಈಕೆಯ ಅಜ್ಜಿ ಕೆಲ ವರ್ಷಗಳ ಕಾಲ ಈಕೆಯ ಜೊತೆಗೆ ಇದ್ದರು. ಆದರೆ ಕೆಲ ದಿನಗಳಿಂದ ಅಜ್ಜಿ ಮನೆಯಲ್ಲಿ ಕಾಣುತ್ತಿರಲಿಲ್ಲ. ಹಾಗಾಗಿ ಅಪ್ಪ ಅಮ್ಮನಿಗೆ ಅಜ್ಜಿ ಎಲ್ಲಿ ಎಂದು ಪ್ರಶ್ನಿಸಿದ್ದಾಳೆ. ಆಗ ಅಪ್ಪ ಅಮ್ಮ, ಅಜ್ಜಿ ಸಂಬಂಧಿಕರ ಮನೆಗೆ ಹೋಗಿದ್ದಾರೆಂದು ಸುಳ್ಳು ಹೇಳಿದ್ದಾರೆ. ಅಜ್ಜಿಯೊಂದಿಗೆ ಮಾತನಾಡಬೇಕು ಎಂದಾಗ, ಬೇರೆ ಬೇರೆ ಕಾರಣ ಹೇಳಿ, ಅಜ್ಜಿಯಿಂದ ಮೊಮ್ಮಗಳನ್ನು ದೂರವಿಟ್ಟಿದ್ದಾರೆ.

ಆದರೆ ಶಾಲೆಯ ವತಿಯಿಂದ ಟ್ರಿಪ್‌ಗಾಗಿ ವೃದ್ಧಾಶ್ರಮಕ್ಕೆ ಬಂದಿದ್ದ ಮೊಮ್ಮಗಳಿಗೆ, ತನ್ನ ಅಜ್ಜಿಯನ್ನು ವೃದ್ಧಾಶ್ರಮದಲ್ಲಿ ಕಂಡು ದುಃಖ ಉಕ್ಕಳಿಸಿ ಬಂದಿತ್ತು. ಇಬ್ಬರೂ ಭೇಟಿಯಾಗಿ ತಬ್ಬಿಕೊಂಡು ಅತ್ತಿದ್ದು, ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆ ಮಗುವಿನ ತಂದೆ ತಾಯಿಯನ್ನು ಜನ ಶಪಿಸಿದ್ದಾರೆ. ಇಂಥ ಮಕ್ಕಳು ಹುಟ್ಟುವುದೇ ಬೇಡ. ತಂದೆ ತಾಯಿಗೆ ಸಾಕುವ ಯೋಗ್ಯತೆ ಇಲ್ಲದವರಿಗೆ, ಬದುಕುವ ಯೋಗ್ಯತೆ ಇಲ್ಲ. ಈ ಮಗುವೂ ಕೂಡ ನಾಾಳೆ ತನ್ನ ತಂದೆ ತಾಯಿಯನ್ನು ದೂರ ಮಾಡುವಂತಾಗಲಿ ಎಂದು ಜನ ಶಾಪ ಹಾಕಿದ್ದಾರೆ.

- Advertisement -

Latest Posts

Don't Miss