Wednesday, October 30, 2024

Latest Posts

ಮಗನ ಸಾವಿನ ಸುದ್ದಿ ಗೊತ್ತಿಲ್ಲದೇ, ಶ*ವದೊಂದಿಗೆ 4 ದಿನ ಕಳೆದ ಅಂಧ ದಂಪತಿ

- Advertisement -

Telangana News: ಸಾವು ಹೇಗೆ ಬರುತ್ತದೆ.? ಯಾವಾಗ ಬರುತ್ತದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಖುಷಿಖುಷಿಯಾಗಿ ನೃತ್ಯ ಮಾಡುತ್ತಿದ್ದ ವ್ಯಕ್ತಿ, ಕುಸಿದು ಬಿದ್ದು ಸಾವನ್ನಪ್ಪಿದ ಘಟನೆಯನ್ನು ನಾವು ನೀವು ನೋಡಿರುತ್ತೇವೆ. ವೃತ್ತಿಜೀವನದಲ್ಲಿ ನಿರತರಾಗಿ, ಸಾವನ್ನಪ್ಪಿದ ಬಗ್ಗೆ ಕೇಳಿರುತ್ತೇವೆ. ಆದರೆ ತತಮ್ಮ ಜೊತೆ ವಾಸಿಸುತ್ತಿದ್ದ ಮಗ, ಸತ್ತಿದ್ದರೂ, ಆ ಬಗ್ಗೆ ಗೊತ್ತಿಲ್ಲದೇ, ಶವದೊಂದಿಗೆ ನಾಲ್ಕು ದಿನ ಕಳೆದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ನಾಗೋಲ್‌ನಲ್ಲಿ ಈ ಘಟನೆ ನಡೆದಿದ್ದು, ಅಂಧ ದಂಪತಿಯಾದ ಕೆ.ರಮಣ ಮತ್ತು ಕೆ.ಶಾಂತಾಕುಮಾರಿ ಅವರ ಪುತ್ರ ಪ್ರಮೋದ್ ಮೃತ ದುರ್ದೈವಿಯಾಗಿದ್ದಾರೆ. ಪ್ರಮೋದ್ ನಾಲ್ಕು ದಿನಗಳ ಹಿಂದೆ ಅಪ್ಪ ಅಮ್ಮನಿಗೆ ಊಟ ಬಡಿಸಿ, ನಿದ್ದೆ ಮಾಡಿದ್ದು, ಬಳಿಕ ಏಳಲೇ ಇಲ್ಲ. ನಿದ್ದೆಯಲ್ಲೇ ಪ್ರಮೋದ್ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದ್ದು, ಇದು ಹಾರ್ಟ್ ಅಟ್ಯಾಕ್‌ನಿಂದ ಸಂಭವಿಸಿದ ಮರಣವೋ, ಆತ್ಮಹತ್ಯೆಯೋ ಎಂದು ತನಿಖೆ ಬಳಿಕ ಗೊತ್ತಾಗಬೇಕಿದೆ.

ಏಕೆಂದರೆ, ನಾಲ್ಕು ದಿನದ ಬಳಿಕ, ಅಕ್ಕಪಕ್ಕದ ಮನೆಯವರು ಮತ್ತು ಪೊಲೀಸರು ಬಂದು ಶವ ನೋಡಿದಾಗ, ಶವದ ಬಾಯಿಯಿಂದ ನೊರೆ ಬಂದಿತ್ತು. ಹಾಗಾಗಿ ಅಂಧ ಅಪ್ಪ ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿ ಇರುವ ಕಾರಣಕ್ಕೋ, ಅಥವಾ ಮುಂದಿನ ಜೀವನದ ಬಗ್ಗೆ ಯೋಚಿಸಿಯೋ, ಈ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೋ ಅಥವಾ ಹಾಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾನೋ ಅನ್ನೋದು ತನಿಖೆ ಬಳಿಕ ಗೊತ್ತಾಗಬೇಕಿದೆ.

ಇನ್ನು ಪ್ರತಿದಿನ ಅಪ್ಪ ಅಮ್ಮನಿಗೆ ಸ್ನಾನ ಮಾಡಿಸಿ, ಅಡುಗೆ ಮಾಡಿ, ಊಟ ಬಡಿಸಿ, ಕೆಲಸಕ್ಕೆ ಹೋಗುತ್ತಿದ್ದ. ಆದರೆ ಕಳೆದ ನಾಲ್ಕು ದಿನಗಳಲ್ಲಿ ಅಂಧ ತಂದೆ ತಾಯಿ ಊಟ, ಸ್ನಾನವಿಲ್ಲದೇ, ರೂಮ್‌ನಲ್ಲೇ ಕಾಲ ಕಳೆದಿದ್ದಾರೆ. ಅಕ್ಕ ಪಕ್ಕದ ಮನೆಯವರಿಗೆ ಹೆಣದ ವಾಸನೆ ಬಂದಾಗ, ಏನೆಂದು ಮನೆ ಬಾಗಿಲು ತೆಗೆದು ಬಂದಾಗ, ಪ್ರಮೋದ್ ಸಾವನ್ನಪ್ಪಿದ್ದಾನೆಂದು ಗೊತ್ತಾಗಿದೆ. ಅಲ್ಲದೇ, ಪ್ರಮೋದ್ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಸುದ್ದಿಯನ್ನು ತಂದೆ ತಾಯಿಗೆ ಹೇಳಿದಾಗ, ಅವರು ಶಾಕ್ ಆಗಿದ್ದಾರೆ. ಅವರ ಪರಿಸ್ಥಿತಿ ಹೇಗಿತ್ತೆಂದರೆ, ಅವರಿಗೆ ಎದ್ದು ನಿಲ್ಲಲು ಕಷ್ಟವಾಗುವಷ್ಟು ನಿಶ್ಶಕ್ತಿ ಇತ್ತು. ಬಳಿಕ ಅಕ್ಕಪಕ್ಕದ ಮನೆಯವರು ಅವರಿಗೆ ಸ್ನಾನ ಮಾಡಿಸಿ, ನೀರು, ಊಟ ಕೊಟ್ಟಿದ್ದಾರೆ. ಅಲ್ಲದೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ಶವಪರೀಕ್ಷೆಗೆ ಸಾಗಿಸಲಾಗಿದ್ದು, ಹಿರಿಯ ಮಗನಿಗೂ ಈ ಬಗ್ಗೆ ತಿಳಿಸಲಾಗಿದೆ.

- Advertisement -

Latest Posts

Don't Miss